Home_Page_Advt
Home_Page_Advt
Home_Page_Advt

ಪ್ರಧಾನಿ ಘೋಷಣೆ ಮಾಡಿದ ಪ್ಯಾಕೇಜು ಕನ್ನಡಿಯೊಳಗಿನ ಗಂಟು | ರೈತ ಸಂಘ, ಹಸಿರು ಸೇನೆ ಪ್ರತಿಭಟನೆಯಲ್ಲಿ ರವಿಕಿರಣ್ ಪುಣಚ 

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾದಿಂದ ಜೀವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಲಾಕ್‌ಡೌನ್‌ನಿಂದ ಬದುಕನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿದ್ದು, ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರು, ಕೃಷಿ ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಕಸುಬುದಾರರ ಬೇಡಿಕೆಗಳನ್ನು ಸರಕಾರ ತಕ್ಷಣವೇ ಈಡೇರಿಸುವ ಕಾರ್ಯವನ್ನು ಮಾಡಬೇಕಾಗಿತ್ತು. ಆದರೆ ಪ್ರಧಾನಿ ಘೋಷಣೆ ಮಾಡಿದ ಪ್ಯಾಕೇಜು ಕನ್ನಡಿಯೊಳಗಿನ ಗಂಟಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಆರೋಪಿಸಿದ್ದಾರೆ.


ಇಲ್ಲಿನ ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ಮೇ 27ರಂದು ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿಯವರು ಮಾಡಿರುವ ರೂ. ೨೦ಲಕ್ಷ ಕೋಟಿ ಘೋಷಣೆಯು ಕನ್ನಡಿಯೊಳಗಿನ ಗಂಟಾಗಿದ್ದು, ಇದರಿಂದ ರೈತರು, ಕಾಮಿ೯ಕರಿಗೆ ಯಾವುದೇ ಪ್ರಯೋಜನವಿಲ್ಲ. ಪ್ರಧಾನಿ ಸತ್ಯವನ್ನೇ ಹೇಳಬೇಕು. ಸುಳ್ಳು ಹೇಳುವ ಕೆಲಸ ಮಾಡಬಾರದು. ಇದು ನಮ್ಮ ಎಚ್ಚರಿಕೆಯಾಗಿದೆ. ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರು ಸತ್ಯ ಮತ್ತು ನ್ಯಾಯವನ್ನು ನಂಬುವವರಾಗಿದ್ದೆವೆ ಈ ನಿಟ್ಟಿನಲ್ಲಿ ಎಲ್ಲವು ಸತ್ಯವಾಗಿಬೇಕು ಎಂದ ಅವರು ನಾವು ಕೃಷಿ ಕೂಲಿ ಕಾರ್ಮಿಕರ, ಇತರ ಕಾರ್ಮಿಕರನ್ನು ಸೇರಿಸಿ ಒಟ್ಟು ೨೦ ಅಂಶಗಳ ಒತ್ತಾಯ ಪತ್ರವನ್ನು ಪ್ರಧಾನಿಯವರಿಗೆ ಪುತ್ತೂರು ಸಹಾಯಕ ಕಮೀಷನರ್ ಮೂಲಕ ನೀಡಲಿದ್ದೇವೆ ಎಂದ ಅವರು ಇದು ನಮ್ಮ ಬೇಡಿಕೆ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೇಡಿಕೆ ಕೊಡಲು ಬಯಸುವುದಿಲ್ಲ. ಇಲ್ಲಿ ಯಾವ ರಾಜರು ಇಲ್ಲ. ಯಾವ ಗುಲಮರು ಇಲ್ಲ. ದೇಶದ ಪ್ರತಿನಿಧಿಗಳಾಗಿ ನಾವು ಸಾಮಾನ್ಯ ಜನರಿದ್ದೇವೆ. ಹಾಗಾಗಿ ನಮ್ಮ ಒತ್ತಾಯವನ್ನು ಸರಕಾರಕ್ಕೆ ಕೊಡುತ್ತಿದ್ದೇವೆ ಎಂದರು.
ಒತ್ತಾಯದ 20 ಅಂಶಗಳು:
ರೈತ ವಿರೋಧಿಯಾದ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿ ಸುಗ್ರೀವಾಜ್ಞೆ ಮೂಲಕ ಸರ್ಕಾರ ಕೂಡಲೇ ಕಾಯ್ದೆ ಅಂಗೀಕಾರ ಮಾಡಬೇಕು ಎಂದು ಒತ್ತಾಯಿಸುವ ಕ್ರಮವನ್ನು ಕೈಬಿಡಬೇಕು. ಬಿಪಿಎಲ್, ಎಪಿಎಲ್ ತಾರತಮ್ಯವಿಲ್ಲದೆ ಪ್ರತಿ ಕುಟುಂಬಕ್ಕೂ ಕನಿಷ್ಠ ಒಂದು ವರ್ಷ ತಲಾ ೧೫ ಕಿಲೋ ರೇಶನ್ ಅಕ್ಕಿ ನೀಡಬೇಕು. ಕೇರಳ ಮಾದರಿಯಂತೆ ಅಕ್ಕಿಯ ಜೊತೆಗೆ ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಇತ್ಯಾದಿ ಆವಶ್ಯಕ ೧೬ ಸಾಮಾಗ್ರಿಗಳನ್ನು ನೀಡಬೇಕು. ರೈತ, ಕೃಷಿಕೂಲಿ ಕಾರ್ಮಿಕ ಮತ್ತು ಸ್ತ್ರಿ ಶಕ್ತಿ ಗುಂಪುಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಲಾಕ್‌ಡೌನ್ ಅವಧಿಯ ಪ್ರತಿ ತಿಂಗಳು ರೂ. ೧೦ ಸಾವಿರ ಪ್ರತಿ ಕುಟುಂಬಕ್ಕೆ ನೀಡಬೇಕು. ಪಿಎಂ ಕಿಸಾನ್ ಯೋಜನೆಯ ಮೊತ್ತವನ್ನು ರೂ.೧೮ ಸಾವಿರಕ್ಕೆ ಹೆಚ್ಚಿಸಬೇಕು. ಮುಂಗಾರು ಹಿನ್ನಲೆಯಲ್ಲಿ ರ‍್ಯತ ಕೂಲಿ ಕಾರ್ಮಿಕರಿಗೆ ಹೊಸ ಸಾಲ ಕೂಡಲೇ ನೀಡಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಎಲ್ಲಾ ಕೃಷಿ ಉತ್ಪನ್ನಗಳನ್ನು ಸರಕಾರ ಖರೀದಿ ಮಾಡಬೇಕು.
ಲಾಕ್‌ಡೌನ್ ಹಿನ್ನಲೆಯಲ್ಲಿ ಬೆಳೆ ನಷ್ಟಕ್ಕೆ ಪೂರ್ಣ ಪರಿಹಾರ ನೀಡಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಿನ್ನಲೆಯಲ್ಲಿ ಡಿಸೇಲ್ ಬೆಲೆಯನ್ನು ಲೀಟರ್‌ಗೆ ರೂ.೨೨ಕ್ಕೆ ಇಳಿಸಬೇಕು. ವಲಸೆ ಕಾರ್ಮಿಕರನ್ನು ಉಚಿತ ಪ್ರಯಾಣ ವ್ಯವಸ್ಥೆಯೊಂದಿಗೆ ಅವರ ಸ್ವಂತ ಊರುಗಳಿಗೆ ಕಳುಹಿಸಬೇಕು. ಲಾಕ್‌ಡೌನ್ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಕನಿಷ್ಠ ರೂ. ೫ ಲಕ್ಷ ಪರಿಹಾರ ನೀಡಬೇಕು ಮತ್ತಿತರ ಬೇಡಿಕೆಗಳನ್ನು ಅವರು ಸರಕಾರದ ಮುಂದಿಟ್ಟು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಜಿಲ್ಲಾ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ತುಂಬೆ, ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ, ಆಲ್ವಿನ್ ಮಿನಎಜಸ್ ಗಂಟಲ್‌ಕಟ್ಟೆ, ಶ್ರೀನಿವಾಸ ಗೌಡ ನಿಡಿಂಜಿ, ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ. ಭಟ್ ಮತ್ತಿತರರು ಉಪಸ್ಥಿತರಿದ್ದರು.

 

ವೀಡಿಯೋ ವೀಕ್ಷಣೆಗಾಗಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.