Home_Page_Advt
Home_Page_Advt
Home_Page_Advt

ನೂಜಿಬಾಳ್ತಿಲ: ತೋಟದಲ್ಲಿ ಮಿಡತೆ ಹಿಂಡು ಪತ್ತೆ! ಆತಂಕದಲ್ಲಿ ಕೃಷಿಕರು

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಕೃಷಿಕರೋರ್ವರ ತೋಟದಲ್ಲಿ ಅಪರೂಪದ ಮಿಡತೆ ಗುಂಪೊಂದು ಮೇ 29ರ ಸಾಯಂಕಾಲ ಹೊತ್ತು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

ಕೊಣಾಜೆ ಕಾಡಂಚಿನ ಪ್ರದೇಶದ ಹೇರ ಎಂಬಲ್ಲಿ ಕೃಷಿಕ ಆನಂದ ಅವರ ತೋಟದ ಜಾಗದಲ್ಲಿ ಮರವೊಂದರಲ್ಲಿ ಶುಕ್ರವಾರ ಸಾಯಂಕಾಲ ಹೊತ್ತು ಈ ಮಿಡತೆಯ ಹಿಂಡು ಕಾಣಿಸಿಕೊಂಡಿದೆ. ಈ ಮಿಡತೆಗಳು ರಾತ್ರಿವರೆಗೂ ಕಾಣಿಸಿಕೊಂಡು, ಹಗಲು ಹೊತ್ತು ಕಾಣಸಿಗುತ್ತಿಲ್ಲ. ಶನಿವಾರ ಬೆಳಿಗ್ಗೆ ಇದೇ ಮರದಲ್ಲಿ ಹಕ್ಕಿಗಳು ಹಾರಾಡುತ್ತಿತ್ತು. ಆದರೆ ಮಿಡತೆಗಳು ಕಾಣಿಸಿಕೊಂಡಿಲ್ಲ ಎಂದವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗದ ಬೀದರ್ ಜಿಲ್ಲೆ ಮೊದಲಾದೆಡೆ ಕಾಣಿಸಿಕೊಂಡ ಮಿಡತೆಯ ಗಾತ್ರವನ್ನು ಇಲ್ಲಿ ಕಂಡು ಬಂದ ಮಿಡತೆಗಳೂ ಹೋಲುತ್ತಿದ್ದು ಇದರಿಂದಾಗಿ ಈ ಭಾಗಕ್ಕೂ ಅಪರೂಪದ ಹಸಿರು ಮಿಡತೆ ವಕ್ಕರಿಸಿದೆ ಎನ್ನುವ ಆತಂಕ ಈ ಭಾಗದ ರೈತರಲ್ಲಿ ಮನೆಮಾಡಿದೆ. ಈ ಬಗ್ಗೆ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ಮೇ.೩೧ರಂದು ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಮಿಡತೆಯಿಂದ ಆತಂಕ ಉಂಟಾಗಿದೆ-
ವಿಶ್ವನಾಥ ಹೇರ ಇತ್ತೀಚೆಗೆ ದೇಶದ ಹೊರ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಮಿಡತೆಗಳ ಬಗ್ಗೆ ಮಾಧ್ಯಮದ ಮೂಲಕ ತಿಳಿದು ಆತಂಕವಾಗಿದೆ. ನಮ್ಮ ಪ್ರದೇಶದ ತೋಟದಲ್ಲಿ ಮಿಡತೆ ಹಿಂಡು ಕಾಣಿಸಿಕೊಂಡಿದ್ದು, ಆತಂಕವನ್ನುಂಟು ಮಾಡುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಿ ಎಂದು ವಿಶ್ವನಾಥ ಹೇರ ಅವರು ಮನವಿ ಮಾಡಿದ್ದಾರೆ. 

ವಲಸೆ ಬಂದಿರುವ ಮಿಡತೆ ಅಲ್ಲ ಜೈವಿಕ ಹಾಗೂ ಭೌಗೋಳಿಕ ಬದಲಾವಣೆಯಿಂದ ಮಿಡತೆಗಳ ಸಂತಾನೋತ್ಪತ್ತಿ ಈ ಬಾರಿ ಹೆಚ್ಚಳವಾಗಿದೆ ಎಂದು ಜೀವ ವಿಜ್ಞಾನಿಗಳ ವಾದ.ಈ ಬಾರಿ ಮುಂಗಾರು ಪೂರ್ವ ಹೆಚ್ಚಿನ ಮಳೆಯಾಗಿದ್ದರಿಂದ ಮಿಡತೆ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಇತ್ತು.ಕಡಬ ಭಾಗದ ತೋಟದಲ್ಲಿ ಕಂಡುಬಂದ ಮಿಡತೆ ಅಕ್ರಿಡಿಡೆ ಕುಟುಂಬಕ್ಕೆ ಸೇರಿದ ಕೀಟ.ಟೈಲೋಟ್ರೋಪಿಡಿಯಸ್ ವರಿಕಾರ್ನಿಸ್ ಎಂಬುದು ಇದರ ಮೂಲ ಹೆಸರು. ಇದು ಸ್ಥಳೀಯವಾಗಿ ಜೀವಿಸುವ ಮಿಡತೆ ಹೊರತು ವಲಸೆ ಬಂದಿರುವ ಮಿಡತೆ ಅಲ್ಲ.ಸೆರೆಟೊನಿನ್ ಎಂಬ ಹಾರ್ಮೋನ್ ಪ್ರಮಾಣ ಜಾಸ್ತಿ ಉತ್ಪತ್ತಿ ಮತ್ತು ಸ್ರವಿಸುವಿಕೆಯಿಂದ ಮಿಡತೆಗಳಲ್ಲಿ ಹೆಚ್ಚಿನ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಯುತ್ತದೆ. ಈ ಹಾರ್ಮೋನ್ ಮಿಡತೆಗಳಲ್ಲಿ ಬಣ್ಣದಲ್ಲಿ ಬದಲಾವಣೆ, ಅತಿಯಾಗಿ ತಿನ್ನುವುದು ಮತ್ತು ವೇಗವಾಗಿ ವಂಶಾಭಿವೃದ್ಧಿಗೆ ಪ್ರಚೋದಿಸುತ್ತದೆ.ಆಹಾರ ಸರಪಳಿಯಲ್ಲಿನ ಅಸಮತೋಲನವು ಮಿಡತೆಗಳ ಸಂಖ್ಯಾ ಸಾಂದ್ರತೆಗೆ ಕಾರಣ. ಹಕ್ಕಿಗಳ ಪ್ರಮುಖ ಆಹಾರ ಈ ಮಿಡತೆಗಳಾಗಿದ್ದು ವಿಶೇಷವಾಗಿ ವಲಸೆ ಹಕ್ಕಿಗಳ ಸಂತತಿ ಕಡಿಮೆಯಾಗಿರುವುದೇ ಮಿಡತೆ ಸಂತತಿ ಹೆಚ್ಚಳಕ್ಕೆ ಮೂಲ ಕಾರಣ.ಬೇವಿನ ಆಧಾರಿತ ಕೀಟನಾಶಕಗಳು ಅಥವಾ ಕ್ಲೋರ್ಪಿರಿ-ಪೊಸ್ ಮತ್ತು ಲ್ಯಾಂಬ್ಡಾ-ಸಿಹಲೋಥ್ರಿನ್ ಕೀಟನಾಶಕಗಳನ್ನು ಸಿಂಪಡಿಸಿ ಅವುಗಳನ್ನು ಹತೋಟಿಗೆ ತರಬಹುದು ಎಂದು ಜೀವವಿಜ್ಞಾನ ಹಾಗೂ ಜೀವವೈವಿದ್ಯ ಸಂಶೋಧಕ ಪ್ರೊ.ಪ್ರಶಾಂತ್ ನಾಕ್ ಬೈಂದೂರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.