Home_Page_Advt
Home_Page_Advt
Home_Page_Advt

OLX ನಲ್ಲಿ ಬೈಕ್ ಮಾರಲು ಹೋಗಿ 12 ಸಾವಿರ ರೂ.‌ ಕಳೆದುಕೊಂಡ ವಿದ್ಯಾರ್ಥಿ..!

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಓಎಲ್‌ಎಕ್ಸ್‌ನಲ್ಲಿ ಬೈಕ್ ಮಾರಲು ಹೊರಟ ವಿದ್ಯಾರ್ಥಿಯೋರ್ವ ಅಲ್ಲಿ ದೊರೆತ ಗ್ರಾಹಕನ ಮಾತಿನ ಮೋಡಿಗೆ ಸಿಲುಕಿ ತನ್ನ ಉಳಿತಾಯ ಖಾತೆಯಲ್ಲಿದ್ದ 12 ಸಾವಿರ ರೂಪಾಯಿಯನ್ನು ಕಳೆದುಕೊಂಡ ಘಟನೆ ಬಜತ್ತೂರು ಗ್ರಾಮದಲ್ಲಿ ನಡೆದಿದೆ.

ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಈತ ಬಜತ್ತೂರು ನಿವಾಸಿಯಾಗಿದ್ದು, ತನ್ನಲ್ಲಿರುವ ಬೈಕನ್ನು ಮಾರಾಟ ಮಾಡಲು ಉದ್ದೇಶಿಸಿ ಓಎಲ್‌ಒಕ್ಸ್‌ನಲ್ಲಿ ಬೈಕ್‌ನ ವಿವರವನ್ನು ಅಪ್ಲೋಡ್ ಮಾಡಿದ್ದ. ಆ ಬಳಿಕ 8876992541 ನಂಬ್ರದ ಫೋನ್‌ನಿಂದ ಈತನಿಗೆ ವ್ಯಕ್ತಿಯೋರ್ವ ಕರೆ ಮಾಡಿದ್ದು, ತನಗೆ ಬೈಕ್ ಬೇಕು. ಹಣವನ್ನು ಹೇಗೆ ಕಳುಹಿಸಲಿ ಎಂದು ಈತನಲ್ಲಿ ವಿಚಾರಿಸಿದ್ದಾನೆ. ಈ ವೇಳೆ ಫೋನ್ ಪೇ ಮುಖೇನ ಹಣ ಕಳುಹಿಸಿ ಎಂದು ವಿದ್ಯಾರ್ಥಿಯು ತಿಳಿಸಿದ್ದು, ಬಳಿಕ ವಿದ್ಯಾರ್ಥಿಯ ವಾಟ್ಸಪ್ ಗೆ ಗ್ರಾಹಕ ಕ್ಯೂ ಆರ್ ಕೋಡನ್ನು ಕಳುಹಿಸಿ ಅದನ್ನು “ನಿಮ್ಮ ಫೋನ್ ಪೇಯಿಂದ ಸ್ಕ್ಯಾನ್ ಮಾಡಿದರೆ ನನ್ನ ಖಾತೆಯಿಂದ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ. ನಾಳೆ ಮುಂಜಾನೆ ನಾನು ಬಂದು ಬೈಕ್ ಪಡೆದುಕೊಂಡು ಹೋಗುವೆ” ಎಂದು ತಿಳಿಸಿದ್ದಾನೆ.

ಗ್ರಾಹಕ ತನ್ನ ಫೋನ್ ಪೇ ಯ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಬೇಕಾದ ವ್ಯವಸ್ಥೆಯ ಬದಲು ತಾನೇ ಗ್ರಾಹಕನ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡುವುದರಿಂದ ತನ್ನ ಖಾತೆಯಿಂದಲೇ ಹಣ ನಿನ್ನ ಖಾತೆಗೆ ಜಮೆಯಾಗುವುದಿಲ್ಲವೆ ? ಎಂದು ವಿದ್ಯಾರ್ಥಿಯು ಸಂಶಯ ವ್ಯಕ್ತಪಡಿಸಿ, ಗ್ರಾಹಕನ ಸೋಗಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯಲ್ಲಿ ಪ್ರಶ್ನಿಸಿದ್ದನ್ನಾದರೂ, ಗ್ರಾಹಕನ ಮಾತಿನ ಮೋಡಿಗೆ ಸಿಲುಕಿ ಆತ ಕಳುಹಿಸಿದ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿದ್ದನು. ಒಡನೆಯೇ ವಿದ್ಯಾರ್ಥಿಯ ಉಳಿತಾಯ ಖಾತೆಯಿಂದ 12 ಸಾವಿರ ರೂ. ಲಪಟಾಯಿಸಲ್ಪಟ್ಟಿದೆ. ಈತನಿಗಾದ ವಂಚನೆಯ ಬಗ್ಗೆ ವಿದ್ಯಾರ್ಥಿಯು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾನೆ.

ಒಟಿಪಿ ಪಡೆದು ವಂಚಿಸುವ ವಂಚನಾ ಜಾಲದ ಬಗ್ಗೆ ಜನತೆ ಜಾಗೃತರಾಗುತ್ತಿದ್ದಂತೆಯೇ ಫೋನ್ ಪೇ ವ್ಯವಸ್ಥೆಯ ಬಗ್ಗೆ ಪೂರ್ಣ ಅರಿವನ್ನು ಹೊಂದಿರದ ಮಂದಿಯನ್ನು ಮಾತಿನ ಮೋಡಿಯಲ್ಲಿ ವಂಚಿಸುವ ಜಾಲಗಳೂ ಇದೀಗ ಕಾರ್ಯೋನ್ಮುಖಗೊಂಡಿವೆ. ಆದ್ದರಿಂದ ನಾಗರಿಕರು ಎಚ್ಚರಿಕೆ ವಹಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.