Home_Page_Advt
Home_Page_Advt
Home_Page_Advt

ಶ್ರೀ ಲಕ್ಷ್ಮೀ ದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ: ಕೃಷ್ಣ ಶಿಲೆ ಕಲ್ಲಿನ ಶಿಲ್ಪಕಲೆ ಕಾರ್ಯ ವೀಕ್ಷಣೆ ಮಾಡಿದ ಶಾಸಕರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ರೈಲ್ವೇ ನಿಲ್ದಾಣದ ಬಳಿಯ ಶ್ರೀ ಲಕ್ಷ್ಮೀ ದೇವಿ ಬೆಟ್ಟದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಮೇ .30ರಂದು ಶಾಸಕ ಸಂಜೀವ ಮಠಂದೂರು ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಕೃಷ್ಣ ಶಿಲೆ ಕಲ್ಲಿನ ಶಿಲ್ಪಕಲೆಗಳ ಕೆಲಸಗಳನ್ನು ವೀಕ್ಷಣೆ ಮಾಡಿದರು.

ವಾಸ್ತು ಇಂಜಿನಿಯರ್ ಆಗಿರುವ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಶಿಲ್ಪಕಲೆ ಕೆತ್ತನೆ ಕೆಲಸದ ಕುರಿತು ಮಾಹಿತಿ ನೀಡಿದರು. ಶಿಲ್ಪಕಲೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ತನ್ನಿಂದಾಗುವ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಊರಿನ ಭಕ್ತರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಒಳ್ಳೆಯ ಶಿಲಾಮಯ ದೇವಸ್ಥಾನ ನಿರ್ಮಾಣ ಮಾಡಿ ಮಹಾತಾಯಿ ಮಹಾಲಕ್ಷ್ಮೀ ದೇವಿಯ ಬ್ರಹ್ಮಕಲಶ ಕಾರ್ಯ ಆದಷ್ಟು ಬೇಗ ನೆರವೇರಲಿ ಹಾಗು ವಿಶ್ವಕ್ಕೆ ಅಂಟಿರುವ ಮಹಾಮಾರಿ ರೋಗವು ದೂರವಾಗಲಿ ಎಂದು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಧರ್ಮದರ್ಶಿ ಎನ್. ಐತಪ್ಪ ಸಪಲ್ಯರ ಅವರು ಮಹಾಲಕ್ಷ್ಮೀ ದೇವರಿಗೆ ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷರು ದೇವಸ್ಥಾನದ ವಾಸ್ತು ಶಿಲ್ಪಿಯಾದ ಪಿ.ಜಿ.ಜಗನ್ನಿವಾಸ್ ರಾವ್, ಕೃಷ್ಣ ಪ್ರಸಾದ್ ಬೆಟ್ಟ, ಜನಾರ್ಧನ್ ಬೆಟ್ಟ ಹಾಗು ಲಕ್ಷ್ಮೀ ಪ್ರಸಾದ್ ಬೆಟ್ಟ, ಶಾಸಕರ ಆಪ್ತ ಸಹಾಯಕ ಜೀವನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.