Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯಿಂದ ಹಸಿರು ಕ್ರಾಂತಿ ಯೋಜನೆ|ವಿವಿಧ ಜಾತಿಯ 2,67,476 ಸಸಿ ಸಿದ್ಧವಾಗುತ್ತಿದೆ..!!

Puttur_Advt_NewsUnder_1
Puttur_Advt_NewsUnder_1
  • ಸಾರ್ವಜನಿಕ ವಿತರಣೆಗೆ-೯೫ ಸಾವಿರ
  • ಹಸಿರು ಕರ್ನಾಟಕ ಯೋಜನೆಯಂತೆ-೮೫೦೦
  • ಮಗುವಿಗೊಂದು ಮರ ಶಾಲೆಗೊಂದು ವನ-೨೩೦೦
  • ಇಲಾಖಾ ನೆಡುತೋಪು ಬೆಳೆಸಲು-೧,೬೧,೬೭೬
  • ಕಾಡಿನೊಳಗೆ ಹಣ್ಣು ಹಂಪಲು, ಅಂತರ್ಜಲ ವೃದ್ಧಿಸುವ ಯೋಜನೆ

ಉಪ್ಪಿನಂಗಡಿ: ಸ್ವಚ್ಚ ಪರಿಸರ, ಸ್ವಸ್ಥ ಸಮಾಜ ನಿರ್ಮಾಣದ ಕಲ್ಪನೆಗೆ ಪೂರಕವಾಗಿ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಈ ಬಾರಿ ವಿವಿಧ ಜಾತಿಯ 2,67,476 ಸಸಿಗಳನ್ನು ಬೆಳೆಸಲಾಗಿದ್ದು, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ತಿಳಿಸಿದ್ದಾರೆ.

ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಉದನೆ ಹಾಗೂ ಗುಂಡ್ಯ ಸಸ್ಯ ಕ್ಷೇತ್ರದಲ್ಲಿ ವಿವಿಧ ಜಾತಿಯ ೧೦೫೮೦೦ ಗಿಡಗಳನ್ನು ಬೆಳೆಸಲಾಗಿದ್ದು, ಈ ಪೈಕಿ ೯೫ ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಮತ್ತು ಹಸಿರು ಕರ್ನಾಟಕ ಯೋಜನೆಯಡಿ ಸಂಘ ಸಂಸ್ಥೆಗಳಿಗೆ ೮೫೦೦ ಗಿಡಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ. ಮಗುವಿಗೊಂದು ಮರ ಶಾಲೆಗೊಂದು ವನ ಯೋಜನೆಯಲ್ಲಿ ೨೩೦೦ ಗಿಡಗಳನ್ನು ವಿತರಿಸಲಾಗುವುದು. ಅಲ್ಲದೆ ಇಲಾಖಾ ವತಿಯಿಂದ ೩೦೭ ಹೆಕ್ಟೇರ್ ಪ್ರದೇಶದಲ್ಲಿ ನೆಡು ತೋಪು ಬೆಳೆಸಲು ೧,೬೧,೬೭೬ ಗಿಡಗಳನ್ನು ವಿವಿದೆಡೆಗಳಲ್ಲಿ ಬೆಳೆಸಲಾಗಿದೆ ಎಂದರು. ರಿಯಾಯಿತಿ ದರದಲ್ಲಿ ಪಡೆದು ಬೆಳೆಸಲಾದ ಗಿಡಗಳಿಗೆ ಮೂರು ವರ್ಷಗಳ ಅವಧಿಯಲ್ಲಿ ಗಿಡವೊಂದಕ್ಕೆ ನೂರು ರೂಪಾಯಿ ಪ್ರೋತ್ಸಾಹ ಧನವನ್ನೂ ನೀಡಲಾಗುವುದು ಎಂದು ಅವರು ತಿಳಿಸಿದರು.

ಅದಾಗ್ಯೂ ಶ್ರೀಗಂಧ, ರಕ್ತಚಂದನ ಸೇರಿದಂತೆ ಇತರೇ ಜಾತಿಯ ಗಿಡಗಳನ್ನು ಬೆಳೆಸಲಾಗಿದ್ದು, ಒಂದು ವರ್ಷಕ್ಕೆ ಒಂದು ಹೆಕ್ಟೇರ್‌ಗೆ ೪೦೦ ಗಿಡವನ್ನು ನೆಡಲು ಅವಕಾಶವಿದೆ. ಒಂದು ವರ್ಷದ ಮೊದಲೇ ಅರ್ಜಿ ಸಲ್ಲಿಸಿದರೆ ಸಾರ್ವಜನಿಕರು ಬಯಸಿದ ಗಿಡಗಳನ್ನು ಬಯಸಿದ ಪ್ರಮಾಣದಲ್ಲಿ ಒದಗಿಸುವ ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಕಾಡಿನೊಳಗೆ ಹಣ್ಣು ಹಂಪಲು, ಅಂತರ್ಜಲ ವೃದ್ಧಿಸುವ ಯೋಜನೆ:
ಪ್ರಕೃತಿಯೊಂದಿಗೆ ಮನುಷ್ಯನ ಬದುಕು ಬೆಸೆದುಕೊಂಡಾಗ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಸಾರ್ವಜನಿಕರು ಪ್ರಕೃತಿಯ ರಕ್ಷಣೆಯ ಜೊತೆಗೆ ಪರಿಸರವನ್ನು ಹಸಿರುಮಯಗೊಳಿಸುವಲ್ಲಿ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಕಾಡಿನ ಪ್ರಾಣಿಗಳು ನಾಡಿಗೆ ಬಾರದಂತೆ ಮಾಡಲು ಕಾಡಿನಲ್ಲೇ ಅದಕ್ಕೆ ಬೇಕಾದ ಆಹಾರ ದೊರಕುತ್ತಿರಬೇಕು. ಅದಕ್ಕಾಗಿ ಕಾಡಿನೊಳಗೆ ವಿವಿಧ ಜಾತಿಯ ಹಣ್ಣುಗಳ ಗಿಡಗಳನ್ನು ಬೆಳೆಸುವ, ವರ್ಷದ ಎಲ್ಲಾ ದಿನಗಳಲ್ಲೂ ಕಾಡಿನೊಳಕ್ಕೆ ನೀರು ಲಭಿಸುವಂತಾಗಲು ಅಂತರ್ಜಲ ವೃದ್ಧಿಸುವ ಯೋಜನೆಗಳನ್ನು ಮುಂದುವರೆಸಲಾಗುತ್ತಿದೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.