Home_Page_Advt
Home_Page_Advt
Home_Page_Advt

ಕಡಬ ಗ್ರಾ. ಪಂ. ಇಂದಿನಿಂದ (ಮೇ.28) ಪಟ್ಟಣ ಪಂಚಾಯತ್ | ಸರಕಾರದಿಂದ ಅಧಿಕೃತ ಆದೇಶ-ಮುಖ್ಯಾಧಿಕಾರಿ ನೇಮಕಕ್ಕೆ ಕ್ಷಣಗಣನೆ

Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ಕೋಡಿಂಬಾಳ ಗ್ರಾಮಗಳನ್ನು ಒಳಗೊಂಡ ಕಡಬ ಗ್ರಾಮ ಪಂಚಾಯತ್‌ನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೇಗೇರಿಸಿ ಸರಕಾರ ಮೇ.27ರಂದು ಅಧಿಕೃತ ಆದೇಶ ಹೊರಡಿಸಿದೆ, ಈ ಹಿನ್ನಲೆಯಲ್ಲಿ ಕಡಬ ಪಟ್ಟಣ ಪಂಚಾಯತ್‌ಗೆ ಮುಖ್ಯಾಧಿಕಾರಿ ನೇಮಕಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.


ಕಡಬ, ಕೋಡಿಂಬಾಳ ಗ್ರಾಮದಲ್ಲಿ ಒಟ್ಟು ೯೫೪೬ ಜನಸಂಖ್ಯೆ ಇದ್ದು ೧೮.೭೦ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಮೇ 27ರಂದು ಸರಕಾರದ ಮುಖ್ಯ ಕಾರ‍್ಯದರ್ಶಿ ಕಡಬ ಪಟ್ಟಣ ಪಂಚಾಯತ್ ಎಂದು ಅಧಿಕೃತ ಆದೇಶ ಮಾಡಿ, ಮುಖ್ಯಾಧಿಕಾರಿ ನೇಮಕಕ್ಕೆ ಆದೇಶ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಯಾವುದೇ ಕ್ಷಣದಲ್ಲಿ ಹೊಸ ಮುಖ್ಯಾಧಿಕಾರಿ ನೇಮಕ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಡಬ ತಾಲೂಕು ಘೋಷಣೆ ಆದ ಬಳಿಕ ಕಡಬ ಪಟ್ಟಣ ಪಂಚಾಯತ್ ಆಗಿ ಮಾಡಬೇಕೆಂಬ ಪ್ರಸ್ತಾವನೆಗಳನ್ನು ಕಳುಹಿಸಲಾಗಿ ಕಡಬ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿ ಘೋಷಣೆ ಆಗಿತ್ತು, ಇದೀಗ ಮುಖ್ಯಾಧಿಕಾರಿ ನೇಮಕಕ್ಕೆ ಅಧಿಕೃತ ಆದೇಶ ಬಂದಿದೆ.
ಕಡಬ ಗ್ರಾಮ ಪಂಚಾಯತ್ ಅವಧಿ ಮುಕ್ತಾಯ: ಕಡಬ ಗ್ರಾಮ ಪಂಚಾಯತ್ ಆಡಳಿತದ ಅವಧಿ ಜೂ.೪ಕ್ಕೆ ಮುಕ್ತಾಯವಾಗಲಿದ್ದು, ಇದೀಗ ಪಟ್ಟಣ ಪಂಚಾಯತ್ ಆಗಿ ಘೋಷಣೆಯಾಗಿರುವುದರಿಂದ ಪಂಚಾಯತ್ ಮಟ್ಟದ ಕೆಲಸಗಳಿಗೆ ಸಂಬಂಧಪಟ್ಟಂತೆ ಕಾನೂನಾತ್ಮಕ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ, ಗ್ರಾಮ ಪಂಚಾಯತ್‌ಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳು ಇದ್ದು, ಪಟ್ಟಣ ಪಂಚಾಯತ್‌ನಲ್ಲಿ ಆ ಸೌಲಭ್ಯ ಇಲ್ಲ, ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ ಕಾಮಗಾರಿ, ಕೂಲಿ ಪಾವತಿಗಳು ಬಾಕಿ ಇದ್ದು ಅಲ್ಲದೆ ಹಲವು ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್‌ಗಳು, ವಸತಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಹಣ ಪಾವತಿಗೂ ಬಾಕಿ ಇರುವುದರಿಂದ ಇದನ್ನೆಲ್ಲ ಸರಿಪಡಿಸಲು ಕೆಲವು ದಿನಗಳ ಕಾಲಾವಕಾಶದ ಅಗತ್ಯ ಇದೆ ಎಂದು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.