Home_Page_Advt
Home_Page_Advt
Home_Page_Advt

ಒಡಿಯೂರು ಶ್ರೀ ಗ್ರಾಮ ವಿಕಾಸಯೋಜನೆ ಕಾವು ಘಟ ಸಮಿತಿ ವತಿಯಿಂದ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಈಶ್ವರಮಂಗಲ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಾವು ಘಟ ಸಮಿತಿ ವತಿಯಿಂದ ಮೇ.30ರಂದು ಯೋಜನೆಯ ನಿರ್ದೇಶಕ ಕಿರಣ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಂಘದ ಸದಸ್ಯರಿಗೆ ಆಹಾರದ ಕಿಟ್ ವಿತರಿಸಿದರು.

ಬಳಿಕ ಮಾತನಾಡಿದ ಅವರು ಕೊರೋನಾ ವೈರಸ್ ಹೆದರುವ ಅಗತ್ಯವಿಲ್ಲ, ನಾವು ನಮ್ಮ ರಕ್ಷಣೆ ಮಾಡಬೇಕು, ಸೋಶಿಯಲ್ ಡಿಸ್ಟೇನ್ಸ್ ಮಾಡಬೇಕು, ಮಕ್ಕಳು ಮತ್ತು ಹಿರಿಯರು ಜಾಗೃತೆ ವಹಿಸಬೇಕು ಮತ್ತು ಹೊರಗಡೆ ಹೋಗುವ ಸಂದರ್ಭದಲ್ಲಿ ಮಾಸ್ಕ್ ಬಳಸಬೇಕು, ಯಾರೂ ಹೊರಗಡೆ ಬರಬಾರದು, ಸದಸ್ಯರು ಆರ್ಥಿಕವಾಗಿ ಮುಂದುವರೆಯಲು, ಆದಾಯ ಬರಲು ಕೋಳಿ ಸಾಕಾಣಿಕೆ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಾವು ಘಟ ಸಮಿತಿಯ ಅಧ್ಯಕ್ಷ ಶಿವರಾಮ್ ಪೂಜಾರಿ ಕೆರೆಮಾರು, ಸಂಯೋಜಕಿ ಸವಿತಾ ಜೆ. ರೈ, ಕಾವು ಘಟ ಸಮಿತಿ ಉಪಾಧ್ಯಕ್ಷೆ ಕಸ್ತೂರಿ ಉಪಸ್ಥಿತರಿದ್ದರು. ಕಾವು ಘಟ ಸಮಿತಿಯ ಕಾರ್ಯದರ್ಶಿ ರಮಾನಾಥ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಸೇವಾಧೀಕ್ಷಕಿ ಗೀತಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.