Home_Page_Advt
Home_Page_Advt
Home_Page_Advt

ಕೊರೋನಾ ಮಹಾಮಾರಿಗೆ ತತ್ತರಿಸಿದ ಜೇನು ಮಾರುಕಟ್ಟೆ | ಜೇನು ವ್ಯವಹಾರದಲ್ಲಿ ಕುಸಿತ ಕಂಡ ದ.ಕ.ಜಿಲ್ಲಾ ಜೇನು ವ್ಯವಸಾಯ ಸಹಕಾರಿ ಸಂಘ

Puttur_Advt_NewsUnder_1
Puttur_Advt_NewsUnder_1
  • ಜೇನಿಗೆ ಬೇಡಿಕೆ ಇದ್ದರೂ ಸಂಪರ್ಕದ ತೊಂದರೆಗೆ ಸಿಲುಕಿರುವ ಸಂಘ
  • ಪ್ರತಿ ತಿಂಗಳು ರೂ. 25ಲಕ್ಷವಿದ್ದ ವ್ಯವಹಾರ ರೂ. 3.5 ಲಕ್ಷಕ್ಕೆ ಇಳಿಕೆ

ಪುತ್ತೂರು: ಕೊರೊನಾ ಮಹಾಮಾರಿ ಒಕ್ಕರಿಸಿದ ಬಳಿಕ ಉದ್ಯಮ ವ್ಯವಹಾರಗಳು ಸಂಕಷ್ಟಕ್ಕೆ ತಲುಪಿದೆ. ಇದೇ ರೀತಿಯ ಹೊಡೆತ ದಕ್ಷಿಣಕನ್ನಡ ಜಿಲ್ಲೆಯ ಜೇನು ಬೆಳೆಗಾರರ ಸಹಕಾರಿ ಸಂಘಕ್ಕೂ ಬಿದಿದೆ.


ತನ್ನ ಉತೃಷ್ಣ ಗುಣಮಟ್ಟದ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದ, ಜೇನು ಬೆಳೆಗಾರರೇ ಸ್ಥಾಪಿಸಿದ ದ.ಕ.ಜಿಲ್ಲಾ ಜೇನು ವ್ಯವಸಾಯ ಸಹಕಾರಿ ಸಂಘದಲ್ಲಿ ಇದೀಗ ಮಾರುಕಟ್ಟೆಗಾಗಿ ಸಾಗಾಟಕ್ಕೆ ತೊಂದರೆ ಆದ್ದರಿಂದ ವ್ಯವಹಾರ ಕುಂಠಿತವಾಗಿದೆ. ಪ್ರತಿ ತಿಂಗಳು ರೂ. ೨೫ಲಕ್ಷಕ್ಕೂ ಮಿಕ್ಕಿ ಜೇನು ವ್ಯವಹಾರ ನಡೆಸುತ್ತಿದ್ದ ಸಂಘ ಇದೀಗ ಕಳೆದ ಒಂದೂವರೆ ತಿಂಗಳಲ್ಲಿ ಕೇವಲ ರೂ. ೩.೫ಲಕ್ಷ ವ್ಯವಹಾರ ನಡೆಸಿದೆ. ಇದು ಸಂಘದ ಒಟ್ಟು ಪ್ರಗತಿಯಲ್ಲಿ ಕುಂಠಿತ ಕಾಣುತ್ತಿದೆ.
೧೯೩೮ರಲ್ಲಿ ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಸ್ಥಾಪಿನೆಗೊಂಡ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘವು ಜೇನು ಕೃಷಿಕರ ಅಭ್ಯುದಯಕ್ಕಾಗಿ ಕಳೆದ ೮೧ ವರ್ಷಗಳಿಂದ ಜೇನು ಕೃಷಿಯಲ್ಲಿ ನಿರತವಾಗಿದ್ದು ಮಹತ್ತರ ಪ್ರಗತಿಯನ್ನು ಸಾಧಿಸಿದೆ. ಉಡುಪಿ ಮತ್ತು ದ.ಕ ಎರಡು ಜಿಲ್ಲೆಗಳ ಕಾರ್ಯಕ್ಷೇತ್ರ ಹೊಂದಿದ್ದು, ೨೭೬೦ ಜೇನು ಕೃಷಿಕರು ಸಂಘದ ಸದಸ್ಯರಾಗಿದ್ದು ವ್ಯವಹರಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ಸುಳ್ಯ, ಉಡುಪಿ ಮತ್ತು ಧರ್ಮಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಸದಸ್ಯರಿಗೆ ಸಂದರ್ಭಕ್ಕನುಗುಣವಾಗಿ ಜೇನು ಕೃಷಿಗೆ ಸಾಲ ಸೌಲಭ್ಯಗಳನ್ನು ಒದಗಿಸುತ್ತಾ ಬರುತ್ತಿದೆ. ಆದರೆ ಇದೀಗ ಮಾಧುರಿ ಎನ್ನುವ ಹೆಸರಿನ ಮೂಲಕ ಜೇನು ಮಾರುಕಟ್ಟೆಯಲ್ಲಿ ತನ್ನದೇ ಹೆಸರನ್ನು ಗಳಿಸಿರುವ ದಕ್ಷಿಣಕನ್ನಡ ಜೇನು ವ್ಯವಸಾಯಗಾರರ ಸಂಘಕ್ಕೆ ಕೊರೊನಾ ಭಾರೀ ಹೊಡೆತ ನೀಡಿದೆ. ತನ್ನ ಉತೃಷ್ಣ ಗುಣಮಟ್ಟದ ಜೇನಿನಿಂದ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಸಂಘಕ್ಕೆ ಮಾರುಕಟ್ಟೆ ಸಮಸ್ಯೆ ಎದುರಾಗಿದೆ. ಸಂಘದ ಜೇನು ಬೆಳೆಗಾರರು ತಮ್ಮ ಮನೆಯಲ್ಲಿ ಸಾಕಿದಂತಹ ಜೇನನ್ನು ಇದೇ ಸಂಘದ ಮೂಲಕ ಮಾರಾಟ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಯಾವುದೇ ಕಲಬೆರಕೆಯಿಲ್ಲದೆ ಕಳೆದ ೮ ದಶಕಗಳಿಂದ ಈ ಸಂಘ ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನೂ ಕಂಡಿದೆ. ಆದರೆ ಕೊರೊನಾ ಹಿನ್ನಲೆಯಲ್ಲಿ ದೇಶದಲ್ಲಿ ಜಾರಿಯಾದ ಮೂರು ತಿಂಗಳ ಲಾಕ್ ಡೌನ್ ಸಂಘದ ಮಾರುಕಟ್ಟೆ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಪ್ರತಿ ತಿಂಗಳು ಸುಮಾರು ೮ ರಿಂದ ೧೦ ಸಾವಿರ ಕೆ.ಜಿ ಜೇನು ಮಾರಾಟ ಮಾಡುತ್ತಿದ್ದ ಈ ಸಂಘಕ್ಕೆ ಇದೀಗ ಕಳೆದ ತಿಂಗಳಲ್ಲಿ ಕೇವಲ ಒಂದೂವರೆ ಸಾವಿರ ಕಿಲೋ ಜೇನು ಮಾರಾಟ ಮಾರಾಟಾ ಆಗಿದೆ. ಇದರಿಂದ ಸಂಘದ ನಿರ್ವಹಣೆಯೂ ಕಷ್ಟ ಸಾಧ್ಯವಾಗಿದೆ. ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು, ದೆಹಲಿ, ಕೇರಳ ಸೇರಿದಂತೆ ದೇಶ ಮತ್ತು ವಿದೇಶದ ವಿವಿಧೆಡೆಗೆ ಸಾಗಾಟವಾಗುತ್ತಿದ್ದ ಜೇನು ಗೋದಾಮಿನಲ್ಲೇ ಶೇಖರಣೆಗೊಂಡಿದೆ. ಗೋಡಾನ್‌ನಲ್ಲಿ ಸುಮಾರು ೬೦ಲಕ್ಷ ಟನ್ ಜೇನು ಶೇಖರಣೆಗೊಂಡಿದೆ.

ದೇಶದ ವಿವಿಧ ಭಾಗದಿಂದ ಈಗಲೂ ಈ ಜೇನಿಗಾಗಿ ಬೇಡಿಕೆ ಬರುತ್ತಿದ್ದರೂ, ಸೂಕ್ತ ಸಂಪರ್ಕ ವ್ಯವಸ್ಥೆಯಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಜೇನು ಬೆಳೆಗಾರರನ್ನು ಹೊಂದಿರುವ ಈ ಸಂಘದ ಸದಸ್ಯರಿಗೆ ಜೇನು ತೆಗೆಯುವ ಪ್ರಕ್ರಿಯೆಗೂ ತಡೆಯಾಗಿದೆ. ಮನೆಯ ಪರಿಸರದಲ್ಲಿ ಹಾಗೂ ಇತರ ತೋಟಗಳಲ್ಲಿ ಜೇನಿನ ಪೆಟ್ಟಿಗೆಯನ್ನು ಇಟ್ಟು ಜೇನು ಬೆಳೆಯುವ ಬೆಳೆಗಾರರಿಗೆ ಜೇನು ಪೆಟ್ಟಿಗೆ ಇದ್ದ ಪ್ರದೇಶಗಳಿಗೆ ತೆರಳಿ ಜೇನು ಸಂಗ್ರಹಿಸುವ ಪ್ರಕ್ರಿಯೆಗೂ ಸಮಸ್ಯೆಯಾಗಿದೆ. ಜೇನು ಬೆಳೆಗಾರರಿಂದ ಸಂಗ್ರಹಿಸಿದ ಸುಮಾರು ೬೦ ಲಕ್ಷ ಟನ್ ಜೇನು ಸಂಘದ ಗೋದಾಮಿನಲ್ಲೇ ಇದ್ದು, ತಿಂಗಳಿಗೆ ೧೫ ರಿಂದ ೨೦ ಲಕ್ಷ ರೂಪಾಯಿಗಳ ನಷ್ಟವನ್ನೂ ಸಂಘ ಇದೀಗ ಅನುಭವಿಸುವಂತಾಗಿದೆ. ಚಂದ್ರ ಕೋಲ್ಚಾರು, ಅಧ್ಯಕ್ಷರು ದ.ಕ ಜಿಲ್ಲಾ ಜೇನು ವ್ಯವಸಾಯಗಾರರ ಸಂಘ

A ಗ್ರೇಡ್ ಜೇನು: ಸಂಪನ್ಮೂಲ ವ್ಯಕ್ತಿಗಳಿಂದ ಜೇನು ಕೃಷಿಗೆ ಅಗತ್ಯವಿರುವ ತರಬೇತಿಯನ್ನು ನೀಡಿ ಜೇನು ಕೃಷಿಗೆ ಅಗತ್ಯವಿರುವ ಕೃಷಿಸಲಕರಣೆಗಳನ್ನು ಒದಗಿಸುವುದು ಮಾತ್ರವಲ್ಲದೇ, ಜೇನು ಕೃಷಿಕರು ಉತ್ಪಾದಿಸಿದ ಜೇನನ್ನು ಯೋಗ್ಯ ಬೆಲೆಗೆ ಖರೀದಿಸಿ, ಅತ್ಯಾಧುನಿಕ ಮೈಕ್ರೋಫಿಲ್ಟರ್ ಹೊಂದಿರುವ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಿ, ’ಮಾಧುರಿ ಅಗ್ ಮಾರ್ಕ್’ ’ಎ’ ಗ್ರೇಡ್ ಜೇನನ್ನು ಮಾರುಕಟ್ಟೆಗೆ ಒದಗಿಸುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.