Home_Page_Advt
Home_Page_Advt
Home_Page_Advt

ಬ್ಯೂಟಿಪಾರ್ಲರ್ ಸಂದರ್ಶಿಸುವ ಗ್ರಾಹಕರಿಗೆ ಕೆಲವು ಮಾನದಂಡಗಳು-ಅಸೋಸಿಯೇಶನ್ ಅನ್‌ಲೈನ್ ಸಭೆಯಲ್ಲಿ ನಿರ್ಧಾರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನದ ವಿರುದ್ಧ ಹೋರಾಡುವ ಜೊತೆಯಲ್ಲಿ ಕೊರೋನದ ಜತೆಯಲ್ಲಿ ಬದುಕುವುದನ್ನು ರೂಢಿಸಿಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿರುವುದರಿಂದ ಬ್ಯೂಟಿಪಾರ್ಲರ್‌ಗೆ ಬರುವ ಗ್ರಾಹಕರಿಗೆ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಲೇಡಿಸ್ ಬ್ಯೂಟಿಪಾರ್ಲರ್ ಅಸೋಸಿಯೇಶನ್‌ನ ಸಭೆಯಲ್ಲಿ ನಿರ್ಧರಿಸಲಾಗಿದೆ. ದ.ಕ ಜಿಲ್ಲಾ ಲೇಡಿಸ್ ಬ್ಯೂಟಿಪಾರ್ಲರ್ ಅಸೋಸಿಯೇಶನ್‌ಗೆ ಒಳಪಟ್ಟಿರುವ ಪುತ್ತೂರು ಘಟಕ(ವಿಟ್ಲ,ಉಪ್ಪಿನಂಗಡಿ)ದ ಪದಾಧಿಕಾರಿಗಳು ಆನ್‌ಲೈನ್ ಮೂಲಕ ಸಭೆ ನಡೆಸಿ ಗ್ರಾಹಕರ ಮತ್ತು ಸಮಾಜದ ಹಿತರಕ್ಷಣೆಯ ದೃಷ್ಟಿಯಿಂದ ಬ್ಯೂಟಿಪಾರ್ಲರ್‌ಗೆ ಆಗಮಿಸುವ ಗ್ರಾಹಕರಿಗೆ ಕೆಲವು ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂದರ್ಬಿಕ ಚಿತ್ರ

ಗ್ರಾಹಕರ ಗಮನಕ್ಕೆ
ಬ್ಯೂಟಪಾರ್ಲರ್‌ಗೆ ಆಗಮಿಸುವ ಗ್ರಾಹಕರು ಸರಕಾರದ ಸುರಕ್ಷತಾ ಮಾನದಂಡಗಳ ಅನ್ವಯ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಗ್ರಾಹಕರು ತಮ್ಮ ಮೊಬೈಲ್ ನಂಬರ್, ವಿಳಾಸ ಹಾಗೆ ಆಧಾರ್ ನಂಬರ್ (ಆಧಾರ್ ಫೋಟೋ ಕಾಪಿ ಮೊಬೈಲ್‌ನಲ್ಲಿರಲಿ) ನೀಡುವುದು ಕಡ್ಡಾಯವಾಗಿರುತ್ತದೆ. ಶೀತ, ಕೆಮ್ಮು, ನೆಗಡಿ ಇಂತಹ ಯಾವುದೇ ರೋಗ ಲಕ್ಷಣಗಳಿರುವ ಗ್ರಾಹಕರು ಸುರಕ್ಷತೆಯ ದೃಷ್ಟಿಯಿಂದ ಬ್ಯೂಟಿಪಾರ್ಲರಿಗೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಕೈಗೆ ಗ್ಲೌಸ್ ಧರಿಸಿದರೆ ಉತ್ತಮ, ಮುಂಗಡ ಬುಕ್ಕಿಂಗ್ ತೆಗೆದುಕೊಂಡ ಬಳಿಕವೇ ಬ್ಯೂಟಿಪಾರ್ಲರ್‌ಗೆ ಸಂದರ್ಶಿಸುವುದು ಒಳಿತು. ಸ್ನೇಹಿತರು ಕುಟುಂಬ ಸದಸ್ಯರೊಂದಿಗೆ ಗುಂಪಾಗಿ ಬರುವಂತಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಫೇಶಿಯಲ್, ಹೇರ್‌ಕಟ್ಟಿಂಗ್, ವ್ಯಾಕ್ಸಿಂಗ್ ಸಮಯದಲ್ಲಿ ಬಳಸುವ ಟವಲ್‌ಗಳನ್ನು ಗ್ರಾಹಕರೇ ತರತಕ್ಕದ್ದು, ಹಣಪಾವತಿಸುವ ಸಂದರ್ಭದಲ್ಲಿ ಆನ್‌ಲೈನ್ ಪೇಮೆಂಟ್‌ಗೆ ಮೊದಲ ಆದ್ಯತೆ ನೀಡಲಾಗುವುದು.

ಸಮಯ ಬದಲಾವಣೆ
ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಪಾರ್ಲರ್‌ನ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿರುವುದು ಅನಿವಾರ್‍ಯವಾಗಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ಘಟಕವು ಬ್ಯೂಟಿಪಾರ್ಲರ್ ಕಾರ್ಯಚರಿಸುವ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿಕೊಂಡಿದ್ದು ಪುತ್ತೂರು ಘಟಕಕ್ಕೆ ಒಳಪಟ್ಟಿರುವ ಎಲ್ಲಾ ಬ್ಯೂಟಿಪಾರ್ಲರ್‌ಗಳು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೇಗೆ ಕೆಲಸ ನಿರ್ವಹಿಸಲಿದೆ.ಪ್ರತಿ ಭಾನುವಾರ ರಜಾ ದಿನವಾಗಿರುತ್ತದೆ ಎಂದು ಬ್ಯೂಟಿಪಾರ್ಲರ್‌ನ ಮಾಲಕಿಯರು ಆನ್‌ಲೈನ್ ಸಭೆಯಲ್ಲಿ ತಮ್ಮ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಹಕರು ಸಹಕಾರ ನೀಡುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.