Home_Page_Advt
Home_Page_Advt
Home_Page_Advt

ಕೊರೋನಾ ಮುನ್ನೆಚ್ಚರಿಕೆ: ಪೊಲೀಸ್ ಠಾಣೆಗೂ ದಿಗ್ಬಂಧನ ! – ಆದರೆ ಇದು ಸೀಲ್ ಡೌನ್ ಅಲ್ಲ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ದಿನೇ ದಿನೇ ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ವೈರಸ್ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯ ಮಾಸ್ಕ್ ಧರಿಸುವುದು ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಕೊರೋನಾ ವಿಟ್ಲ ಪೊಲೀಸ್ ಠಾಣೆಗೂ ವಕ್ಕರಿಸಿದ್ದ ನಿಟ್ಟಿನಲ್ಲಿ ಪುತ್ತೂರು, ಸಂಪ್ಯ, ಉಪ್ಪಿನಂಗಡಿ ಸೇರಿದಂತೆ ಉಳಿದ ಪೊಲೀಸ್ ಠಾಣೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ಠಾಣೆಯ ಎದುರಿನ ಜಗುಲಿಯಲ್ಲೇ ಸಾರ್ವಜನಿಕರಿಂದ ದೂರು ಸ್ವೀಕರಿಸುವ ಕಾರ್ಯ ನಡೆಸಲಾಗುತ್ತಿದ್ದು, ಸಾರ್ವಜನಿಕರು ಠಾಣೆಗೆ ಮುಗಿ ಬೀಳದಂತೆ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ.ನೋಡುವವರ ಕಣ್ಣಿಗೆ ಇದೊಂದು ರೀತಿ ಸೀಲ್‌ಡೌನ್ ಮಾಡಿದಂತೆ ಕಾಣುತ್ತಿದ್ದು ಜನ ಹುಬ್ಬೇರಿಸುವಂತಾಗಿದೆ.
ಕೊರೋನಾ ವೈರಸ್‌ನಿಂದ ಠಾಣೆಯನ್ನು ರಕ್ಷಿಸುವ ಉದ್ದೇಶವಿಟ್ಟುಕೊಂಡ ಪೊಲೀಸರು ಠಾಣೆಯ ಎದುರಿನ ಜಗುಲಿಯ ಸುತ್ತು ಬ್ಯಾರಿಕೇಡ್ ಅಳವಡಿಸಿ, ಒಂದು ಭಾಗದಲ್ಲಿ ಮಾತ್ರ ಒಳಪ್ರವೇಶಕ್ಕೆ ಅವಕಾಶ ನೀಡಿದ್ದು, ಠಾಣೆಗೆ ಬರುವ ವ್ಯಕ್ತಿ ಜಗುಲಿಯಲ್ಲಿ ಟೇಬಲ್ ಹಾಕಿ ಕುಳಿತಿರುವ ಸಂದರ್ಶಕರನ್ನು ಭೇಟಿ ಮಾಡಿ ಅವರಲ್ಲಿ ತಮ್ಮ ದೂರು, ವಿಚಾರಗಳನ್ನು ತಿಳಿಸಬೇಕು. ವ್ಯಕ್ತಿಗೆ ಅಷ್ಟೂ ಅಗತ್ಯವಿದ್ದಲ್ಲಿ ಠಾಣಾಧಿಕಾರಿಯವರ ಸಂಪರ್ಕಿಸಲು ಠಾಣೆಯ ಮೆಟ್ಟಲೇರಬಹುದು.ಅದಕ್ಕೂ ಮೊದಲು ಸ್ಯಾನಿಟೈಸರ್‌ನಲ್ಲಿ ವ್ಯಕ್ತಿ ತನ್ನ ಕೈ ಸ್ವಚ್ಛಗೊಳಿಸಬೇಕು ಎಂಬುದು ರೂಲ್ಸ್. ಈ ಹಿಂದೆಯೂ ಠಾಣೆಗೆ ಬರುವ ವ್ಯಕ್ತಿಗಳಿಗೆ ಠಾಣೆಯ ಹೊರಗಡೆ ಅಳವಡಿಸಲಾಗಿದ್ದ ನೀರು, ಸೋಪಿನಿಂದ ಕೈ ಮುಖ ಕಾಲು ತೊಳೆದು ಒಳ ಪ್ರವೇಶಿಸಬೇಕು ಎಂದು ಸೂಚನಾ ಫಲಕ ಅಳವಡಿಸಲಾಗಿತ್ತಾದರೂ ಇದನ್ನು ಬಹುತೇಕ ಮಂದಿ ಸಿಬಂದಿಗಳೇ ಅನುಸರಿಸುತ್ತಿದ್ದರು ಹೊರತು ಹೆಚ್ಚಿನ ಸಾರ್ವಜನಿಕರು ಇದನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಇದೀಗ ಬ್ಯಾರಿಕೇಡ್ ಅಳವಡಿಸಿದ ಬಳಿಕ ಸಾರ್ವಜನಿಕರು ಕಡ್ಡಾಯವಾಗಿ ತಮ್ಮ ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಯೇ ಠಾಣೆಯ ಮೆಟ್ಟಲೇರಬೇಕು.
ಕ್ವಾರಂಟೈನ್‌ನಲ್ಲಿದ್ದ ಸಿಬಂದಿಗಳು ಕರ್ತವ್ಯಕ್ಕೆ:
ಗಡಿ ಭಾಗದ ಚೆಕ್‌ಪೋಸ್ಟ್, ಕ್ವಾರಂಟೈನ್ ವಸತಿ ಗೃಹದಲ್ಲಿರುವ ಮಾಹಿತಿ ಪಡೆಯುತ್ತಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಕೆಲವೊಂದು ಸಿಬಂದಿಗಳು ಕ್ವಾರಂಟೈನ್‌ನಲ್ಲಿದ್ದು ಇವರಲ್ಲಿ ಹೆಚ್ಚಿನವರಿಗೆ ಕೊರೋನಾ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.ಇದರ ಜೊತೆಗೆ ಕರ್ತವ್ಯದಲ್ಲಿರುವ ಎಲ್ಲಾ ಪೊಲೀಸ್ ಸಿಬಂದಿಗಳು ಪ್ರತಿ ವಾರ ತಮ್ಮ ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳುವುದು ಅಗತ್ಯ ಎಂದು ಇಲಾಖೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.