Home_Page_Advt
Home_Page_Advt
Home_Page_Advt

ನೋವಿನ ಅರಿವಿದ್ದರೂ ಆತ್ಮವಿಶ್ವಾಸ ಕುಂದದ ವ್ಯಕ್ತಿ | ಕೇಶವ ಗೌಡ ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತನ್ನ ನೋವಿನ ಬಗ್ಗೆ ಅರಿತ್ತಿದ್ದರೂ ಆತ್ಮವಿಶ್ವಾಸ ಕುಂದದೆ ಜವಾಬ್ದಾರಿಯನ್ನು ನಿರ್ವಹಿಸಿದ ಅಪ್ರತಿಮ ಕಾರ್ಯಕರ್ತ ಕೇಶವ ಗೌಡ ಬಜತ್ತೂರು. ಅಂತಹ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಸಿಗುವುದು ಕಷ್ಟ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.

ಜಿ.ಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡನಾಗಿದ್ದ ಕೇಶವ ಗೌಡ ಬಜತ್ತೂರು ಅವರಿಗೆ ಮೇ 29ರಂದು ಬಿಜೆಪಿ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು. ಕೇಶವ ಬಜತ್ತೂರು ಅವರು ಬಡತನದ ಬೇಗೆಯಲ್ಲಿ ಅನಾರೋಗ್ಯ ಪೀಡಿತರಾಗಿರುವುದು ತಿಳಿದಿದ್ದರೂ ಧೈರ್ಯ ಕುಂದಿಲ್ಲ. ತನ್ನ ನೋವನ್ನು ಹೇಳಿ ಎಲ್ಲಿಯೂ ತೋರಿಸಿಕೊಳ್ಳದೆ ಆತ್ಮವಿಶ್ವಾಸದಿಂದ ಬದುಕಿದ್ದಾರೆ. ನೇರ ನಡೆನುಡಿಯ ಯುವಕನಾದ ಅವರು ಅಪಾರ ಜನರ ಪ್ರತೀ ವಿಶ್ವಾಸ ಗಳಿಸಿದ್ದಾರೆ. ಅನಾರೋಗ್ಯದ ನಡುವೆಯೂ ಚುನಾವಣೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಇಂತಹ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಸಿಗುವುದು ಕಷ್ಟ ಎಂದ ಅವರು ಬಿಜೆಪಿ ಮುಂದಿನ ದಿನಗಳಲ್ಲಿ ಅವರ ಕುಟುಂಬಕ್ಕೆ ಸಹಕಾರ ನೀಡಲಿದೆ. ಅನಾರೋಗ್ಯದ ಸಂದರ್ಭದಲ್ಲಿ ಸಂಸದರು, ಜನಪ್ರತಿನಿಧಿಗಳು ಉತ್ತಮ ಸಹಕಾರ ನೀಡಿದ್ದರು. ಆದರೆ ಉಳಿಸಿಕೊಳ್ಳಲಾಗಿಲ್ಲ ಎಂಬ ದುಃಖವಿದೆ ಎಂದರು.

 

ಹುದ್ದೆ ನ್ಯಾಯ ಕೊಡುವಲ್ಲಿ ಶ್ರಮ:
ಬಿಜಿಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಮಾತನಾಡಿ ಕೇಶವಣ್ಣ, ಶಂಭು ಭಟ್ ಮತ್ತು ನಾನು ಕಳೆದ ಮೂರು ವರ್ಷದ ಅವಧಿಯಲ್ಲಿ ಮಂಡಲದ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದೆವು. ಸಾಮಾನ್ಯ ಕಾರ್ಯಕರ್ತನಾಗಿ ಬೂತ್ ಮಟ್ಟದಿಂದ ಮೇಲ್ಪಟ್ಟದ ತನಕವೂ ಹುದ್ದೆಗೆ ನ್ಯಾಯ ಕೊಡುವಲ್ಲಿ ಶ್ರಮ ಕೇಶವಣ್ಣ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಇದರ ಜೊತೆಗೆ ಪಕ್ಷಕ್ಕೆ ಮಾತ್ರವಲ್ಲ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಕೆಲಸ ನಿರ್ವಹಿಸಿದ್ದ ಅವರು ಕೊನೆ ಕ್ಷಣದಲ್ಲಿ ಪಕ್ಷದಿಂದ ನನಗೆ ಬೇಕಾದಷ್ಟು ಸಹಕಾರ ಸಿಕ್ಕಿದೆ. ಆದರೆ ವಿಧಿಯ ಎದುರು ಏನು ಇಲ್ಲ ಎಂದು ನನ್ನಲ್ಲಿ ಹೇಳಿದ ಮಾತು ಅಕ್ಷರಸಹ ಸತ್ಯವಾಗಿದೆ. ದೇವರು ಅವರಿಗೆ ಇನ್ನಷ್ಟು ಅಯುಷ್ಯ ಕೊಡಬೇಕಾಗಿತ್ತು. ಅವರ ಸಾಧಿಸಬೇಕಾದ ಕೆಲಸ ಇನ್ನಷ್ಟು ಇತ್ತು ಎಂದರು.

ಸಮಸ್ಯೆ ಮುಗಿಯುವ ತನಕ ಕದಡದ ವ್ಯಕ್ತಿ:
ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಉಪ್ಪಿನಂಗಡಿ ಭಾಗದಲ್ಲಿ ಏನೆ ಸಮಸ್ಯೆ ಬರಲಿ ಅಲ್ಲಿ ತಕ್ಷಣ ಅವರು ಕಾರ್ಯಕರ್ತರೊಂದಿಗೆ ಸೇರಿಕೊಂಡು ಸಮಸ್ಯೆ ಮುಗಿಯುವ ತನಕವೂ ಕದಡುತ್ತಿರಲಿಲ್ಲ. ಉಪ್ಪಿನಂಗಡಿ ಭಾಗದಲ್ಲಿ ನಡೆದ ಸಮಾಜೋತ್ಸವ, ಎಬಿವಿಪಿ ಕಾರ್ಯಕರ್ತರಿಗೆ ನೀಡಿದ ಬೆಂಬಲ ಅವರ ಚಟುವಟಿಕೆಯನ್ನು ತೋರಿಸುತ್ತದೆ ಎಂದರು.

ಮೊದಲಿನಿಂದಲೂ ಹೋರಾಟಗಾರರು:
ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬಿಜೆಪಿಯಲ್ಲಿ ಮೊದಲಿನಿಂದಲೂ ಹೋರಾಟಗಾರರಾಗಿದ್ದ ಕೇಶವ ಗೌಡ ಬಜತ್ತೂರು ಅವರು ಪಕ್ಷದ ಸೂಚನೆಯಂತೆ ಸಂಘಟನೆಯಲ್ಲಿ ಚತುರತೆಯನ್ನು ಹೊಂದಿದ್ದರು. ಅನಾರೋಗ್ಯ ಆದರೂ ಖಾಯಿಲೆ ಗಮನಿಸದೆ ಹೋರಾಟದಲ್ಲೇ ಮುಂಚೂಣಿಯಲ್ಲಿದ್ದರು. ಚುನಾವಣೆ ಸಂದರ್ಭದಲ್ಲಿ ಪಕ್ಷದ ಚಟುವಟಿಕೆಯಲ್ಲಿದ್ದ ಅವರು ಗಾಂಧಿ ಸಂಕಲ್ಪ ಯಾತ್ರೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ್ದರು ಎಂದರು.

ಮೌನ ಪ್ರಾರ್ಥನೆ ಪುಷ್ಪಾರ್ಚಣೆ:
ನುಡಿನಮನ ಸಲ್ಲಿಸಿದ ಬಳಿಕ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ಬಳಿಕ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರು ಕೇಶವ ಗೌಡ ಬಜತ್ತೂರು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದರು. ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ನಗರ ಮಂಡಲದ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ರಾಮ್‌ದಾಸ್ ಹಾರಾಡಿ, ಗೌರಿ ಬನ್ನೂರು, ಶಂಭು ಭಟ್, ನಗರಸಭಾ ಸದಸ್ಯರಾದ ಪ್ರೇಮಲತಾ ನಂದಿಲ, ಶಶಿಕಲಾ ಸಿ.ಎಚ್, ಶಿವರಾಮ ಸಪಲ್ಯ, ನಗರಸಭಾ ಮಾಜಿ ಸದಸ್ಯರಾದ ರಾಜೇಶ್ ಬನ್ನೂರು, ವಿನಯ ಭಂಡಾರಿ, ರೈತ ಮೋರ್ಛಾದ ಸುರೇಶ್ ಆಳ್ವ, ಪುತ್ತೂರು ಕೋ ಓರಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಗಣೇಶ್ ಗೌಡ ನೈತ್ತಾಡಿ, ವಿಶ್ವನಾಥ ಕುಲಾಲ್, ಜಯರಾಮ ಪೂಜಾರಿ, ಸದಾಶಿವ ರೈ ಪಾಣಾಜೆ, ರಮೇಶ್ ಭಟ್, ಜ್ಯೋತಿ ಆರ್ ನಾಯಕ್, ಅರ್ಪಣಾ ಪಡೀಲು, ಯತೀಂದ್ರ ಕೊಚ್ಚಿ, ಶಿವರಾಮ್ ಭಟ್ ಕೊಳ್ತಿಗೆ, ಬಾಲಕೃಷ್ಣ, ರಮೇಶ ಡಿ ಗಾಣಿಗ, ಅಶೋಕ್ ಹಾರಾಡಿ, ಸುರೇಶ್ ಭಟ್ ಇಡ್ಕಿದು, ರುಕ್ಮಯ ಇದ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.