Home_Page_Advt
Home_Page_Advt
Home_Page_Advt

ಆಸ್ತಿ ತೆರಿಗೆ ಮೇಲಿನ ರಿಯಾಯಿತಿ, ಪಾವತಿ ವಿಳಂಬ ದಂಡದ ಅವಧಿ ವಿಸ್ತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರ ಸ್ಥಳೀಯ ಸಂಸ್ಥೆಗಳು ವಿಧಿಸುವ ಆಸ್ತಿ ತೆರಿಗೆ ಮೇಲಿನ ಶೇ.5ರ ರಿಯಾಯಿತಿ ಮತ್ತು ಪಾವತಿ ವಿಳಂಬ ದಂಡ ವಿಧಿಸುವ ಅವಧಿ ವಿಸ್ತರಣೆ ಜು.31ರ ತನಕ ವಿಸ್ತರಿಸಲು ಕ್ರಮ ವಹಿಸುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ.
ರಾಜ್ಯಾದ್ಯಂತ ಕೋವಿಡ್ – 19 ಸಾಂಕ್ರಾಮಿಕ ರೋಗದ ನಿಯಂತ್ರಣ ಸಂಬಂಧ ವಿಧಿಸಲಾಗಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಪ್ರತ್ಯೇಕತೆಗೆ ಹೆಚ್ಚಿನ ಗಮನ ಹರಿಸಬೇಕಾಗಿದ್ದು, ಸಂದರ್ಭೊಚಿತವಾಗಿ ಸಾರ್ವಜನಿಕರಿಗೆ ಅನುಗುನವಾಗುವಂತೆ ಕಾಯ್ದೆ / ನಿಯಮಗಳಲ್ಲಿ ಅಗತ್ಯ ಸಂಯೋಜನೆ ತರಲಾಗಿದೆ. ಈಗಾಗಲೇ ರಾಜ್ಯದ ಬಿಬಿಎಂಪಿ ಹೊರತುಪಡಿಸಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಗದಿಪಡಿಸಿರುವ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5 ರಿಯಾಯಿತಿ ಕಾಲಾವಧಿಯನ್ನು ಎ.30ಕ್ಕೆ ಬದಲಾಗಿ ಮೇ.31ಕ್ಕೆ ವಿಸ್ತರಿಸಲಾಗಿತ್ತು. ಲಾಕ್‌ಡೌನ್ ವಿಸ್ತರಣೆ ಆದ ಹಿನ್ನಲೆಯಲ್ಲಿ ಜು.31ರ ತನಕ ಅವಧಿ ವಿಸ್ತರಣೆ ಮಾಡಲಾಗಿದೆ. ಇದರ ಜೊತೆಗೆ ಆಸ್ತಿ ತೆರಿಗೆ ಪಾವತಿ ಮೇಲಿನ ವಿಳಂಬ ದಂಡವನ್ನು ಜು.1ರಿಂದ ಅನ್ವಯಿಸುವ ಬದಲಾಗಿ ನ.1ರಿಂದ ಅನ್ವಯಿಸಿ ವಿಧಿಸುವಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸರಕಾರದ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.