Home_Page_Advt
Home_Page_Advt
Home_Page_Advt

ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ವ್ಯವಸ್ಥಾಪಕಿ ದಯಾಮಣಿ ಕೆ.ವಿ. ಮೇ.30ರಂದು ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್)ನ ವ್ಯವಸ್ಥಾಪಕಿಯಾಗಿರುವ ದಯಾಮಣಿ ಕೆ.ವಿ.ಯವರು ಮೇ.30ರಂದು ಸೇವೆಯಿಂದ ವಯೋ ನಿವೃತ್ತಿ ಹೊಂದಲಿದ್ದಾರೆ.
ಕೊಳ್ತಿಗೆ ಗ್ರಾಮದ ಕಟ್ಟಪುಣಿ ನಿವೃತ್ತ ಫೋಸ್ಟ್ ಮಾಸ್ಟರ್ ದಿ. ವೆಂಕಪ್ಪ ಗೌಡ ಮತ್ತು ದಿ. ತಾರಾ ಕೆ.ವಿ.ಯವರ ಪುತ್ರಿಯಾಗಿರುವ ಇವರು ಪುತ್ತೂರು ವಿವೇಕಾನಂದ ಮಹಾ ವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಶಿಕ್ಷಣವನ್ನು ಪಡೆದರು. ೧೦-೬-೧೯೮೧ರಲ್ಲಿ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಗುಮಾಸ್ತೆಯಾಗಿ ಸೇವೆಗೆ ಸೇರಿದ ಇವರು ೧-೩-೨೦೧೨ರಲ್ಲಿ ಲೆಕ್ಕಿಗರಾಗಿ ಭಡ್ತಿ ಹೊಂದಿದ್ದರು. ೧-೪-೨೦೧೯ರಲ್ಲಿ ಮ್ಯಾನೇಜರ್ ಆಗಿ ಮುಂಭಡ್ತಿ ಹೊಂದಿ ಒಂದು ವರ್ಷ ಒಂದು ತಿಂಗಳು ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಲಿದ್ದಾರೆ. ವಿಜಯಾ ಬ್ಯಾಂಕ್‌ನ ನಿವೃತ್ತ ಅಸಿಸ್ಟೆಂಟ್ ಮ್ಯಾನೇಜರ್ ಎನ್. ಕುಶಲ ಗೌಡರ ಪತ್ನಿಯಾಗಿರುವ ದಯಾಮಣಿಯರು ಇಬ್ಬರು ಪುತ್ರ ಹಾಗೂ ಪುತ್ರಿಯನ್ನು ಹೊಂದಿದ್ದಾರೆ. ಪ್ರಸ್ತುತ ಇವರು ತನ್ನ ಕುಟುಂಬದೊಂದಿಗೆ ಹಾರಾಡಿಯಲ್ಲಿ ವಾಸ್ತವ್ಯವಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.