Home_Page_Advt
Home_Page_Advt
Home_Page_Advt

ಕೋವಿಡ್-19 ಟೆಸ್ಟ್:  ವಿಟ್ಲ ಠಾಣಾ ಪೊಲೀಸರೆಲ್ಲರ ವರದಿ ನೆಗೆಟೀವ್

Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಸಿಬಂದಿಯೋರ್ವರಿಗೆ ಕೊರೋನಾ ಸೋಂಕು ತಗುಲಿರುವ  ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯ ಎಲ್ಲಾ ಸಿಬಂದಿಗಳನ್ನು ಕೊರೆಂಟೈನ್ ನಲ್ಲಿರಿಸಿ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಇದೀಗ ಕೊರೆಂಟೈನ್ ನಲ್ಲಿರುವ ಎಲ್ಲಾ ಸಿಬಂದಿಗಳ ವರದಿ ನೆಗೆಟೀವ್ ಆಗಿದೆ‌ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದಿಂದ ಬಂದಿರುವ ವ್ಯಕ್ತಿಯೋರ್ವರಿಂದ ವಿಟ್ಲ ಪೊಲೀಸ್ ಠಾಣಾ ಹೆಡ್ ಕಾನ್ಸ್ ಟೇಬಲ್ ಓರ್ವರಿಗೆ ಕೊರೋನ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯನ್ನು ಸ್ಯಾನಿಟರೈಸ್ ಮಾಡಿ ಸೀಲ್ ಡೌನ್ ಮಾಡಲಾಗಿತ್ತು. ಸಿಬಂದಿಗಳನ್ನು ಕೊರೆಂಟೈನ್ ನಲ್ಲಿಡಲಾಗಿತ್ತು.  ವಿಟ್ಲ ಸಿ.ಪಿ.ಸಿ ಆರ್.ಐ ಅತಿಥಿಗೃಹದಲ್ಲಿ 11 ಸಿಬಂದಿಗಳನ್ನು, ವಿಟ್ಲ ಠಾಣಾ ಪಕ್ಕದಲ್ಲಿರುವ ಕ್ವಾಟ್ರಸ್ ನಲ್ಲಿ ಇಬ್ಬರು ಸಿಬಂದಿಗಳನ್ನು ಹಾಗೂ ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ  7 ಸಿಬಂದಿಗಳ ಗಂಟಲ ದ್ರವದ ಮಾದರಿಯನ್ನು ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭುರವರ ನೇತೃತ್ವದ ವೈದ್ಯರ ತಂಡ  ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿತ್ತು. ಮೇ.29ರಂದು  ಬಂದ ವರದಿಯಂತೆ ವಿಟ್ಲದ ಪೊಲೀಸ್ ಠಾಣಾ ಸಿಬಂದಿಗಳೆಲ್ಲರ ಪರೀಕ್ಷಾ ವರದಿ ನೆಗಟೀವ್ ಆಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.