Home_Page_Advt
Home_Page_Advt
Home_Page_Advt

ಪಟ್ಟೆ ಶ್ರೀಕೃಷ್ಣ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಕೆ. ಯಮುನಾ ಮೇ.30ರಂದು ಸೇವಾ ನಿವೃತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಡಗನ್ನೂರು ಗ್ರಾಮದ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ಕೆ. ಯಮುನಾರವರು ಮೇ.30ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.


ಬಲ್ನಾಡು ಗ್ರಾಮದ ಅಜೆಕ್ಕಲ ದಿ. ಮಹಾಲಿಂಗ ನಾಯ್ಕ ಮತ್ತು ದಿ. ಅಮಕ್ಕರವರ ಪುತ್ರಿಯಾದ ಯಮುನಾರವರು ತಮ್ಮ ಶಿಕ್ಷಣವನ್ನು ಬಲ್ನಾಡು ಆಶ್ರಮ ಶಾಲೆ, ಹಾರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದ್ದಾರೆ. ಇವರು ೨-೯-೧೯೮೦ರಲ್ಲಿ ಪಟ್ಟೆ ಶ್ರೀಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಸಹ ಶಿಕ್ಷಕಿಯಾಗಿ ಸೇರಿ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿದರು.
39 ವರ್ಷ 1 ತಿಂಗಳು ಸಹ ಶಿಕ್ಷಕಿಯಾಗಿ ಮತ್ತು 7 ತಿಂಗಳುಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಇವರು ಸೇವೆ ಸಲ್ಲಿಸಿದ್ದಾರೆ. ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಅನುಭವ ಹೊಂದಿದ್ದ ಶಿಕ್ಷಕಿ ಯಮುನಾ ಅವರು ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆಗೆ ಧಾರೆಯೆರೆದಿದ್ದಾರೆ. ತನ್ನ ವೃತ್ತಿ ಜೀವನದೊಂದಿಗೆ ಇವರು ಪುತ್ತೂರು ಮರಾಟಿ ಮಹಿಳಾ ವೇದಿಕೆಯ ಸದಸ್ಯರಾಗಿ, ಪಟ್ಟೆ ಶ್ರೀ ಆದಿಶಕ್ತಿ ಭಜನಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯ ವೈ. ಕೃಷ್ಣ ನಾಯ್ಕರವರ ಪತ್ನಿಯಾಗಿರುವ ಯಮುನಾರವರು ಪ್ರಸ್ತುತ ಪಟ್ಟೆಯಲ್ಲಿ ವಾಸ್ತವ್ಯವಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.