Home_Page_Advt
Home_Page_Advt
Home_Page_Advt

ಪುತ್ತೂರು ಪ್ರಾ.ಸ.ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ವ್ಯವಸ್ಥಾಪಕಿ ದಯಾಮಣಿ ನಿವೃತ್ತಿ- ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

ವರದಿ: ಉಮಾಪ್ರಸಾದ್ ರೈ ನಡುಬೈಲು

  • ಬ್ಯಾಂಕ್ ರೈತರ ಪರ- ಭಾಸ್ಕರ್ ಎಸ್. ಗೌಡ ಇಚ್ಲಂಪಾಡಿ

ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಯಾವಾಗಲೂ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕ್ ಒಳ್ಳೆಯ ಸ್ಥಾನಕ್ಕೆ ಏರಲು ಗ್ರಾಹಕರ ಪ್ರೋತ್ಸಾಹ ಕಾರಣವಾಗಿದ್ದು, ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂಧಿಗಳ ನಿರಂತರ ಪ್ರೋತ್ಸಾಹದಿಂದ ಬ್ಯಾಂಕ್ ಉನ್ನತವಾದ ಸ್ಥಾನವನ್ನು ಪಡೆದಿದೆ ಎಂದು ಪುತ್ತೂರು ಪ್ರಾ. ಸ. ಕೃ ಮತ್ತು ಗ್ರಾ. ಅ. ಬ್ಯಾಂಕ್‌ನ ಆಡಳಿತ ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಗೌಡ ಇಚ್ಲಂಪಾಡಿರವರು ಹೇಳಿದರು.

ಅವರು ಮೇ ೩೦ ರಂದು ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ವ್ಯವಸ್ಥಾಪಕಿ ದಯಾಮಣಿರವರ ನಿವೃತ್ತಿಯ ಪ್ರಯುಕ್ತ ಬ್ಯಾಂಕ್ ವತಿಯಿಂದ ಏರ್ಪಡಿಸಲಾದ ಸರಳ ರೀತಿಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿ ದಯಾಮಣಿರವರು ೩೯ ವರುಷಗಳ ಕಾಲ ಅತ್ಯುತ್ತಮ ರೀತಿಯಲ್ಲಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಕಾರ್‍ಯನಿರ್ವಹಿಸಿ, ಬ್ಯಾಂಕ್ ಮತ್ತು ಗ್ರಾಹಕರ ವಲಯದಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ ಎಂದು ಹೇಳಿ, ಇನ್ನೂ ಮುಂದೆ ಬ್ಯಾಂಕಿನ ನೂತನ ವ್ಯವಸ್ಥಾಪಕರಾಗಿ ಕಾರ್‍ಯನಿರ್ವಹಿಸಲಿರುವ ಬಾಲಕೃಷ್ಣರವರಿಗೆ ಎಲ್ಲರೂ ಸಹಕಾರವನ್ನು ನೀಡುವಂತೆ ಕೋರಿದರು.

ಸನ್ಮಾನ
ಬ್ಯಾಂಕಿನ ವ್ಯವಸ್ಥಾಪಕಿ ದಯಾಮಣಿರವರನ್ನು ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ದಯಾಮಣಿರವರು ಮಾತನಾಡಿ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತನಗೆ ಪೂರ್ಣ ಸಹಕಾರ ನೀಡಿದ ಆಡಳಿತ ಮಂಡಳಿ ಮತ್ತು ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿ, ನಾನು ನನ್ನ ಸೇವಾವಧಿಯಲ್ಲಿ ಕರ್ತವ್ಯವೇ ದೇವರು ಎಂದು ನಂಬಿ ಸೇವೆ ಮಾಡಿದ್ದೇನೆ ಎಂಬ ತೃಪ್ತಿ ಇದೆ ಎಂದು ಹೇಳಿದರು.

ಬ್ಯಾಂಕಿನ ನಿರ್ದೇಶಕ ರಾಜಶೇಖರ್ ಜೈನ್‌ರವರು ಮಾತನಾಡಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ದಯಾಮಾಣಿರವರು ಬ್ಯಾಂಕಿನಲ್ಲಿ ಸೇವೆ ಮಾಡಿದ್ದಾರೆ ಎಂದು ಹೇಳಿದರು.

ಬ್ಯಾಂಕಿನ ನೂತನ ವ್ಯವಸ್ಥಾಪಕ ಬಾಲಕೃಷ್ಣ ರವರು ಮಾತನಾಡಿ ಸೌಮ್ಯ ಮತ್ತು ಸರಳತೆಯಿಂದ ದಯಾಮಾಣಿರವರು ಬ್ಯಾಂಕಿನಲ್ಲಿ ಉತ್ತಮ ಹೆಸರುಗಳಿಸಿದ್ದಾರೆ ಎಂದು ಹೇಳಿದರು.

ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಹೊನ್ನಪ್ಪ ಗೌಡರವರು ಮಾತನಾಡಿ ಬ್ಯಾಂಕಿನ ಪ್ರಗತಿಯಲ್ಲಿ ದಯಾಮಣಿರವರು ಉತ್ತಮ ಕೊಡುಗೆ ನೀಡಿದ್ದಾರೆ. ಬ್ಯಾಂಕ್ ಈ ರೀತಿಯ ಸಾಧನೆಗೆ ಉತ್ತಮ ಆಡಳಿತವೇ ಕಾರಣವಾಗಿದೆ ಎಂದು ಹೇಳಿ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ಕೃಷಿಕನ ಒಡನಾಡಿಯಾಗಿ ಸದಾ ಮುಂಚೂಣಿಯಲ್ಲಿ ಸೇವೆಯನ್ನು ಮಾಡುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಸುಜಾತ ರಂಜನ್ ರೈ ಬೀಡು, ಕೋಶಾಧಕಾರಿ ನಾರಾಯಣ ಪೂಜಾರಿ ಕುರಿಕ್ಕಾರ, ನಿರ್ದೇಶಕರುಗಳಾದ ಎ,ಬಿ.ಮನೋಹರ್ ರೈ ನಾರಾಯಣ ಕೆ.ಕನ್ಯಾನ, ದೇವಯ್ಯ ಗೌಡ ಖಂಡಿಗ, ಧರ್ಣಪ್ಪ ಮೂಲ್ಯ, ಪ್ರವೀಣ್ ರೈ, ಮೀನಾಕ್ಷಿ, ಸೋಮಪ್ಪ ನಾಯ್ಕ, ಯುವರಾಜ್ ಕೆ, ಬ್ಯಾಂಕಿನ ಲೆಕ್ಕಾಧಿಕಾರಿ ಸುಮನ, ಆರತಿ, ಸುರೇಶ್ ಪಿ, ಎನ್ ವೇಣು ಭಟ್, ಭೆರತ್ ಟಿ, ಹರೀಶ್ ಗೌಡ, ಪುನೀತ್, ವಿಜಯ್ ಭಟ್, ವಿನಯ ಕುಮಾರ್ ಗೌಡ, ಶಿವಪ್ರಸಾದ್ ಯು, ಮನೋಜ್ ಕುಮಾರ್, ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಯಶೋಧರ್ ಜೈನ್, ನಿವೃತ್ತ ಕ್ಷೇತ್ರಾಧಿಕಾರಿ ಪದ್ಮಯ್ಯ ಗೌಡ, ಸೇವಂತಿ, ವಾರಿಜಾ, ದಯಾಮಣಿರವರ ಪತಿ ಕುಶಾಲ ಗೌಡ, ಪುತ್ರ ಹರ್ಷಿತ್, ಸಹೋದರ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಮತ್ತಿತರರರು ಉಪಸ್ಥಿತರಿದ್ದರು. ಬ್ಯಾಂಕಿನ ಕ್ಷೇತ್ರಾಧಿಕಾರಿ ವಿನಯ ಕುಮಾರ್ ಕೆ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.