Home_Page_Advt
Home_Page_Advt
Home_Page_Advt

ಮೋದಿ ನಾಯಕತ್ವವನ್ನು ವಿಶ್ವನಾಯಕರೇ ಪ್ರಶಂಸಿಸುವಂತಾಗಿದೆ | ಭಾರತ ವಿಶ್ವದಲ್ಲೇ ಗುರುತಿಸುವಂತಾಗಿದೆ: ನಳಿನ್ ಕುಮಾರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸತತ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡು ಐದು ವರ್ಷದ ಪ್ರಥಮ ಅವಧಿ ಮತ್ತು ಪ್ರಸ್ತುತ ಆಡಳಿತದ ಒಂದು ವರ್ಷದ ಅವಧಿಯಲ್ಲಿ ಅಮೇರಿಕಾ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದ ಕಡೆಗೆ ನೋಡುವಂತೆ ಮಾಡಿರುವುದಲ್ಲದೆ ಮೋದಿಯವರ ನಾಯಕತ್ವವನ್ನು ವಿಶ್ವದ ಎಲ್ಲಾ ನಾಯಕರು ಪ್ರಶಂಸಿಸುವಂತೆ ಆಗಿದ್ದು ಭಾರತವು ವಿಶ್ವದಲ್ಲೇ ಉನ್ನತ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ದ.ಕ.ಸಂಸದರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸ್ವಾತಂತ್ರ್ಯ ನಂತರ ಭಾರತವನ್ನು ದಶಕಗಳಿಂದ ಕಾಡುತ್ತಿದ್ದ ಅನೇಕ ಗಂಭೀರ ಸಮಸ್ಯೆಗಳಿಗೆ ಎರಡನೇ ಅಧಿಕಾರದ ಒಂದೇ ವರ್ಷದಲ್ಲಿ ಯಶಸ್ವಿ ಹಾಗೂ ದಿಟ್ಟತನದ ನಿರ್ಧಾರಗಳ ಮೂಲಕ ರಾಜಕೀಯ ನೈಪುಣ್ಯತೆ ಪ್ರದರ್ಶಿಸಿದ ಮೋದಿಯವರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ ಹಾಗೂ ೩೫ನೇ ವಿಧಿ ತೆರವುಗೊಳಿಸಿದ್ದು ಒಂದೇ ದೇಶ, ಒಂದೇ ನ್ಯಾಯ ಎಲ್ಲಾ ಪ್ರಜೆಗಳು ಸಮಾನರು, ಭಾರತದ ಏಕತೆ ಮತ್ತು ಅಖಂಡತೆಯನ್ನು ಸಾರಿದ ಐತಿಹಾಸಿಕ ನಿರ್ಧಾರವಾಗಿದೆ ಎಂದು ನಳಿನ್ ಕುಮಾರ್ ಹೇಳಿದರು.

ಸಾವಿರಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾಗೂ ಬಹುಕೋಟಿ ಭಾರತೀಯರ ಸ್ವಾಭಿಮಾನದ ಸಂಕೇತವಾದ ರಾಮಜನ್ಮ ಭೂಮಿ ವಿವಾದಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ಸರ್ವ ಸಮ್ಮತ ನಿರ್ಧಾರವನ್ನು ಕೈಗೊಂಡು ಟ್ರಸ್ಟ್‌ನ ಮೂಲಕ ಮಂದಿರ ನಿರ್ಮಾಣ ಕಾರ್ಯ, ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಧಾರ್ಮಿಕ ಶೋಷಣೆಗೊಳಗಾದವರಿಗೆ ರಕ್ಷಣೆ ಮತ್ತು ಅನ್ಯದೇಶದಲ್ಲಿ ವಾಸಿಸುವ ಮತ್ತು ಭಾರತಕ್ಕೆ ಮರಳಲು ಇಚ್ಚಿಸುವ ಭಾರತಿಯರಿಗೆ ಪೌರತ್ವ ನೀಡುವ ನಿರ್ಧಾರ, ಮುಸ್ಲಿಮ್ ಧಾರ್ಮಿಕ ಕಾಯ್ದೆಯ ರಕ್ಷಣೆಯನ್ನು ಪಡೆದುಕೊಂಡು ತ್ರಿವಳಿ ತಲಾಖ್ ರದ್ದು ಮಾಡಿದ್ದು, ಬ್ಯಾಂಕ್‌ಗಳ ವಿಲೀನ ಮೊದಲಾದ ಐತಿಹಾಸಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಭಾರತೀಯ ಪ್ರಜೆಗಳ ನಂಬಿಕೆಗೆ ಬೆಲೆ ಬಂದಿದೆ.ನೆರೆ ಪರಿಹಾರ, ಅತ್ಯದ್ಭತ ರೀತಿಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಕೊರೊನಾ ವ್ಯಾಪಿಸದಂತೆ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು, ದಿಟ್ಟ ನಿರ್ಧಾರ, ರಾಜಕೀಯ ಇಚ್ಚಾಶಕ್ತಿ ನರೇಂದ್ರ ಮೋದಿಯವರ ಆಡಳಿತಕ್ಕೆ ಸಾಕ್ಷಿಯಾಗಿದೆಯೆಂದ ಅವರು, ನರೇಂದ್ರ ಮೋದಿಯವರು ವಿಶ್ವ ದ ಅಗ್ರಗಣ್ಯ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು.ಮೇಕ್ ಇನ್ ಇಂಡಿಯಾ,ಜನ್‌ಧನ್,ಕಿಸಾನ್ ಕಾರ್ಡ್,ಕಿಸಾನ್ ಸಮ್ಮಾನ್ ಮೊದಲಾದ ಯೋಜನೆಗಳು, ಇಪ್ಪತ್ತು ಲಕ್ಷ ಕೋಟಿ ಯೋಜನೆಗಳ ಮೂಲಕ ಸಾಮಾನ್ಯ ಜನರ ಆತಂಕದ ಬದುಕಿಗೆ ಆಶ್ರಯ ನೀಡಿದ್ದಾರೆ.ಕಳೆದ ಆರು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಇದು ಮೋದಿ ಸಾರಥ್ಯದ ಟೀಮ್ ಇಂಡಿಯಾದ ಸಾಧನೆ.ಚೀನಾ ದೇಶವು ಕಾಲು ಕೆರೆದಾಗ ನೀಡಿದ ಉತ್ತರ ಮೋದಿಯವರ ದಿಟ್ಟತನಕ್ಕೆ ಸಾಕ್ಷಿಯಾಗಿದೆ ಎಂದರು. ನರೇಂದ್ರ ಮೋದಿಯವರನ್ನು ದೇಶದ ೯೨ ಶೇ.ಜನರು ಮೆಚ್ಚಿಕೊಂಡಿದ್ದಾರೆ.ಪ್ರಧಾನಿಯವರ ಕಾರ್ಯವೈಖರಿ, ದಿಟ್ಟ ನಿರ್ಧಾರ, ಮತದಾರರ ವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

ಯಡಿಯೂರಪ್ಪರವರೇ ಪೂರ್ಣಾವಧಿ ಮುಖ್ಯಮಂತ್ರಿ:
ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಬಹಳಷ್ಟು ಮುಂಜಾಗ್ರತಾ ಕ್ರಮಕೈಗೊಂಡಿರುತ್ತಾರೆ.ಆಡಳಿತಾತ್ಮಕವಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಯಡಿಯೂರಪ್ಪನವರ ನಾಯಕತ್ವವನ್ನು ಎಲ್ಲಾ ಶಾಸಕರು ಒಪ್ಪಿಕೊಂಡಿದ್ದಾರೆ. ಶಾಸಕರಿಗೆ ಸಿ.ಯಂ ಜೊತೆ ಭಿನ್ನಾಭಿಪ್ರಾಯವಿಲ್ಲ. ಅಭಿವೃದ್ಧಿಯ ದೃಷ್ಟಿಯಲ್ಲಿ ಕೆಲವೊಂದು ಶಾಸಕರು ಒಟ್ಟು ಸೇರಿದ್ದಾರೆ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸುತ್ತಾರೆ.ಪಕ್ಷದೊಳಗೆ ಅಶಿಸ್ತು ಸಹಿಸುವುದಿಲ್ಲ.ಯಡಿಯೂರಪ್ಪನವರ ನೇತೃತ್ವದಲ್ಲಿ ಸರಕಾರ ಸುಭದ್ರವಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮತ್ತು ಬಿ.ಜೆ.ಪಿ.ಜಿಲ್ಲಾ ವಕ್ತಾರ ಜಗದೀಶ್ ಶೇಣವ ಉಪಸ್ಥಿತರಿದ್ದರು
.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.