Home_Page_Advt
Home_Page_Advt
Home_Page_Advt

ಭಕ್ತರಿಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರವೇಶ !… | ಮೇ.29ಕ್ಕೆ ಆಡಳಿತಾಧಿಕಾರಿ ನೇತೃತ್ವದಲ್ಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾ.20ರಿಂದ ಭಕ್ತರಿಗೆ ದೇವಸ್ಥಾನದ ಪ್ರವೇಶ ನಿರ್ಬಂದಿಸಿದ ಬಳಿಕ ಇದೀಗ ಸರಕಾರದ ಆದೇಶದಂತೆ ಜೂ. 1ರಿಂದ ಭಕ್ತಾಧಿಗಳಿಗೆ ಎ ಗ್ರೇಡ್ ದೇವಸ್ಥಾನಕ್ಕೆ ಪ್ರವೇಶಾವಕಾಶ ನೀಡುವ ಹಿನ್ನಲೆಯಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಮೇ.29ರಂದು ದೇವಳದ ಆಡಳಿತಾಧಿಕಾರಿ ಆಗಿರುವ ಸಹಾಯಕ ಕಮೀಷನರ್ ಡಾ.ಯತೀಶ ಉಳ್ಳಾಲ್ ನೇತೃತ್ವದಲ್ಲಿ ಸಭೆ ನಡೆಯಲಿದೆ.


ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ಅವಕಾಶ ನೀಡುವ ಕುರಿತು ಹಿಂದೂ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರಿಂದ ಆದೇಶ ಬರಲಿದ್ದು ಈ ಹಿನ್ನಲೆಯಲ್ಲಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲು ಪುತ್ತೂರು ದೇವಸ್ಥಾನದಲ್ಲಿ ಸಭೆ ನಡೆಯಲಿದೆ. ಕೊರೊನಾ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಮಾರ್ಚ್ 16ರಿಂದ ಪುತ್ತೂರು ದೇವಾಲಯದಲ್ಲಿ ಎಲ್ಲಾ ಸೇವೆಗಳನ್ನು ನಿಲ್ಲಿಸಲಾಗಿತ್ತು. ಭಕ್ತರಿಗೆ ಶ್ರೀಗಂಧ ಪ್ರಸಾದವನ್ನು ಮಾತ್ರ ನೀಡಲಾಗುತ್ತಿತ್ತು. ತದನಂತರ ಮಾರ್ಚ್ 20ರಿಂದ ಭಕ್ತರಿಗೆ ಪ್ರವೇಶಾವಕಾಶ ನಿರಾಕರಿಸಲಾಯಿತು. ದೇವಾಲಯದ ಸಿಬ್ಬಂದಿ ಹೊರತಾಗಿ ಯಾರೂ ಕೂಡಾ ದೇವಾಲಯವನ್ನು ಪ್ರವೇಶಿಸುವಂತಿರಲಿಲ್ಲ. ಇದೀಗ ದೇವಸ್ಥಾನ ಪ್ರವೇಶಕ ಅವಕಾಶ ನೀಡಲಾಗುವ ಸಾಧ್ಯತೆ ಇದೆ.

ಕಟ್ಟುನಿಟ್ಟಿನ ನಿಯಮಗಳು
ಜೂ. 1ರಿಂದ ಪುತ್ತೂರು ಶ್ರೀದೇವಾಲಯದಲ್ಲಿ ಭಕ್ತರಿಗೆ ಪ್ರವೇಶಾವಕಾಶ ನೀಡಿದರೂ ಎರಡು ಬಾಗಿಲುಗಳ ಬಳಿ ಸಾನಿಟೈಸಿಂಗ್ ವ್ಯವಸ್ಥೆ, ದೇವಸ್ಥಾನದ ಒಳಗೆ ಸಾಮಾಜಿಕ ಅಂತರದಲ್ಲಿ ಸರದಿಯ ಸಾಲು, ನಿಗದಿತ ಸಂಖ್ಯೆಯ ಭಕ್ತರಿಗೆ ಮಾತ್ರ ಒಂದು ಬಾರಿ ಪ್ರವೇಶ ಇವರು ನಿರ್ಗಮಿಸಿದ ಬಳಿಕ ಇನ್ನೊಂದು ಸೀಮಿತ ಸಂಖ್ಯೆಯ ಭಕ್ತರಿಗೆ ಪ್ರವೇಶ, ತೀರ್ಥ-ಪ್ರಸಾದ ವಿತರಣೆಯು ಸರಕಾರದ ಸೂಚನೆಯಂತೆ ಅನ್ವಯ. ಸೇವೆಗಳ ಕುರಿತು ಕೂಡಾ ಆದೇಶ ಪರಿಶೀಲನೆ ಮಾಡಿ ನಿರ್ಣಯ, ಪೂಜೆಯ ಸಂಧರ್ಭ ಗರ್ಭಗುಡಿಯ ಬಳಿ ನೂಕು ನುಗ್ಗಲು ನಿಯಂತ್ರಣಕ್ಕೆ ವ್ಯವಸ್ಥೆ ಮೊದಲಾದ ಕ್ರಮಗಳು ಅನಿವಾರ್ಯವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.