Home_Page_Advt
Home_Page_Advt
Home_Page_Advt

ಮೇ.25: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 12ನೇ ಶಾಖೆ ಬೊಳುವಾರು ಮಹಾವೀರ್ ಮ್ಹಾಲ್ ನಲ್ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಸಹಕಾರಿ ಧುರೀಣ ಸವಣೂರು ಕೆ.ಸೀತಾರಾಮ ರೈಯವರಿಂದ ಸ್ಥಾಪಿಸಲ್ಪಟ್ಟ, ದರ್ಬೆ ಪ್ರಶಾಂತ್ ಮಹಲ್ ನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ೧೨ನೇ ಶಾಖೆ ಬೊಳುವಾರು ಮಹಾವೀರ ಆಸ್ಪತ್ರೆಯ ಎದುರುಗಡೆ ಮಹಾವೀರ್ ಮ್ಹಾಲ್ ನಲ್ಲಿ ಮೇ 25ರಂದು ಶುಭಾರಂಭಗೊಳ್ಳಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಶಾಸಕ ಸಂಜೀವ ಮಠಂದೂರು ಅವರು ಸಾಂಕೇತಿಕವಾಗಿ ದೀಪ ಬೆಳಗಿಸಿ ಶಾಖೆಯ ವ್ಯವಹಾರ ಕ್ಕೆ ಚಾಲನೆ ನೀಡಲಿದ್ದಾರೆ. ಉದ್ಯಮಿ ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಮಹಾವೀರ ಮೆಡಿಕಲ್ ಸೆಂಟರ್ ನ ಆಡಳಿತ ನಿರ್ದೇಶಕ ಡಾ. ಅಶೋಕ್ ಪಡಿವಾಳ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರ ಸಭಾ ಸದಸ್ಯ ಜಗನ್ನಿವಾಸ್ ರಾವ್ ಪಿ.ಜಿ. ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರುವರು ಎಂದು ಪ್ರಕಟಣೆ ತಿಳಿಸಿದೆ.
11 ಶಾಖೆಗಳು: ಸಂಘವು ಜಿಲ್ಲೆಯ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ಹೊಂದಿದ್ದು, ದರ್ಬೆ ಪ್ರಶಾಂತ್ ಮಹಲ್, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಸಾಲೆತ್ತೂರು, ಕಡಬ, ಸವಣೂರು, ಕುಂಬ್ರ, ಬೆಳ್ಳಾರೆ ಹಾಗೂ ಪಂಜದಲ್ಲಿ ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ೧೨ನೇ ಶಾಖೆ ಬೊಳುವಾರಿನಲ್ಲಿ ಪ್ರಾರಂಭಗೊಳ್ಳಲಿದೆ.
ಸಂಘದಲ್ಲಿ ೬೨೭೧ ಸದಸ್ಯರಿದ್ದು, ರೂ.೨.೧೩ಕೋಟಿ ಪಾಲು ಬಂಡವಾಳ ಇದೆ. ಪ್ರಸ್ತುತ‌ ಸಂಘವು ರೂ. ೭೦.೦೧ಕೋಟಿ ಠೇವಣಿ ಹೊಂದಿದ್ದು, ರೂ. ೫೯.೨೧ ಕೋಟಿ ಸಾಲ ವಿತರಿಸಲಾಗಿದೆ. 
ವಿದ್ಯಾ ನಿಧಿ: ಪ್ರತಿ ವರ್ಷ ಸಂಘದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳಲ್ಲಿ ಓದುವ ೬ ನೇ ತರಗತಿಯಿಂದ ೧೦ನೇ ತರಗತಿಯ ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾ ನಿಧಿ ಸಹಾಯಧನ ವಿತರಿಸುತ್ತಿದ್ದು, ಈ ತನಕ ೭೩೫ ವಿದ್ಯಾರ್ಥಿಗಳಿಗೆ ರೂ. ೧೩,೦೯,೦೦೦ ವಿತರಿಸಲಾಗಿದೆ.
ಸಭಾ ಕಾರ್ಯಕ್ರಮ ಇಲ್ಲ, ಬ್ಯಾಂಕಿಂಗ್ ವ್ಯವಹಾರ ಮೇ.26ರಿಂದ ಆರಂಭ
ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಸಭಾ ಕಾರ್ಯಕ್ರಮ ಇರುವುದಿಲ್ಲ. ಶಾಸಕರು ದೀಪ ಬೆಳಗಿಸಿ  ಸಾಂಕೇತಿಕವಾಗಿ ಬೊಳುವಾರು ಶಾಖೆಯ ಚಟುವಟಿಕೆ ಗಳಿಗೆ ಚಾಲನೆ ನೀಡಲಿದ್ದಾರೆ. ಮೇ ೨೬ರಿಂದ ಶಾಖೆಯಲ್ಲಿ ಎಲ್ಲಾ ಬ್ಯಾಂಕಿಂಗ್ ವ್ಯವಹಾರಗಳು ಪ್ರಾರಂಭಗೊಳ್ಳಲಿದೆ. ಲಾಕ್ ಡೌನ್ ನಿಯಮದಂತೆ ಸಂಘಕ್ಕೆ ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಬೇಕು – ಸವಣೂರು ಕೆ.ಸೀತಾರಾಮ ರೈ ಸ್ಥಾಪಕಾಧ್ಯಕ್ಷರು, ಆದರ್ಶ ವಿವಿಧೋದ್ದೇಶ ಸಹಕಾರ‌ ಸಂಘ 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.