Home_Page_Advt
Home_Page_Advt
Home_Page_Advt

ಬೆಟ್ಟಂಪಾಡಿ; ಡೆಂಗ್ಯು ಬಾಧಿತ ಪ್ರದೇಶಗಳಲ್ಲಿ ವಿಶೇಷ ಲಾರ್ವ ಸಮೀಕ್ಷೆ‌ ಕುರಿತು ಪೂರ್ವ ಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರೋಗ್ಯ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬೆಟ್ಟಂಪಾಡಿ ಗ್ರಾ.ಪಂನ ಸಂಯುಕ್ತ ಆಶ್ರಯದಲ್ಲಿ ಡೆಂಗ್ಯು ಬಾದಿತ ಪ್ರದೇಶಗಳಲ್ಲಿ ವಿಶೇಷ ಲಾರ್ವ ಸಮೀಕ್ಷೆ ನಡೆಸುವ ಕುರಿತು ಸಭೆಯು‌ ಮೇ.29ರಂದು‌ಬೆಟ್ಟಂಪಾಡಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸೊಳ್ಳೆ‌ ನಿಯಂತ್ರಣದ‌ಕುರಿತು ಮಾಹಿತಿ‌ ಜಿಲ್ಲಾ ಕೀಟ ಶಾಸ್ತ್ರಜ್ಞೆ ಮಂಜುಳಾ ಮಾತನಾಡಿ, ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ತಡೆಯುವ ನಿಟ್ಟಿನಲ್ಲಿ‌ ಸೊಳ್ಳೆಗಳ ಉತ್ಪತ್ತಿಯಾಗವುದನ್ನು‌ ತಡೆಯುವುದೇ ಬಹುಮುಖ್ಯವಾಗಿದೆ. ಕೇವಲ ಒಂದು ಚಮಚದಷ್ಟು ನೀರನಲ್ಲಿ ಸೊಳ್ಳೆ‌ ಉತ್ತಿಯಾಗುತ್ತದೆ. ಡೆಂಗ್ಯು ಜ್ವರ ಹರಡುವ ಸೊಳ್ಳೆಗಳು‌ ಶುದ್ದ ನೀರಿನಲ್ಲಿ ಹುಟ್ಟಿಕೊಳ್ಳುತ್ತದೆ. ಇದಕ್ಕಾಗಿ ನೀರಿನ ಟ್ಯಾಂಕ್, ಮನೆ‌ ಸ್ಲಾಬ್ ನ್ನು ಆಗಾಗ ಶುಚಿಗೊಳಿಸಬೇಕು. ಎಲ್ಲಿಯೂ ನೀರು‌ ಸಂಗ್ರಹವಾಗದಂತೆ‌ ಎಚ್ವರಿಕೆ ವಹಿಸಬೇಕು. ಸೊಳ್ಳೆ‌ ಆಹಾರಕ್ಕಾಗಿ‌ ಮನುಷ್ಯರಿಗೆ‌ ಕಚ್ಚುವುದಿಲ್ಲ. ತನ್ನ ವಂಶಾಭಿವೃದ್ಧಿಗೆ ಮಾನವನ ರಕ್ತ‌ ಹೀರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಸೋಂಕು ತಗುಲಿರುವ ವ್ಯಕ್ತಿಗೆ ಕಚ್ಚಿದ ಬಳಿಕ. ಇನ್ನೊಬ್ಬ ವ್ಯಕ್ತಿಗೆ ಕಚ್ಚಿದರೆ ಸೋಂಕು ಅವರಿಗೂ ಹರಡುತ್ತದೆ. ಫಾಗಿಂಗ್ ಮಾಡುವುದರಿಂದ ಸೊಳ್ಳೆ‌ ಉತ್ಪತ್ತಿಯಾಗುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ‌ ಮನೆ ಪರಿಸರವನ್ನು‌ ಶುಚಿಯಾಗಿಡುವ ಮೂಲಕ ಜಾಗೃತರಾಗಬೇಕು ಎಂದು ಹೇಳಿದರು.

ಕ್ಷಯ ರೋಗ ಹರಡುವ ಕುರಿತು ಮಾಹಿತಿ‌ ನೀಡಿದ ಜಿಲ್ಲಾ‌ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಮಾತನಾಡಿ, ಬ್ಯಾಕ್ಟೀರಿಯಾ ಮೂಲಕ ಕ್ಷಯ ರೋಗವು ವ್ಯಕ್ತಿಯಿಂದ ಹರಡುತ್ತದ. ಈ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ‌ ಕ್ಷಯ ರೋಗ ಬಾಧಿತರನ್ನು ಪತ್ತೆ ಮಾಡಿ ಅರೋಗ್ಯ ಇಲಾಖೆಯ ಮುಖಾಂತರ ಅವರಿಗೆ ಸೂಕ್ತ ಚಿಕಿತ್ಸೆ‌ ನೀಡಲಾಗುತ್ತದೆ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಕವಿತಾ ವಸಂತ್ ಮಾತನಾಡಿ, ಸಾಂಕ್ರಾಮಿಕ ರೋಗ ಹರಡುವ ಕುರಿತು ಜನರಲ್ಲಿ‌ ಭಯವಿದೆ. ಇದರ ಕುರಿತು ಜನರಲ್ಲಿನ ಜಾಗೃತಿ ಮೂಡಿಸುವ ಕೆಲಸ‌ ಆಗಬೇಕು. ದೇಶ ಕಾಯುವ ಸೈನಿಕರಂತೆ ನಮ್ಮ ಪರಿಸರದಲ್ಲಿ ನಾವು ಕೆಲಸ ಮಾಡಬೇಕು.  ಸಾಂಕ್ರಾಮಿಕ ರೋಗಗಳಿಗೆ ಜನರು ಬಲಿಯಾಗದಂತೆ ವಾರಿಯರ್ಸ್ ನಂತೆ  ಕೆಲಸ ಮಾಡಬೇಕಾಗಿದೆ ಎಂದರು. ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ‌ ಬೇಬಿ ಜಯರಾಮ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಭಾಸ್ಕರ ರಾವ್ ಸಂದರ್ಭೋಚಿತವಾಗಿ ಮಾತನಾಡಿದರು. ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಜ್ಯೋತಿಷ್ ಗೋಪಿನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರೋಗ್ಯ ಶಿಕ್ಷಣಾಧಿಕಾರಿ‌ ಪದ್ಮ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ ಹುದ್ದಾರ್ ವಂದಿಸಿದರು. ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ದಿನೇಶ್ ಕಲ್ಪಣೆ, ಜಗನ್ನಾಥ ಶೆಟ್ಟಿ ಕೊಮ್ಮಂಡ, ರಮೇಶ್ ಶೆಟ್ಟಿ ಕೊಮಂಡ, ಪಾರ್ವತಿ, ಪದ್ಮಾವತಿ, ಪಿಡಿಓ ಶಾಂತರಾಮ್, ಕಾರ್ಯದರ್ಶಿ ಬಾಬು ನಾಯ್ಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕಿರು ಹಾಗೂ ಆಶಾ‌ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.