Home_Page_Advt
Home_Page_Advt
Home_Page_Advt

ಮಾಡನ್ನೂರಿನಲ್ಲಿ ಸರಳ ಈದುಲ್ ಫಿತರ್ ಆಚರಣೆ

Puttur_Advt_NewsUnder_1
Puttur_Advt_NewsUnder_1

ಇಸ್ಲಾಮಿನ ಹಬ್ಬಾಚರಣೆ ಆರೋಗ್ಯಪೂರ್ಣ ವ್ಯಕ್ತಿಗತ ಮತ್ತು ಸಾಮಾಜಿಕ ಜೀವನಕ್ಕೆ ಪೂರಕ – ಖತೀಬ್ ಸಿರಾಜುದ್ದೀನ್ ಫೈಝಿ

ಮಾಡನ್ನೂರು: ಪವಿತ್ರ ರಂಝಾನಿನ ಸಮಾರೋಪವಾಗಿ ಬರುವ ಈದ್-ಉಲ್-ಫಿತರ್ ಆಚರಣೆಯನ್ನು ಮಾಡನ್ನೂರಿನಲ್ಲಿ ಕರೋನಾ ಲಾಕ್ಡೌನ್ ಹಿನ್ನೆಲೆ ಮತ್ತು ಸರ್ಕಾರದ ಆದೇಶದ ಮೇರೆಗೆ ಖಾಝಿಗಳ ಕರೆಯಂತೆ ಸರಳವಾಗಿ ಆಚರಿಸಲಾಯಿತು. ಸಾಮೂಹಿಕ ನಮಾಝಿಗೆ ಮಸೀದಿಯಲ್ಲಿ ನಿರ್ಬಂಧವಿದ್ದ ಕಾರಣ ಖತೀಬರಾದ ಸಿರಾಜುದ್ದೀನ್ ಫೈಝಿ ಮತ್ತು ನಾಲ್ಕು ಮಂದಿ ಸಿಬ್ಬಂದಿಗಳು ಮಾತ್ರ ಮಸೀದಿಯಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ನಿರ್ವಹಿಸಿದರೆ ಮೊಹಲ್ಲಾ ನಿವಾಸಿಗಳೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಈದ್ ನಮಾಝ್ ನಿರ್ವಹಿಸಿದರು.

ಸರ್ವರಿಗೂ ಹಬ್ಬದ ಶುಭಕೋರಿ ಮಾತನಾಡಿದ ಸ್ಥಳೀಯ ಖತೀಬರು ಪವಿತ್ರ ಆಚರಣೆಯು ಸೃಷ್ಟಿಕರ್ತನಿಗೆ ಕೃತಜ್ಞತೆಗಳನ್ನು ಸಲ್ಲಿಸುವ ದಿನವಾಗಿದ್ದು ಸಂಭ್ರಮ ಸಂತೋಷಗಳನ್ನು ನೀಡಿದ ಅಲ್ಲಾಹನೇ ಸಂಕಷ್ಟಗಳಿಂದ ಪಾರು ಮಾಡುವವನಾಗಿದ್ದಾನೆ. ಧರ್ಮದ ಆಚರಣೆಗಳೆಲ್ಲಾ ಆರಾಧನೆಗಳಾಗಿದ್ದು ಹಬ್ಬಗಳಲ್ಲಿ ಯಾವುದೇ ವ್ಯರ್ಥ ಅಥವಾ ನಿರರ್ಥಕ ಚಟುವಟಿಕೆಗಳಿಲ್ಲ. ಅತಿರೇಕವೂ ಇಲ್ಲ. ಅದರ ಎಲ್ಲಾ ಆಚರಣೆಗಳು ಆರೋಗ್ಯಪೂರ್ಣ ವ್ಯಕ್ತಿಗತ ಮತ್ತು ಸಾಮಾಜಿಕ ಜೀವನಕ್ಕೆ ಪೂರಕವಾಗಿರುತ್ತವೆಯೇ ಹೊರತು ಮಾರಕ ವಾಗಿರುವುದಿಲ್ಲ. ಕೊರೋನಾದ ಸಂಕಷ್ಟದಿಂದ ನಮ್ಮೆಲ್ಲರನ್ನು ಅಲ್ಲಾಹನು ಪಾರುಮಾಡಲಿ ಎಂದು ಪ್ರಾರ್ಥಿಸಿದರು.

ನೂರುಲ್ ಹುದಾ ಅಧ್ಯಕ್ಷರಿಂದ ಹಬ್ಬದ ಶುಭಾಶಯ: ಈದ್ ನಮಾಝನ್ನು ತನ್ನ ಕುಟುಂಬಸ್ಥರೊಂದಿಗೆ ತನ್ನ ಮನೆಯಲ್ಲಿ ನಿರ್ವಹಿಸಿದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ರವರು ಮನೆಯಿಂದಲೇ ಹಬ್ಬದ ಶುಭಾಶಯ ಕೋರಿದರು. ತ್ಯಾಗ ಪೂರ್ಣವಾದ ತಿಂಗಳೊಂದನ್ನು ಸಹನೆಯಿಂದ ಅಲ್ಲಾಹನಿಗಾಗಿ ವ್ಯಯಿಸಿ ಸಂಭ್ರಮದ ಈದುಲ್ ಫಿತ್ರ್ ನ ಆಡಂಬರವನ್ನು ತ್ಯಾಗ ಮಾಡಿ ಮಹಾಮಾರಿ ಕೋವಿಡ್ ೧೯ ನಿಯಂತ್ರಣಕ್ಕೆ ಹಬ್ಬದಲ್ಲಿ ಸರಳತೆ ಪಾಲಿಸಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಮಾಡನ್ನೂರು ಮಸೀದಿ ಅಧ್ಯಕ್ಷರಿಂದ ಶುಭಾಶಯ: ಈದ್ ಉಲ್ ಫಿತರ್ ಭ್ರಾತೃತ್ವ ಸಂಸ್ಕೃತಿಯ ಪ್ರತೀಕವಾಗಿದ್ದು, ಐಕ್ಯತೆಯ ಬಾಳ್ವೆಯಿಂದ ನೆಮ್ಮದಿ ಕಾಣಲು ಸಾಧ್ಯ. ಇದ್ದುದ್ದರಲ್ಲಿ ತೃಪ್ತಿಪಟ್ಟುಕೊಂಡು ಜೀವಿಸಲು ಹಬ್ಬಗಳು ಸಂದೇಶ ನೀಡುತ್ತವೆ. ಪ್ರಸ್ತುತ ಲಾಕ್ಡೌನ್ ಕಾಲದ ಈದ್ ಆಚರಣೆಯು ಕೊರೋನಾ ಸಂಕಷ್ಟದಿಂದ ಪಾರಾಗಲು ನಡೆಸುವ ಐಕ್ಯತೆಯ ಹೋರಾಟದಲ್ಲಿ ವಿಶ್ವ ಜನತೆಯು ವಿಜಯ ಹೊಂದಲಿ ಎಂದು ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಹಾರೈಸಿದರು. ಮಾಡನ್ನೂರು ಮೊಹಲ್ಲಾದ ಹೆಚ್ಚಿನ ಮನೆಯವರಲ್ಲಿ ಧಾರ್ಮಿಕ ಗುರುಗಳು, ಹಾಗೂ ಧಾರ್ಮಿಕ ವಿದ್ಯಾರ್ಥಿಗಳೇ ಆಗಿದ್ದುದರಿಂದ ಈದ್ ನಮಾಝ್ ಹಾಗೂ ಇತರ ಆರಾಧನಾ ಕರ್ಮಗಳನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಿ ವಿಶೇಷ ಪ್ರಾರ್ಥನೆ ನಡೆಸಿದರು. ಮೊಹಲ್ಲಾ ವ್ಯಾಪ್ತಿಯಲ್ಲಿ ಸರಳ ಈದ್ ಆಚರಣೆಗೆ ಸಹಕರಿಸಿದ ಮೊಹಲ್ಲಾ ನಿವಾಸಿಗಳಿಗೆ ಹಾಗೂ ಲಾಕ್ಡೌನ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕಿಟ್ ವಿತರಣೆಗೆ ಸಹಕರಿಸಿದ ಸರ್ವ ಉದಾರ ದಾನಿಗಳಿಗೆ ಮತ್ತು ಊರಿನ ಯುವ ಸಂಘಟನೆಯಾದ ಖುವ್ವತುಲ್ ಇಸ್ಲಾಂ ಅಸೋಸಿಯೇಷನ್, ಶಂಸುಲ್ ಉಲಮ ಕಲ್ಚರಲ್ ಸೆಂಟರ್ ಸಮಿತಿಗಳಿಗೆ ಮಸೀದಿ ಪ್ರಧಾನ ಕಾರ್ಯದರ್ಶಿ ಸಿ.ಎಚ್. ಅಬ್ದುಲ್ ಅಜೀಜ್ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.