Home_Page_Advt
Home_Page_Advt
Home_Page_Advt

ಕೊಳ್ನಾಡು: ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ – ವೀಡಿಯೋ ವೈರಲ್ | ಮೂವರು ಅಪ್ರಾಪ್ತರ ಸಹಿತ ನಾಲ್ವರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೊಳ್ನಾಡು ಗ್ರಾಮದ ಕಾಡುಮಠ ಶಾಲಾ ಅಂಗಳದಲ್ಲಿ ಬಾಲಕನೊಬ್ಬನಿಗೆ ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲ್ಲೆ ನಡೆಸಿದ ಯುವಕರ ತಂಡದ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕನ್ಯಾನ ಗ್ರಾಮದ ಮರ್ತನಾಡಿ ನಿವಾಸಿ ಹಿಂದೂ ಸಂಘಟನೆಯೊಂದರ ಸದಸ್ಯ ದಿನೇಶ್ ಎಂಬಾತ ಇತರ ಮೂವರೊಂದಿಗೆ ಸೇರಿಕೊಂಡು ಬಾಲಕನಿಗೆ ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾನು ಮೇ.21ರಂದು ಬೆಳಗ್ಗೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿನ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದಿನೇಶ್ ಕನ್ಯಾನ ಸಹಿತ ನಾಲ್ವರು ಬಾಲಕರು ಎರಡು ಬೈಕ್ ನಲ್ಲಿ ಬಂದು ನನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಬಳಿಕ ಅವರ ಬೈಕ್ ನಲ್ಲಿ ನನ್ನನ್ನು ಕುಳ್ಳಿರಿಸಿ ಸ್ಥಳೀಯ ಶಾಲೆಯ ಆಟದ ಮೈದಾನಕ್ಕೆ ಕೊಂಡೊಯ್ದು ಅಲ್ಲಿಯೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ್ದಾರೆ. ಈ ವೇಳೆ ನನ್ನ ಪ್ಯಾಂಟ್ ಕಿಸೆಯಲ್ಲಿದ್ದ ಹಣವನ್ನು ತಂಡದಲ್ಲಿದ್ದವರಲ್ಲಿ ಓರ್ವ ಎಳೆದು ತೆಗೆದಿದ್ದಾನೆ. ಪೊಲೀಸರಿಗೆ ದೂರು ನೀಡಿದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ತಂಡ ಬೆದರಿಕೆಯೊಡ್ಡಿದ್ದ ಹಿನ್ನೆಲೆಯಲ್ಲಿ ತಾನು ದೂರು ನೀಡಲು ತಡವಾಗಿರುವುದಾಗಿ ಬಾಲಕ ವಿಟ್ಲ ಪೊಲೀಸ್ ಠಾಣೆಗೆ ಮೇ.28ರಂದು ನೀಡಿದ‌ ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ರವರ  ನೇತೃತ್ವದಲ್ಲಿ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿಯರ ವಿಚಾರಕ್ಕೆ ಸಂಬಂದಿಸಿದಂತೆ ಈ ಹಲ್ಲೆ ನಡಸಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ತಂಡ ಬಾಲಕನಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ನಿನಗೆ ಹಿಂದೂ ಹುಡುಗಿಯರೇ ಬೇಕಾ…, ಹಿಂದೂ ಹುಡುಗಿಯರ ವಿಚಾರಕ್ಕೆ ಬಂದರೆ ಜಾಗ್ರತೆ ಎಂದು ಎಚ್ಚರಿಕೆ ನೀಡಿ ಅವಾಚ್ಯ ‌ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುತ್ತಿರುವುದು ತಂಡದಲ್ಲಿದ್ದವರಲ್ಲಿ ಓರ್ವ ಮಾಡಿರುವ ವೀಡಿಯೋದಲ್ಲಿ ದಾಖಲಾಗಿದೆ. ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.