Home_Page_Advt
Home_Page_Advt
Home_Page_Advt

ಪರಿಸರ ಕಾಯ್ದು ಕೊಳ್ಳಲು ಕೃಷಿ ಅರಣ್ಯ ಪ್ರದೇಶ ವಿಸ್ತರಣೆಯಾಗಬೇಕು: ಅರಣ್ಯ ಇಲಾಖೆ ಗಿಡ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವನಸಿರಿಯನ್ನು ಬೆಳೆಸುವ ಮೂಲಕ ಪ್ರತಿಯೊಬ್ಬ ನಾಗರೀಕನು ತನ್ನ ಕೃಷಿ ಬೆಳೆಯಲ್ಲಿ ಪರಿಸರ ಕಾಪಾಡಲು ಅರಣ್ಯ ಇಲಾಖೆ ಪ್ರೋತ್ಸಾಹ ನೀಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಮತ್ತು ಅರಣ್ಯ ಪ್ರದೇಶ ವಿಸ್ತರಣೆಯಾಗಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ವಲಯ ಅರಣ್ಯ ಇಲಾಖೆಯಲ್ಲಿ ಮೇ 30ರಂದು ನಾಗರಿಕರಿಗೆ ಸಸಿ ವಿತರಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ವಾಣಿಜ್ಯ ಬೆಳೆಗಳಿಗೆ ಆದ್ಯತೆ ಕೊಟ್ಟದ್ದರಿಂದ ಕಾಡನ್ನು ಕಡಿದು ರಬ್ಬರ್, ಅಡಿಕೆ, ಗೇರು ತೋಟ ಮಾಡಿದ ಮತ್ತು ನೈಸರ್ಗಿಕವಾಗಿ ಬೆಳೆಯುವ ಮರಗಳನ್ನು ಕಡಿದು ಕಾಡನ್ನು ನಾಶ ಮಾಡಿದ ಸಂದರ್ಭದಲ್ಲಿ ಪರಿಸರದ ಸಮತೋಲನವನ್ನು ಕಾಪಾಡಲು ಮತ್ತೊಮ್ಮೆ ನೈಸಗಿಕ ಬೆಳೆ, ಅದರ ಜೊತೆ ಔಷಧಿ ಗಿಡಗಳು, ಪ್ರಾಣಿ ಪಕ್ಷಿಗಳಿಗೆ ಹಣ್ಣು ಕೊಡುವ ಗಿಡಗಳನ್ನು ಬೆಳೆಸುವುದು ಅಗತ್ಯ. ಅರಣ್ಯ ಕಾಪಾಡುವ ಜೊತೆ ವನ್ಯ ಸಂಪತನ್ನು ಕಾಪಾಡಬೇಕು. ಮುಂದಿನ ಜೂನ್, ಜುಲೈ ತಿಂಗಳಲ್ಲಿ ವನಮಹೋತ್ಸವ ಗಿಡ ನೆಡಲು ಪ್ರೋತ್ಸಾಹ ನೀಡುವ ಕಾರ್ಯಕ್ರಮವಾದರೆ ಕೃಷಿ ಅರಣ್ಯ ನಮಗೆ ನೂರಕ್ಕೆ ನೂರು ಪರಿಸರ ಕಾಯ್ದು ಕೊಳ್ಳಲು ರೈತರು ಇತರರಿಗೆ ಮಾದರಿಯಾಗಬೇಕು. ಕೃಷಿ ಅರಣ್ಯ ಪ್ರದೇಶವನ್ನು ವಿಸ್ತರಣೆ ಮಾಡಿ ಕೃಷಿ ಜಮೀನಿನೊಂದಿಗೆ ಪರಿಸರ ಕಾಯ್ದು ಕೊಳ್ಳುವ ಕೆಲಸ ಆಗಲಿ ಎಂದರು.

ಸಾರ್ವಜನಿಕ ವಿತರಣೆಗಾಗಿ 45 ಸಾವಿರ ಗಿಡಗಳು:
ವಲಯ ಅರಣ್ಯಾಧಿಕಾರಿ ಬಿ.ಜಿ ಮೋಹನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪುತ್ತೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ೪೫ ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ. ಪುತ್ತೂರು ಅರಣ್ಯ ಇಲಾಖೆ ವ್ಯಾಪ್ತಿಯ ಜಾಲ್ಸೂರು ಪಂಜಿಕಲ್ಲು ಎಂಬಲ್ಲಿ ಕನಕಮಜಲು ಸಸ್ಯಕ್ಷೇತ್ರದಲ್ಲಿ ೬*೯ ಮತ್ತು ೮*೧೨ರ ಗಾತ್ರದಲ್ಲಿ ಸಸಿಗಳು ಸಿದ್ಧಗೊಂಡಿದ್ದು, ಸಾಗುವಾನಿ, ನೆಲ್ಲಿ, ಬಿಲ್ವಪತ್ರೆ, ಮಹಾಗನಿ, ಜಂಬುನೇರಳೆ, ರಂಬುಟನ್, ಕಹಿಬೇವು, ಬಾಗೆ, ಬಾದಾಮು, ಬೇಂಗ, ಸಂಪಿಗೆ, ನೊರೆಕಾಯಿ, ನೇರಳೆ, ಪುನರ್ಪುಳಿ, ಬಸವನಪಾದ, ಶಿವಾನಿ, ಶ್ರೀಗಂಧ, ರಕ್ತಚಂದ್ರನ, ಹಲಸು ಗಿಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು ಎಂದು ಹೇಳಿದರು. ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರೀಶ್ ಯಾದವ, ಎಪಿಂಸಿ ಅಧ್ಯಕ್ಷ ದಿನೇಶ್ ಮೆದು, ನಿರ್ದೇಶಕ ತೀರ್ಥರಾಮ ದುಗ್ಗಳ, ಬಿಜೆಪಿ ಯುವ ಮೋರ್ಛಾ ಮಾಜಿ ಅಧ್ಯಕ್ಷ ಜಗದೀಶ್ ಪುಣಚ, ಮೂಡಂಬೈಲು ಜಯರಾಮ ರೈ, ಗುರುವಪ್ಪ ಪೂಜಾರಿ ಮತ್ತು ಟೆಂಬರ್ ಮರ್ಚಂಟ್‌ಗಳಾದ ಇಬ್ರಾಹಿಂ, ಗೋಪಾಲ್, ಸಂಶುದ್ದೀನ್ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಆಚಾರ್ಯ, ಲೋಕೇಶ್, ಅರಣ್ಯ ರಕ್ಷಕ ರಾಜು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಕೃಷಿಕರಿಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ: ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ರೈತರಿಗೆ ಅವರ ಪಟ್ಟಾ ಸ್ಥಳದಲ್ಲಿ ಸಸಿ ನೆಡಲು ಸಸಿಗಳ ವಿತರಣೆ ಮಾಡಲಾಗುತ್ತದೆ. ಅದಕ್ಕಾಗಿ ಇಲಾಖೆಯಲ್ಲಿ ನೋಂದಾವಣೆ ಮಾಡಿಕೊಂಡು. ಆರ್.ಟಿ.ಸಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ ನೀಡಬೇಕು. ಗಿಡ ಪಡೆದ ಬಳಿಕ ಮೂರು ವರ್ಷದಲ್ಲಿ ಪ್ರಥಮ ವರ್ಷ ರೂ. ೩೦, ದ್ವಿತೀಯ ವರ್ಷ ರೂ. ೩೦ ಮತ್ತು ತೃತೀಯ ವರ್ಷ ರೂ. ೪೦ ಅನ್ನು ಇಲಾಖೆ ನಿಮ್ಮ ಬ್ಯಾಂಕ್ ಖಾತೆಗೆ ಭರಿಸುತ್ತದೆ. ಆದರೆ ಇದೆಲ್ಲಾ ಗಿಡದ ಬೆಳವಣಿಗೆಯನ್ನು ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಮಾತ್ರ. ಹೀಗೆ ಒಟ್ಟು ರೂ. ೧೦೦ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ – ಬಿ.ಜಿ.ಮೋಹನ್ ವಲಯ ಅರಣ್ಯಾಧಿಕಾರಿ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.