Home_Page_Advt
Home_Page_Advt
Home_Page_Advt

2020-21ನೇ ಸಾಲಿನ 15ನೇ ಹಣಕಾಸು ಯೋಜನೆ ಅನುದಾನಕ್ಕೆ ಕ್ರಿಯಾಯೋಜನೆ | ಅನುದಾನದ ಶೇ.50 ರಷ್ಟು ಕುಡಿಯುವ ನೀರು, ಸ್ವಚ್ಛತೆ ಬಳಕೆಗೆ ಕಡ್ಡಾಯ ವಿನಿಯೋಗ

Puttur_Advt_NewsUnder_1
Puttur_Advt_NewsUnder_1

ವಿಶೇಷ ಸಾಮಾನ್ಯ ಸಭೆಯಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್

ಪುತ್ತೂರು: 15ನೇ ಹಣಕಾಸು ಯೋಜನೆಯ ಅನುದಾನಕ್ಕೆ 2020-21ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಕುರಿತು ಈಗಾಗಲೇ ರಾಜ್ಯಕ್ಕೆ ರೂ.3217 ಕೋಟಿ ಅನುದಾನ ಬಂದಿದ್ದು, ಅನುದಾನದಲ್ಲಿ ಪುತ್ತೂರು ತಾ.ಪಂಗೆ 1.13 ಕೋಟಿ ಅನುದಾನ ಮಂಜೂರುಗೊಂಡಿದ್ದು, ಅನುದಾನದ ಬಳಕೆಯಲ್ಲಿ ಶೇ.50ರಷ್ಟು ಅನುದಾನವನ್ನು ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಮೀಸಲಿಡುವಂತೆ ಕಡ್ಡಾಯಗೊಳಿಸಲಾಗಿದೆ ಎಂದು ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಹೇಳಿದರು.

ಮೇ 27ರಂದು ತಾ.ಪಂ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನುದಾನಕ್ಕೆ ಸಂಬಂಧಿಸಿ ಕ್ರಿಯಾಯೋಜನೆ ತಯಾರಿಸಲು ಮಾರ್ಗಸೂಚಿಗಳನ್ನು ರಾಜ್ಯ ಸರಕಾರ ಸಚಿವಾಲಯ ಆಯಾ ತಾ.ಪಂಗಳಿಗೆ ಕಳುಹಿಸಿದ್ದು ಅನುದಾನ ಬಳಕೆಗೆ ಕೆಲವೊಂದು ಮಾರ್ಗಸೂಚಿಗಳನ್ನು ಆಯೋಗ ನೀಡಿದ್ದು, ಅದರ ಪ್ರಕಾರವೇ ಅನುದಾನ ಬಳಕೆ ಮಾಡಬೇಕಾಗಿದೆ ಎಂದ ಅವರು ಶೇ.೫೦ರಷ್ಟು ನಿಗದಿಪಡಿಸಲಾಗಿರುವಂತಹ ನಿರ್ಬಂಧಿತ ಅನುದಾನವನ್ನು ಗ್ರಾಮಾಂತರ ಪ್ರದೇಶದ ನೈರ್ಮಲ್ಯಕರಣ ಸೇವೆಗಳನ್ನು ಉತ್ತಪಡಿಸಲು ಮತ್ತು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸುಸ್ಥಿರತೆ ಕಾಯ್ದುಕೊಳ್ಳಲು, ಗ್ರಾಮಾಂತರ ಪ್ರದೇಶದ ಕುಡಿಯುವ ನೀರಿನ ಸರಬರಾಜು, ಮಳೆ ನೀರು ಕೊಯ್ಲು ಮತ್ತು ನೀರು ಮರು ಬಳಕೆಗೆ ಸಂಬಂಧಿಸಿದಂತಹ ಕೆಲಸ ಕಾರ್ಯಗಳಿಗೆ ಬಳಕೆ ಮಾಡತಕ್ಕದ್ದು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ೧೯೯೩ರ ಪ್ರಕಾರ ಶೇ.೨೫ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸರಿಸಲಾಗುತ್ತದೆ ಎಂದರು.


ಪ್ಲಾನ್ ಪ್ಲಸ್ ತಂತ್ರಾಂಶದಲ್ಲಿ ಕಡ್ಡಾಯ ದಾಖಲಾತಿ
ಗ್ರಾ.ಪಂ ವ್ಯಾಪ್ತಿಯಲ್ಲಿ ಕೈಗೊಳ್ಳುವ ಎಲ್ಲಾ ಕಾಮಗಾರಿಗಳು ಗ್ರಾ.ಪಂ ಸಭೆಗಳಲ್ಲಿ ಆಯ್ಕೆ ಮಾಡಿ ಗ್ರಾ.ಪಂ ಪ್ಲಾನ್ ಪ್ಲಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲೆ ಮಾಡಬೇಕಾಗುತ್ತದೆ. ಏನು ಮಾರ್ಗಸೂಚಿಗಳನ್ನು ನೀಡಿದೆಯೋ ಅದರಂತೆ ಸಾಫ್ಟ್‌ವೇರ್‌ಗಳಲ್ಲಿ ಅಪ್‌ಲೋಡ್ ಮಾಡಬೇಕು. ಮಾರ್ಗಸೂಚಿಗಳನ್ನು ಬಿಟ್ಟು ಬೇರೆ ಕಾಮಗಾರಿಗಳಿಗೆ ಉಪಯೋಗಿಸಿದಲ್ಲಿ ಸಾಫ್ಟ್‌ವೇರ್ ಅದನನು ತೆಗೆದು ಕೊಳ್ಳುವುದಿಲ್ಲ ಎಂಬ ಕುರಿತು ಎಲ್ಲರ ಗಮನದಲ್ಲಿ ಇರಬೇಕು. ಸದಸ್ಯರು ಕೊಟ್ಟ ಎಲ್ಲಾ ಕಾಮಗಾರಿಗಳನ್ನು ಸಂಬಂಧಪಟ್ಟ ಗ್ರಾ.ಪಂಗಳಿಗೆ ಕಳುಹಿಸಿಕೊಟ್ಟು. ಅವರ ಜಿಪಿಡಿಪಿ ಲಾಗಿನ್ ಮಾಡಲಾಗುತ್ತದೆ. ಈ ಭಾರಿ ಕಡ್ಡಾಯವಾಗಿ ಜಿ.ಪಂ, ತಾ.ಪಂ, ಗ್ರಾ.ಪಂ ಮೂಲಕವೇ ಕಾಮಗಾರಿ ಅನುಷ್ಠಾನ ಗೊಳ್ಳಲಿದೆ ಎಂದು ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ತಿಳಿಸಿದರು. ವೇದಿಕೆಯಲ್ಲಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು. ಸದಸ್ಯರಾದ ರಾಮ ಪಾಂಬಾರು, ಶಿವರಂಜನ್, ಪರಮೇಶ್ವರ ಭಂಡಾರಿ, ಸುಜಾತ ಕೃಷ್ಣ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಪೌಝೀಯ, ಮೀನಾಕ್ಷಿ ಮಂಜುನಾಥ್, ಭವಾನಿ ಚಿದಾನಂದ್, ದಿವ್ಯಾ ಪುರುಷೋತ್ತಮ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವೀಡಿಯೋ ವೀಕ್ಷಣೆಗಾಗಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.