Home_Page_Advt
Home_Page_Advt
Home_Page_Advt

ಕೃಷಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ನಷ್ಟವುಂಟು ಮಾಡಿದ ಪ್ರಕರಣ | ಆರೋಪಿಗೆ ನಿರೀಕ್ಷಣಾ ಜಾಮೀನು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೃಷಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ನಷ್ಟವುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು  ಮಂಜೂರು ಮಾಡಿದೆ. ಕೆದಿಲ ಗಾಣದಕೊಟ್ಯ ನಿವಾಸಿ ಚಂದು ಮೂಲ್ಯ ಎಂಬವರ ಕೃಷಿ ಜಾಗಕ್ಕೆ ಅವರ ಸಹೋದರ ಡೊಂಬಯ್ಯ ಮೂಲ್ಯ ಎಂಬವರು ಅಕ್ರಮವಾಗಿ ಪ್ರವೇಶಿಸಿ ಕೃಷಿ ಜಾಗದಲ್ಲಿದ್ದ ಬಾಳೆ ಗಿಡ, ಅಡಿಕೆ ಗಿಡವನ್ನು ಕಡಿದು ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಚಂದು ಮೂಲ್ಯ ತನ್ನ ಸಹೋದರ ಡೊಂಬಯ್ಯ ಮೂಲ್ಯ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಚಂದು ಮೂಲ್ಯ ಅವರ ವಿರುದ್ಧ ಕೃಷಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ನಷ್ಟ ಉಂಟು ಮಾಡಿದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿ ಚಂದು ಮೂಲ್ಯ ಅವರು ಜಾಮೀನು ಕೋರಿ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಆನ್‌ಲೈನ್‌ನಲ್ಲಿ ಜಾಮೀನು ಅರ್ಜಿ:
ಆರೋಪಿ ಚಂದು ಮೂಲ್ಯ ಅವರ ಪರವಾಗಿ ವಕೀಲರಾದ ಶಂಭು ಭಟ್ ಮತ್ತು ಅರುಣಾ ಗಣಪತಿ ಅವರು ಮಂಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಆನ್‌ಲೈನ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯವು ಜಾಮೀನು ಅರ್ಜಿಯನ್ನು ಪುತ್ತೂರು ಪ್ರಧಾನ ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಎಮ್ ನ್ಯಾಯಾಲಯಕ್ಕೆ ವರ್ಗವಣೆಗೊಳಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.