Home_Page_Advt
Home_Page_Advt
Home_Page_Advt

ನಿಡ್ಪಳ್ಳಿ: ಲಾಕ್‌ಡೌನ್ ಉಲ್ಲಂಘಿಸಿ ಕೋಳಿ ಅಂಕ  : ಸಂಪ್ಯ ಪೊಲೀಸರ ದಾಳಿ – ಇಬ್ಬರ ಬಂಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಹಣವನ್ನು ಪಣವನ್ನಾಗಿರಿಸಿ ಕೋಳಿ ಅಂಕ ನಡೆಸುತ್ತಿದ್ದ ನಿಡ್ಪಳ್ಳಿ ಗ್ರಾಮದ ಕುಂತಿಮೂಲೆ ಗುಡ್ಡೆಗೆ ಮೇ 24ರಂದು ಸಂಪ್ಯ ಎಸ್.ಐ ಉದಯರವಿ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ನಗದು, ಎರಡು ಕೋಳಿ ಮತ್ತು ಸ್ಥಳದಲ್ಲಿದ್ದ ೭7ಬೈಕ್‌ಗಳು ವಶಕ್ಕೆ ಪಡೆದು ಕೊಂಡಿದ್ದಾರೆ. ಪೊಲೀಸರ ದಾಳಿ ವೇಳೆ 8 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ನಿಡ್ಪಳ್ಳಿ ಗ್ರಾಮದ ಕುಂತಿಮೂಲೆ ಸರಕಾರಿ ಗುಡ್ಡೆಯಲ್ಲಿ ಕೂಳಿ ಅಂಕ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ವೇಳೆ ಕೋಳಿ ಅಂಕದಲ್ಲಿ ನಿರತರಾಗಿದ್ದ ನಿಡ್ಪಳ್ಳಿ, ಕಾವು ಮತ್ತು ಇರ್ದೆ ನಿವಾಸಿಗಳಾದ ಜಗದೀಶ್, ಶೇಷಪ್ಪ ಗೌಡ, ಚನಿಯ, ವಿಶ್ವ, ಶಂಕರ, ಚನಿಯಪ್ಪ, ಭಾಸ್ಕರ, ಯತೀಶ್ ತಲೆಮರೆಸಿಕೊಂಡಿದ್ದು ಅವರ ಪೈಕಿ ರೋಹಿತ್ ಮತ್ತು ಚಂದ್ರಶೇಖರ್ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತರಿಂದ ಕೋಳಿ ಅಂಕಕ್ಕೆ ಇಟ್ಟ ರೂ. 700 ನಗದು, ಎರಡು ಹೂಂಜ ಕೋಳಿಗಳು ಮತ್ತು ಸ್ಥಳದಲ್ಲಿದ್ದ 7 ಬೈಕ್‌ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.