Home_Page_Advt
Home_Page_Advt
Home_Page_Advt

ಕೊರೋನಾ ವೈರಾಣು ಹರಡುವಿಕೆ ತಡೆಯಲು ಆದಿತ್ಯವಾರದ ಲಾಕ್‌ಡೌನ್ | ಪುತ್ತೂರಿನಲ್ಲಿ ಉತ್ತಮ ಪ್ರತಿಕ್ರಿಯೆ – ಪೊಲೀಸರಿಂದ ಬಂದೋಬಸ್ತ್

Puttur_Advt_NewsUnder_1
Puttur_Advt_NewsUnder_1

 

  • ಅಲ್ಲಲ್ಲಿ ಬೆರಳೆಣಿಕೆ ತರಕಾರಿ, ಜಿನಸು, ಮೆಡಿಕಲ್ ಮಾಂಸದ ಅಂಗಡಿಗಳು

ಪುತ್ತೂರು: ಕೊರೊನಾ ವೈರಾಣು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಆದಿತ್ಯವಾರದ ಸಂಪೂರ್ಣ ಲಾಕ್‌ಡೌನ್‌ಗೆ ಪುತ್ತೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಕೊರೋನ ಸೋಂಕು ವ್ಯಾಪಕದ ನಡುವೆಯೂ ಲಾಕ್‌ಡೌನ್ ಸಡಿಲಿಕೆಯಿಂದಾಗಿ ಕಳೆದ ಕೆಲವು ದಿನಗಳಿಂದ ಮೇ ೨೩ರ ಸಂಜೆಯ ತನಕ ಜನಸಂಚಾರ, ವಾಹನ ವಾಹನಗಳ ಸಂಚಾರದಿಂದ ತುಂಬಿದ್ದ ರಸ್ತೆಗಳು ಮೇ 24ರಂದು ಬಿಕೋ ಎನ್ನುತ್ತಿವೆ. ಪೇಟೆಯಲ್ಲಿ ಬಂದ್‌ನ ವಾತಾರವಣವಿದ್ದು, ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ. ಅಲ್ಲಲ್ಲಿ ಚೆಕ್ ಪಾಯಿಂಟ್‌ಗಳನ್ನು ಹಾಕಲಾಗಿದ್ದರಿಂದ ಪೊಲೀಸರು ಅನಗತ್ಯ ಸಂಚಾರದ ವಾಹನಗಳನ್ನು ತಡೆಯುತ್ತಿರುವುದು ಕಂಡು ಬಂತು. ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಎಲ್ಲಾ ಚೆಕ್‌ಪಾಯಿಂಟ್‌ಗಳ ಪರಿಶೀಲನೆ ನಡೆಯುತ್ತಿದೆ.

ಲಾಕ್‌ಡೌನ್ ನಡೆವೆ ಸರಳವಾದ ಈದುಲ್ ಫಿತ್ರ್
ಕೊರೋನಾ ಲಾಕ್‌ಡೌನ್ ಹಿನ್ನೆಲೆ ಮತ್ತು ಸರಕಾರದ ಆದೇಶದ ಮೇರೆಗೆ ಮುಸಲ್ಮಾರು ಅತ್ಯಂತ ಸರಳವಾಗಿ ಈದುಲ್ ಫಿತ್ರ್ ಹಬ್ಬ ಆಚರಿಸಿದರು. ಎಲ್ಲರು ಮನೆಯಲ್ಲೇ ಇದ್ದುಕೊಂಡು ಈದ್ ನಮಾಝ್ ಮಾಡಿ ಅತ್ಯಂತರ ಸರಳವಾಗಿ ಹಬ್ಬ ಆಚರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.