Home_Page_Advt
Home_Page_Advt
Home_Page_Advt

ಪುತ್ತೂರಿನಿಂದ ಜಾರ್‌ಖಂಡ್‌ಗೆ 97 ಮಂದಿ ಪ್ರಯಾಣಿಕರು: ಪುತ್ತೂರಿನಿಂದ ಬಸ್‌ನಲ್ಲಿ, ಮಂಗಳೂರಿನಿಂದ ಶ್ರಮಿಕ್ ರೈಲ್‌ನಲ್ಲಿ ಉಚಿತ ಪ್ರಯಾಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರು ಉಚಿತವಾಗಿ ಮನೆ ಸೇರಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ ಬೆನ್ನಲ್ಲೇ ಮೇ 23ಕ್ಕೆ ಇಲಾಖೆಗಳಿಗೆ ಬಂದ ಸುತ್ತೋಲೆಯಂತೆ ಶ್ರಮಿಕ್ ರೈಲ್‌ನಲ್ಲಿ ಸ್ವಗ್ರಾಮಗಳಿಗೆ ತೆರಳಲು ಅವಕಾಶಕ್ಕೆ ಸಂಬಂಧಿಸಿ ಮೇ 25ರಂದು ಪುತ್ತೂರು, ಸುಳ್ಯ, ಕಡಬ ಸೇರಿ ಒಟ್ಟು 97 ಮಂದಿ ಕಾರ್ಮಿಕರನ್ನು ಜಾರ್‌ಖಂಡ್‌ಗೆ ಕಳುಹಿಸಿಕೊಡಲಾಯಿತು.

ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ 97 ಮಂದಿ ಕಾರ್ಮಿಕರನ್ನು ಮಂಗಳೂರು ರೈಲು ನಿಲ್ದಾಣಕ್ಕೆ ನಾಲ್ಕು ಕೆ.ಎಸ್.ಆರ.ಟಿ.ಸಿ ಬಸ್‌ಗಳಲ್ಲಿ ಕಳುಹಿಸಿಕೊಡಲಾಯಿತು. ಮಂಗಳೂರಿನಿಂದ ಶ್ರಮಿಕ್ ರೈಲು ಮೂಲಕ ಕಾರ್ಮಿಕರು ಜಾರ್‌ಖಂಡ್‌ಗೆ ತೆರಳಿದರು. ಬಸ್ ಮತ್ತು ರೈಲು ಪ್ರಯಾಣವನ್ನು ಸರಕಾರ ಭರಿಸಲಿದ್ದು, ಕಾರ್ಮಿಕರಿಗೆ ಇದೊಂದು ಉಚಿತ ಪ್ರಯಾಣವಾಗಿದೆ.

ಕಾರ್ಮಿಕರಿಗೆ ಸ್ಕ್ರೀನಿಂಗ್:
ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ಕಾರ್ಮಿಕರನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ಸ್ಕ್ರೀನಿಂಗ್ ನಡೆಸಿ ದಾಖಲಿಸಿಕೊಂಡರು. ಕಾರ್ಮಿಕರ ವಿಳಾಸ, ಮೊಬೈಲ್ ನಂಬರ್ ಮತ್ತು ಹೋಗುವ ಊರಿನ ವಿವರನ್ನು ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ದಾಖಲಿಸಲಾಯಿತು. ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್, ಕಂದಾಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೇ 23ಕ್ಕೆ ಬಂದ ಹೊಸ ಸುತ್ತೋಲೆಯಂತೆ ಹೊರ ರಾಜ್ಯಕ್ಕೆ ತೆರಳುವ ವಲಸೆ ಕಾರ್ಮಿಕರಿಗೆ ಉಚಿತವಾಗಿ ಕೆ.ಎಸ್.ಆರ್.ಟಿ.ಸಿ ಮತ್ತು ರೈಲ್ವೇ ಶುಲ್ಕವನ್ನು ವ್ಯವಸ್ಥೆ ಕಲ್ಪಿಸಲಾಗಿದೆ. ಸರಕಾರವೇ ನೇರವಾಗಿ ಹಣ ಪಾವತಿ ಮಾಡುತ್ತದೆ. ಪ್ರಯಾಣಿಕರು ಈ ಉಪಯೋಗವನ್ನು ಬಳಸಿಕೊಳ್ಳುವಂತೆ ವಿನಂತಿ – ರಮೇಶ್ ಬಾಬು, ತಹಶೀಲ್ದಾರ್ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.