Home_Page_Advt
Home_Page_Advt
Home_Page_Advt

ಸರ್ವೆ ಹಾಸ್ಟಲ್ ಕ್ವಾರಂಟೈನ್‌ನಲ್ಲಿದ್ದ ಮಹಿಳೆಯ ವರದಿ ನೆಗೆಟಿವ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹಾರಾಷ್ಟ್ರದಿಂದ ಬಂದು ಸರ್ವೆ ಗ್ರಾಮದ ಕಲ್ಪಣೆ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿದ್ದ ಗ್ರಾಮದ ಮಹಿಳೆಯೋರ್ವರ ಗಂಟಲ ದ್ರವ ಮಾದರಿ ಪರೀಕ್ಷೆ ವರದಿ ನೆಗೆಟಿವ್ ಆಗಿದೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದಿಂದ ಬಂದಿದ್ದ ಸರ್ವೆ ಗ್ರಾಮದ ನಾಲ್ಕು ಮಂದಿಯನ್ನು ಕಲ್ಪಣೆಯಲ್ಲಿರುವ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆ ಪೈಕಿ ದಂಪತಿ ಹಾಗೂ ಪುತ್ರಿಗೆ ಕೊರೋನಾ ಸೋಂಕು ಇರುವುದು ಮೇ.27ರಂದು ಧೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಒಂದೇ ಹಾಸ್ಟೆಲಿನಲ್ಲಿದ್ದ ನಾಲ್ವರ ಪೈಕಿ ಮೂವರಿಗೆ ಕೊರೋನಾ ಸೋಂಕು ಧೃಢಪಟ್ಟಿದ್ದ ಹಿನ್ನೆಲೆಯಲ್ಲಿ ಈ ಮಹಿಳೆಗೂ ಸೋಂಕು ತಗುಲಿರಬಹುದೇ ಎನ್ನುವ ಆತಂಕ ಹೆಚ್ಚಾಗಿತ್ತು. ಆದರೆ ಮೇ.30ರಂದು ಅವರ ಗಂಟಲ ದ್ರವ ಮಾದರಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಹೊರ ರಾಜ್ಯದಿಂದ ಬಂದವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದ್ದು ಇನ್ನುಳಿದ ದಿನ ಮಹಿಳೆ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಲು ಅವಕಾಶವಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.