Home_Page_Advt
Home_Page_Advt
Home_Page_Advt

ಕೋವಿಡ್-19 ಜಾಗೃತಿ ಹಿನ್ನೆಲೆ: ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಶೈಕ್ಷಣಿಕ ಸಲಹೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ 2020-21ನೇ ಶೈಕ್ಷಣಿಕ ವರ್ಷದ ಆರಂಭವು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯವು ಈಗಾಗಲೇ “ಪರ್ಯಾಯ ಶಿಕ್ಷಣ ಯೋಜನೆ”ಯ ಚಿಂತನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದಿಂದ ಪೂರಕ ಸ್ಪಂದನೆ ವ್ಯಕ್ತವಾದ ಬೆನ್ನಲ್ಲೇ “ಪಾಳಿ ಶಿಕ್ಷಣ ಪದ್ಧತಿ”ಗೆ ಅನ್ವಯಿಸಿದಂತೆ ಅದರ ಸಾಧಕ ಬಾಧಕಗಳ ತುಲನೆಯೊಂದಿಗೆ ಮತ್ತೆ ಕೆಲವು ಶೈಕ್ಷಣಿಕ ಸಲಹೆಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ರಾಜ್ಯ ಸರ್ಕಾರದ ಶಿಕ್ಷಣ ಸಚಿವರಿಗೆ ನೀಡಿದೆ.

1) ತರಗತಿ ಕೋಣೆಯನ್ನು ರೋಗ ಮುಕ್ತಗೊಳಿಸುವುದು:
ಪಾಳಿ ಪದ್ಧತಿಯಲ್ಲಿ ಪೂರ್ವಾಹ್ನದ ಅವಧಿ ಮತ್ತು ಅಪರಾಹ್ನದ ಅವಧಿಯಲ್ಲಿ ತರಗತಿ ನಡೆಸುವುದು ರೋಗ ಹರಡದಂತೆ ನಿಯಂತ್ರಿಸುವಲ್ಲಿ ಉತ್ತಮ ಪದ್ಧತಿಯಾಗಿದೆ. ಆದರೆ ಈ ಎರಡು ಅವಧಿಗಳ ನಡುವೆ ಸಮಯದ ಅಂತರ ಸ್ವಲ್ಪ ಹೆಚ್ಚಿದ್ದರೆ ಉತ್ತಮ. ಯಾಕೆಂದರೆ ಪೂರ್ವಾಹ್ನದ ಅವಧಿ ಮುಗಿದ ಕೂಡಲೇ ಆ ತರಗತಿಯ ಸ್ವಚ್ಛತೆ ಹಾಗೂ ನೈರ್ಮಲೀಕರಣಕ್ಕೆ ಹೆಚ್ಚು ಒತ್ತುಕೊಟ್ಟು ತದ ನಂತರದಲ್ಲಿ ಅಪರಾಹ್ನದ ಅವಧಿಯನ್ನು ಆರಂಭಿಸಿದಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸಲು ಅನುಕೂಲವಾಗಲಿದೆ.
2) ಅತೀ ಅಪಾಯದ ಸಮೂಹವನ್ನು ದೂರವಿರಿಸುವುದು:
ಸರ್ಕಾರದ ಮಾರ್ಗದರ್ಶನದಂತೆ ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಾಗೂ ೬೦ ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಈ ವೈರಸ್ ಹೆಚ್ಚು ಅಪಾಯಕಾರಿಯಾದ ಕಾರಣ ೪ನೇ ತರಗತಿಯವರೆಗಿನ ಮಕ್ಕಳು ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣದಿಂದ/ಕಲಿಕೆಯಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದಅವರಿಗೆ ಮನೆಯಲ್ಲಿಯೇ ಶಿಕ್ಷಣ ಸಿಗುವಂತೆ ವ್ಯವಸ್ಥೆಯನ್ನು ಕಲ್ಪಿಸಬೇಕು. ಇದಕ್ಕಾಗಿ “ದೂರಶಿಕ್ಷಣದ ಪದ್ಧತಿ”ಯನ್ನು ಸಹ ಅಳವಡಿಸಿಕೊಳ್ಳಬಹುದು. ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿ ಈ ವಿಷಯದಲ್ಲಿ ಚರ್ಚೆ ನಡೆಸಿ, ನಿರ್ಧಾರ ತೆಗೆದುಕೊಳ್ಳುವಂತಿದ್ದರೆ ಉತ್ತಮ.
3) ಪರ್ಯಾಯ ದಿನಗಳಲ್ಲಿ ತರಗತಿ ನಡೆಸುವುದು:
ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದು ಈ ಹಿಂದಿನಂತೆ ಸಾಂಪ್ರದಾಯಿಕ ಶೈಲಿಯಲ್ಲಿ ತರಗತಿಗಳು ಆರಂಭವಾಗುವವರೆಗೆ ಪರ್ಯಾಯ ದಿನಗಳಲ್ಲಿ ತರಗತಿಯನ್ನು ನಡೆಸುವುದು ಉತ್ತಮ. ಅದಲ್ಲದೆ ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಪುಸ್ತಕದಲ್ಲಿನ ಪಾಠಗಳನ್ನು ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿದ್ದಲ್ಲಿ ವಿದ್ಯಾರ್ಥಿಗಳಿಗೆ ಒತ್ತಡವನ್ನು ನಿವಾರಿಸಿಕೊಳ್ಳಲು ಈ ಪದ್ಥತಿಯಲ್ಲಿ ಸಾಧ್ಯವಾಗುತ್ತದೆ.
4) ರೋಗಾಣು ಸರಪಳಿಯ ಕೊಂಡಿ ಕಳಚುವುದು:
ಕೊರೊನಾ ವೈರಸ್ ಸಮುದಾಯದಲ್ಲಿ ಹರಡುವುದನ್ನು ತಡೆಯಲು ನಿರ್ದಿಷ್ಟ ತರಗತಿಗಳಿಗೆ/ವಿಭಾಗಗಳಿಗೆ ನಿರಂತರವಾಗಿ ೨ ವಾರಗಳ ಕಾಲ ತರಗತಿಯನ್ನು ನಡೆಸುವುದು. ಅಂದರೆ ಮೊದಲ ೨ ವಾರ ಕಿರಿಯ ಪ್ರಾಥಮಿಕವಾದರೆ, ನಂತರದ ೨ ವಾರ ಹಿರಿಯ ಪ್ರಾಥಮಿಕ ಹಾಗೂ ಆ ನಂತರದ ೨ ವಾರ ಪ್ರೌಢ ಶಾಲೆಗೆ. ಈ ರೀತಿ ತರಗತಿಗಳನ್ನು ನಡೆಸಿದಲ್ಲಿ ಮೊದಲಿಗೆ ಸೋಂಕು ಹರಡುವುದನ್ನು ತಡೆಯಬಹುದು ಅಥವಾ ಯಾರಿಗಾದರೂ ಸೋಂಕು ತಗಲಿದ್ದಲ್ಲಿ ಇತರ ವಿದ್ಯಾರ್ಥಿಗಳಿಗೆ ಸೋಂಕು ಬಾಧಿಸದಂತೆ ತಡೆಯಬಹುದಾಗಿದೆ.
5) ಗ್ರಾಮೀಣ ವಿದ್ಯಾರ್ಥಿಗಳಿಗೆ ಬೆಳಗಿನ ಪಾಳಿ:
ಗ್ರಾಮೀಣ ಪರಿಸರದ ಕೆಲವು ವಿದ್ಯಾರ್ಥಿಗಳಿಗೆ ಬೆಳಿಗ್ಗೆ ೮ ಘಂಟೆಗಿಂತ ಮೊದಲು ಶಾಲೆಗೆ ತಲುಪುವುದು ಕಷ್ಟ ಸಾಧ್ಯವಾಗಬಹುದು. ಹಾಗಾಗಿ ಬೆಳಗ್ಗಿನ ಈ ಪಾಳಿ ವ್ಯವಸ್ಥೆಗೆ ಪರ್ಯಾಯವಾಗಿ ಬೇರೆ ಯಾವುದೇ ವ್ಯವಸ್ಥೆ ಇಲ್ಲದ ಪಕ್ಷದಲ್ಲಿ ಕ್ರಮದಲ್ಲಿ ಹೆಚ್ಚು ಬೆಳೆದಿರುವ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಪಾಳಿಯಲ್ಲಿ ತರಗತಿ ನಡೆಸುವ ಮೂಲಕ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ನಿವಾರಿಸಬಹುದು.
ಮೊದಲಾದ ಸಲಹೆಗಳನ್ನು ಸಲ್ಲಿಸಿರುವ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ಎ. ನಾಯಕ್ ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಹಿತ ಕಾಪಾಡಲು ಸರ್ಕಾರ ಶ್ರಮಿಸುತ್ತಿರುವುದಕ್ಕೆ ಪೂರಕವಾಗಿ ಸಮಷ್ಠಿಹಿತ ದೃಷ್ಠಿಯಲ್ಲಿ ಸರ್ಕಾರಕ್ಕೆ ಸಲಹೆ ನೀಡಿರುವುದಾಗಿದೆ ಎಂದು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.