Home_Page_Advt
Home_Page_Advt
Home_Page_Advt

ರಾಜ್ಯ ಸರಕಾರದಿಂದ ಆಟೋ ಚಾಲಕರಿಗೆ ಸಿಗುವ ನೆರವು | ಆನ್‌ಲೈನ್‌ನಲ್ಲಿ ಉಚಿತ ಅರ್ಜಿ ಸಲ್ಲಿಕೆಗೆ ಎಸ್.ಡಿ.ಪಿ.ಐ ಸೇವಾ ಕೇಂದ್ರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ೫ ಸಾವಿರ ರೂ. ನೆರವು ನೀಡುವ ಕುರಿತು ಆಟೋ ರಿಕ್ಷಾ ಚಾಲಕರಿಗೆ ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಸ್.ಡಿ.ಟಿ.ಯು ನೆರವಿಗೆ ಮುಂದಾಗಿದ್ದು, ಮೇ ೨೫ರಂದು ಇಲ್ಲಿನ ಎಪಿಎಂಸಿ ರಸ್ತೆಯಲ್ಲಿನ ಹಿಂದೂಸ್ತಾನ್ ಕಟ್ಟಡದಲ್ಲಿನ ಎಸ್‌ಡಿಪಿಐ ಕಚೇರಿಯಲ್ಲಿ ಸೇವಾ ಕೇಂದ್ರ ಉದ್ಘಾಟನೆಗೊಂಡಿತ್ತು.

ಸೇವಾ ಕೇಂದ್ರವು ಎಸ್.ಡಿ.ಟಿ.ಯು ಸಂಘದ ಮೂಲಕ ಆಟೋ ರಿಕ್ಷಾ ಚಾಲಕರಿಗೆ ಆನ್‌ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಲು ನಾಲ್ಕು ದಿನಗಳ ಕಾರ್ಯಾಗಾರ ನಡೆಯಲಿದೆ. ಎಸ್.ಡಿ.ಟಿ.ಯು ತಾಲೂಕು ಅಧ್ಯಕ್ಷ ಹಮೀದ್ ಸಾಲ್ಮರ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿದ್ದೀಕ್ ಕೆ.ಎ, ಕಾರ್ಯದರ್ಶಿ ಅಶ್ರಫ್ ಬಾವು, ಎಸ್‌ಡಿಟಿಯು ತಾಲೂಕು ಕಾರ್ಯದರ್ಶಿ ಉಮ್ಮರ್ ಕೂರ್ನಡ್ಕ, ಎಸ್.ಡಿ.ಎ.ಸಿ.ಯು ತಾಲೂಕು ಅಧ್ಯಕ್ಷ ಶಮೀರ್ ನಾಜೂಕ್, ಪ್ರಧಾನ ಕಾರ್ಯದರ್ಶಿ ಆಸೀಫ್ ಮುಕ್ವೆ, ಅಶ್ರಫ್ ಪರ್ಲಡ್ಕ, ಬಾತಿಶ್ ಬಡಕೋಡಿ, ಉಮ್ಮರ್ ಸಂಪ್ಯ, ಆಸೀಫ್ ಬಡಕೋಡಿ ಹಲವಾರು ಮಂದಿ ಉಪಸ್ಥಿತರಿದ್ದರು.

ರಿಕ್ಷಾ ಚಾಲಕರು ಸದುಪಯೋಗ ಪಡೆಯಿರಿ:

ಆಟೋ ರಿಕ್ಷಾ ಚಾಲಕರು ಸ್ಥಿತಿವಂತರಲ್ಲ. ಅವರೆಲ್ಲಾ ಬಡವರು ಮೊದಲೇ ಬಾಡಿಗೆ ಇಲ್ಲದೆ ಸಂಕಷ್ಟದಲ್ಲಿರುವ ಚಾಲಕರಿಗೆ ಸರಕಾರದ ನೆರವು ಪಡೆಯಲು ಅರ್ಜಿ ಸಲ್ಲಿಸಲು ಮತ್ತೆ ಹಣ ಪಾವತಿ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅರ್ಜಿಗಾಗಿ ಹಣ ಪಾವತಿ ಮಾಡುವ ಬದಲು ಅದನ್ನು ಉಚಿತವಾಗಿ ಎಸ್‌ಡಿಪಿ ವತಿಯಿಂದ ಎಸ್‌ಡಿಟಿಯು ಸಂಘದ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಲಾಗುತ್ತದೆ. ರಿಕ್ಷಾ ಚಾಲಕರು ಇದನ್ನು ಸದುಪಯೋಗ ಪಡೆಯುವಂತೆ ವಿನಂತಿ. – ಹಮೀದ್ ಸಾಲ್ಮರ, ಅಧ್ಯಕ್ಷರು ಎಸ್.ಡಿ.ಟಿ.ಯು ಪುತ್ತೂರು

ರಿಕ್ಷಾ ಚಾಲಕರು ಸದುಪಯೋಗ ಪಡೆಯಿರಿ:
ಆಟೋ ರಿಕ್ಷಾ ಚಾಲಕರು ಸ್ಥಿತಿವಂತರಲ್ಲ. ಅವರೆಲ್ಲಾ ಬಡವರು ಮೊದಲೇ ಬಾಡಿಗೆ ಇಲ್ಲದೆ ಸಂಕಷ್ಟದಲ್ಲಿರುವ ಚಾಲಕರಿಗೆ ಸರಕಾರದ ನೆರವು ಪಡೆಯಲು ಅರ್ಜಿ ಸಲ್ಲಿಸಲು ಮತ್ತೆ ಹಣ ಪಾವತಿ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅರ್ಜಿಗಾಗಿ ಹಣ ಪಾವತಿ ಮಾಡುವ ಬದಲು ಅದನ್ನು ಉಚಿತವಾಗಿ ಎಸ್‌ಡಿಪಿ ವತಿಯಿಂದ ಎಸ್‌ಡಿಟಿಯು ಸಂಘದ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಲಾಗುತ್ತದೆ. ರಿಕ್ಷಾ ಚಾಲಕರು ಇದನ್ನು ಸದುಪಯೋಗ ಪಡೆಯುವಂತೆ ವಿನಂತಿ – ಹಮೀದ್ ಸಾಲ್ಮರ, ಅಧ್ಯಕ್ಷರು ಎಸ್.ಡಿ.ಟಿ.ಯು ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.