Home_Page_Advt
Home_Page_Advt
Home_Page_Advt

ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|ಪ್ರಸನ್ನ ರೈ ವಯೋನಿವೃತ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಾಡೋಜ ಕವಿ ಕಯ್ಯಾರ ಕಿಂಞಣ್ಣ ರೈಯವರ ಪುತ್ರ ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಡಾ|ಪ್ರಸನ್ನ ರೈ ಕೆ.ರವರು ತಮ್ಮ ೩೦ ವರ್ಷಗಳ ಸೇವೆಯ ಬಳಿಕ ಮೇ ೩೦ರಂದು ವಯೋನಿವೃತ್ತಿ ಹೊಂದುತ್ತಿದ್ದಾರೆ.

ಕಾಸರಗೋಡಿನ ಬದಿಯಡ್ಕ ಗ್ರಾಮದ ಕಲ್ಲಕಳಿಯ ಎಂಬ ಹಳ್ಳಿಯಲ್ಲಿ ಹುಟ್ಟಿದ ಡಾ|ಪ್ರಸನ್ನ ರೈರವರು ಕೃಷಿಕರಾಗಿ ಗುರುತಿಸಿಕೊಂಡವರು. ಪ್ರಥಮವಾಗಿ ರಬ್ಬರ್ ಬೆಳೆಯನ್ನು ತನ್ನೂರಲ್ಲಿ ಪರಿಚಯಿಸಿದ್ದಲ್ಲದೆ ಬೈಫ್ ಸಂಸ್ಥೆಯಲ್ಲಿ ಗ್ರಾಮೀಣಾಭಿವೃಧ್ದಿ ಅಧಿಕಾರಿಯಾಗಿಯೂ ಅನುಭವಗಳಿಸಿ ಕಾಸರಗೋಡಿನ ಗ್ರಾಮೀಣಾಭಿವೃದ್ದಿ ಹಾಗೂ ಸ್ವ-ದ್ಯೋಗ ತರಬೇತಿ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಪ್ರಸನ್ನ ರೈಯವರು ಅಧ್ಯಾಪನದಲ್ಲಿ ತನ್ನ ಆಸಕ್ತಿ ಮತ್ತು ಒಲವನ್ನು ಅರಿತು, ಶಿಕ್ಷಣ ಕ್ಷೇತ್ರಕ್ಕೆ ಬಂದವರು. ೧೯೮೮-೮೯ರಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನವನ್ನು ಆರಂಭಿಸಿ, ೧೯೯೧ರಿಂದ ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದು ಮಾತ್ರವಲ್ಲದೆ ಪ್ರಸ್ತುತ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾಗುತ್ತಿರುವರು. ಕ್ರಿಯಾಶೀಲ, ಅಧ್ಯಯನಶೀಲ ವ್ಯಕ್ತಿತ್ವಹೊಂದಿದ ಡಾ|ಪ್ರಸನ್ನ ರೈಯವರು ಬೋಧನಾ ವೃತ್ತಿಯ ಆರಂಭದಲ್ಲಿ ಉಚ್ಛ ಶಿಕ್ಷಣದಲ್ಲಿ ಆಸಕ್ತಿತೋರಿಸಿ ಮಂಗಳೂರು ವಿ.ವಿ.ಯಲ್ಲಿ ನಡೆಸಿದ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ಗಳಿಸಿರುತ್ತಾರೆ.

ಕಾಸರಗೋಡಿನ ಬದಿಯಡ್ಕದ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನವಜೀವನ ಹೈಸ್ಕೂಲ್ ಪೆರಡಾಲದಲ್ಲಿ ಪ್ರೌಢ ಶಿಕ್ಷಣ, ಎಂಜಿಎಂ ಕಾಲೇಜು ಉಡುಪಿಯಲ್ಲಿ ಪದವಿ ಪೂರ್ವ ಶಿಕ್ಷಣ, ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಹಾಗೂ ಮಂಗಳೂರು ವಿವಿಯಲ್ಲಿ ಸಸ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ದ್ವಿತೀಯ ರ್‍ಯಾಂಕಿನೊಂದಿಗೆ ಪೂರೈಸಿರುತ್ತಾರೆ. ಇವರು ಮಂಗಳೂರು ವಿವಿಯ ಮತ್ತು ವಿವಿಧ ಸ್ವಾಯತ್ತ ಕಾಲೇಜುಗಳಲ್ಲಿ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಗಳಲ್ಲಿ ಸದಸ್ಯರಾಗಿದ್ದರು. ಮಂಗಳೂರು ವಿವಿ ಸಸ್ಯಶಾಸ್ತ್ರ ಉಪನ್ಯಾಸಕರ ಸಂಘ ‘ವನಶ್ರೀ’ ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಅಧ್ಯಕ್ಷರಾಗಿರುತ್ತಾರೆ. ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾಲಯದಲ್ಲಿ ತಾಂತ್ರಿಕ ಮೌಲ್ಯಮಾಪಕರಾಗಿ ಗುರುತಿಸಲ್ಪಟ್ಟಿರುವ ಇವರು ಅಲ್ಲಿನ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಸಂಶೋಧಕರಾಗಿಯೂ ದುಡಿದಿರುವರು.

ಡಾ|ಪ್ರಸನ್ನ ರೈರವರು ತಮ್ಮ ಸೇವಾವಧಿಯಲ್ಲಿ ಕಾಲೇಜಿನ ಲಲಿತಕಲಾ ಸಂಘ, ವಿಜ್ಞಾನ ಸಂಘಗಳ ನಿರ್ದೇಶಕರಾಗಿದ್ದರು. ನಾಡೋಜ ಕವಿ ಕಯ್ಯಾರ ಕಿಂಞಣ್ಣ ರೈ ಇವರ ಸುಪುತ್ರನಾಗಿದ್ದು, ಕವಿತಾ ಕುಟೀರ ಪೆರಡಾಲದ ಕಾರ್ಯದರ್ಶಿಯಾಗಿ ಹಲವಾರು ಸಾಹಿತ್ಯ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ನಾಡೋಜರ ಕುರಿತ ಆರು ಕೃತಿಗಳ ಸಂಪಾದಕರಾಗಿ ನಿರ್ವಹಿಸಿದುದಲ್ಲದೆ, ೧೮ ಪುಸ್ತಕಗಳನ್ನು ಸಂಸ್ಥೆಯ ಮೂಲಕ ಪ್ರಕಟಣೆ ಮಾಡಿರುತ್ತಾರೆ. ವಿಜ್ಞಾನ ವಿಷಯಗಳ ಹಲವಾರು ಭಾಷಣಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಹಾಗೆಯೇ ಕವಿ ಕಯ್ಯಾರರ ಕವನಗಳನ್ನು ಹಲವಾರು ವೇದಿಕೆಗಳಲ್ಲಿ ಹಾಡಿರುತ್ತಾರೆ. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಮತ್ತು ರೋಟರಿ ಕ್ಲಬ್ ಪುತ್ತೂರು ಪೂರ್ವ ಇವುಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಡಾ|ಪ್ರಸನ್ನ ರೈರವರಿಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.