Home_Page_Advt
Home_Page_Advt
Home_Page_Advt

ನೋಟರಿ ನ್ಯಾಯವಾದಿಯಾಗಿ ಬನ್ನೂರಿನ ರಜಿತಾ ದಯಾನಂದ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: 2019-20ನೇ ಸಾಲಿಗೆ ಭಾರತ ಸರಕಾರದ ನೋಟರಿಯಾಗಿ ಬನ್ನೂರು ನಿವಾಸಿ ರಜಿತಾ ದಯಾನಂದ್ ಅವರು ನೇಮಕಗೊಂಡಿದ್ದಾರೆ.

ಬನ್ನೂರು ಆರ್.ಟಿ.ಒ ಬಳಿ ನಿವಾಸಿಯಾಗಿರುವ ಇವರು ಮಂಗಳೂರು ಶ್ರೀನಿವಾಸ ಕೋಟ್ಯಾನ್ ಹಾಗೂ ವಜ್ರಾಕ್ಷಿ ದಂಪತಿ ಪುತ್ರಿಯಾದ ಇವರು ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ 2008ರಲ್ಲಿ ಕಾನೂನು ಪದವಿಯನ್ನು ಪಡೆದು ಕೊಂಡು ಒಂದು ವರ್ಷ ಕಾಲ ಮಂಗಳೂರಿನಲ್ಲಿ ವಕೀಲವೃತ್ತಿಯನ್ನು ನಿರ್ವಹಿಸಿ ವಿವಾಹದ ನಂತರ ಕಳೆದ 11 ವರ್ಷಗಳಿಂದ ಪುತ್ತೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ದಯಾನಂದ ಪಿ ಅವರು ಭಾರತೀಯ ಜೀವವಿಮಾನಿಗಮದ ಪುತ್ತೂರು ಶಾಖೆಯಲ್ಲಿ ಸೆಂಚುರಿಯನ್ ವಿಮಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೋಟರಿಯಾಗಲು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸು ಮಾಡಿದ್ದರು. ಪ್ರಸ್ತುತ ರಜಿತಾ ದಯಾನಂದ್ ಅವರು ಸರಕಾರಿ ಆಸ್ಪತ್ರೆಯ ಬಳಿಯ ಸಾರಥೀ ಭವನದಲ್ಲಿ ‘ವಜ್ರ ಲಾ ಛೇಂಬರ್ಸ್’ ಸ್ವಂತ ಕಚೇರಿಯನ್ನು ಹೊಂದಿದ್ದು, ಕಾನೂನಿಗೆ ಸಂಬಂಧಿಸಿದ ಸೇವೆಗಳಿಗೆ ಲಭ್ಯರಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.