Home_Page_Advt
Home_Page_Advt
Home_Page_Advt

ಕೊಳ್ನಾಡು: ಅಪ್ರಾಪ್ತ ಬಾಲಕನಿಗೆ ಹಲ್ಲೆ ಪ್ರಕರಣ | ಪ್ರಮುಖ ಸೂತ್ರಧಾರಿ ಪೊಲೀಸ್ ವಶಕ್ಕೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೊಳ್ನಾಡು ಗ್ರಾಮದ ಕಾಡುಮಠ ಶಾಲಾ ಅಂಗಳದಲ್ಲಿ ಬಾಲಕನೊಬ್ಬನಿಗೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೋರ್ವರನ್ನು ತನಿಖಾ ತಂಡ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ.

ಸಂಘಟನೆಯೊಂದರ ಸದಸ್ಯ, ಕನ್ಯಾನ ನಿವಾಸಿ ದಿನೇಶ್ ಪೊಲೀಸ್ ವಶವಾದ ಆರೋಪಿ. ಮೇ.21ರಂದು ಕೊಳ್ನಾಡು ಗ್ರಾಮದ 16ವರ್ಷದ  ಬಾಲಕನಿಗೆ ದಿನೇಶ್ ಸೇರಿ ಇತರ ಮೂವರು ಅಪ್ರಾಪ್ತ ಬಾಲಕರೊಂದಿಗೆ ಬಂದು ಹಲ್ಲೆ ನಡೆಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ತಂಡದಲ್ಲಿದ್ದವರೇ ತೆಗೆದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನಿಟ್ಟಿನಲ್ಲಿ ಮೇ.28ರಂದು ಹಲ್ಲೆಗೊಳಗಾದ ಬಾಲಕ ವಿಟ್ಲ ಪೊಲೀಸ್ ಠಾಣೆಗೆ ಬಂದು‌ ದೂರು ನೀಡಿದ್ದರು. ಬಂಟ್ವಾಳ ವೃತ್ತ ನಿರೀಕ್ಷಕರ ನೇತೃತ್ವದ ಪೊಲೀಸರ ವಿಶೇಷ ತನಿಖಾ ತಂಡ ಮಾ.28ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದೀಗ ತನಿಖಾ‌ ತಂಡದಿಂದ ಬಂದಿಸಲ್ಪಟ್ಟ ಆರೋಪಿ ಪ್ರಕರಣದ ಪ್ರಮುಖ ಸೂತ್ರಧಾರನೆಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.