Home_Page_Advt
Home_Page_Advt
Home_Page_Advt

ಇಂದು ವಿಶ್ವ ತಂಬಾಕು ರಹಿತ ದಿನ

Puttur_Advt_NewsUnder_1
Puttur_Advt_NewsUnder_1

೧೯೮೭ರಿಂದ ವಿಶ್ವತಂಬಾಕುರಹಿತ ದಿನವನ್ನಾಗಿ ಪ್ರತಿ ವರ್ಷ ಮೇ-೩೧ರಂದು ವಿಶ್ವಆರೋಗ್ಯ ಸಂಸ್ಥೆಯು ವಿಶ್ವಾದಾದ್ಯಂತ ಆಚರಿಸುವಂತೆ ತಿಳಿಸಿತ್ತು. ಅದರೆ ವಿಶ್ವ ಆರೋಗ್ಯ ಸಮ್ಮೇಳನದ ಸಭೆಯಲ್ಲಿ ಏಪ್ರಿಲ್-೭ರಂದು ವಿಶ್ವ ಧೂಮಪಾನ ರಹಿತ ದಿನ ಆಚರಿಸುವಂತೆ ತೀರ್ಮಾನಿಸಲಾಯಿತು. ಏಪ್ರಿಲ್-೭, ೧೯೮೮ರವರೆಗೆ ವಿಶ್ವತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ ೧೯೮೮ರ ನಂತರ ಪ್ರತಿ ವರ್ಷ ಮೇ-೩೧ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಸಾವು-ನೋವುಗಳು, ವಿವಿಧ ಅಸಾಂಕ್ರಮಿಕ ಕಾಯಿಲೆಗಳಿಗೆ ತುತ್ತಾಗುವುದರ ಕುರಿತು ಅರಿವನ್ನುಂಟುಮಾಡಿ ವಿಶ್ವದ ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ ಯುವ-ಪೀಳಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ಯುವ-ಪೀಳಿಗೆಗಳ ರಕ್ಷಣೆ ಮಾಡುವುದು ಎಂಬ ವಾಕ್ಯದೊಂದಿಗೆ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ.

ಯಾಕೆ ತಂಬಾಕು ಉತ್ಪನ್ನಗಳ ಬಳಕೆಯ ಕುರಿತು ಯುವ-ಪೀಳಿಗೆಗೆ ಮಾಹಿತಿಯ ಅಗತ್ಯವಿದೆ? : ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿ ವರ್ಷ ೮ ಮಿಲಿಯನ್‌ಜನರು ಸಾವನ್ನಪ್ಪುತ್ತಾರೆ. ನೇರವಾಗಿ ತಂಬಾಕು ಉತ್ಪನ್ನಗಳ ಸೇವನೆಯಿಂದಲೇ ೭ ಮಿಲಿಯನ್‌ಜನರು ಸಾವೀಗೀಡಾಗುತ್ತಾರೆ. ೧.೨ ಮಿಲಿಯನ್ ಜನರು ಪರೋಕ್ಷ ಧೂಮಪಾನಕ್ಕೆ ತುತ್ತಾಗುತ್ತಾರೆ. ವಿಶ್ವಾದಾದ್ಯಂತ ಪ್ರತಿ ವರ್ಷ ೯ ಮಿಲಿಯನ್ ಜನರು ತಂಬಾಕು ಸೇವನೆಯಿಂದ ವಿವಿಧ ಕಾಯಿಲೆಗೆ ತುತ್ತಾಗಿ ಸಾವೀಗೀಡಾಗುತ್ತಾರೆ. ದಕ್ಷಿಣ ಪೂರ್ವಏಷ್ಯಾ ರಾಷ್ಟ್ರಗಳಲ್ಲಿ ಭಾರತ ಮತ್ತು ಇಂಡೋನೇಷ್ಯಾ ದೇಶಗಳು ಅತೀ ಹೆಚ್ಚು ತಂಬಾಕು ಉತ್ಪಾದನೆ ಮಾಡುವ ಪ್ರಮುಖ ಐದು ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ. ತಂಬಾಕು ಕೇವಲ ಮನುಷ್ನ ಆರೋಗ್ಯಕ್ಕೆ ಅಷ್ಟೇ ಮಾರಕವಾಗಿಲ್ಲ, ಬಡತನ ಮತ್ತು ದೇಶದ ಅಭಿವೃದ್ದಿಗೂ ಅಷ್ಟೇ ಮಾರಕವಾಗಿದೆ. ಅತೀ ಹೆಚ್ಚು ತಂಬಾಕು ಸೇವನೆಯಿಂದ ಭಾರತದ ಆರ್ಥೀಕತೆಗೂ ಕೊಡಲಿಯೇಟು ನೀಡುತ್ತದೆ. ತಂಬಾಕು ಸೇವನೆಯಿಂದ ಕ್ಷಯ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಅಧಿಕವಾಗುತ್ತಿದೆ. ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-೧(೨೦೦೯-೧೦) ರಿಂದ ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-೨ (೨೦೧೬-೧೭)ರ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುವ ಪ್ರಮಾಣವು ೨೮.೨% ನಿಂದ ೨೨.೮%ಗೆ ಕಡಿಮೆಯಾಗಿದೆ. ಅಂದರೆ ೫.೪% ಇಳಿಮುಖವಾಗಿದೆ. ೧೫ ರಿಂದ ೧೭ ವಯಸ್ಸಿನವರು ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವ ಪ್ರಮಾಣವು ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-೧(೨೦೦೯-೧೦)ರಲ್ಲಿ ೬.೮%ಯಿದ್ದು, ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-೨(೨೦೧೬-೧೭)ರಲ್ಲಿ ೩.೭%ಗೆ ಇಳಿಕೆಯಾಗಿದೆ. ತಂಬಾಕು ಉತ್ಪನ್ನಗಳ ಬಳಕೆಯನ್ನು ಪ್ರಾರಂಭಿಸುವ ವಯಸ್ಸು ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-೧ (೨೦೦೯-೧೦)ರಲ್ಲಿ ೧೭.೭ ಯಿದ್ದು, ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-೨(೨೦೧೬-೧೭)ರಲ್ಲಿ ೧೯.೮ಗೆ ಏರಿಕೆಯಾಗಿದೆ. ಇದು ಉತ್ತಮ ಬೆಳವಣಿಗೆಯಾಗಿದೆ.

ಭಾರತದಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯರಿಗೆ ಅಸಾಂಕ್ರಮಿಕ ಕಾಯಿಲೆಗಳಾದ ಕ್ಯಾನ್ಯರ್, ಹೃದಯ ಸಂಬಂಧಿ ಕಾಯಿಲೆಗಳು, ತೀವೃತರವಾದ ಶ್ವಾಶಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಸಕ್ಕರೆ ಕಾಯಿಲೆ ಅಥವಾ ಮಧುಮೇಹಕ್ಕೆ ಕಾರಣವಾಗುತ್ತದೆ. ತಂಬಾಕು ಉತ್ಪನ್ನ ಕಂಪನಿಗಳು ವಿವಿಧ ಕಾರ್ಯತಂತ್ರಗಳ ಮೂಲಕ ಉತ್ತಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಮ್ಮ ಸ್ಪಷ್ಟಗುರಿ ಮತ್ತು ಉದ್ದೇಶಗಳೊಂದಿಗೆ ಯುವ-ಪೀಳಿಗೆಯನ್ನು ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳಿಗೆ ಆಕರ್ಷಿತರನ್ನಾಗಿಸುತ್ತಿದೆ. ವಿವಿಧ ವಿನ್ಯಾಸ, ಉತ್ತಮ ಪ್ರಚಾರ ಮತ್ತು ಲೆಕ್ಕಚಾರದ ಜಾಹೀರಾತುಗಳ ಮೂಲಕ ಯುವ-ಸಮುದಾಯವು ತಂಬಾಕು ಉತ್ಪನ್ನಗಳ ಕಡೆಗೆ ತಮ್ಮ ಮನಸ್ಸನ್ನು ಹೊಯ್ಯುವಂತೆ ಮಾಡುತ್ತಿದೆ. ತಂಬಾಕು ಉತ್ಪನ್ನ ಕಂಪನಿಗಳು ಹೊಸ ಗ್ರಾಹಕರನ್ನು ಪ್ರತಿ ದಿನನಿರೀಕ್ಷೆ ಮಾಡುತ್ತಿವೆ. ಈ ಹೊಸ ಗ್ರಾಹಕರು ಯುವ-ಪೀಳಿಗೆಯೆ ಆಗಿರುತ್ತದೆ. ಆದ್ದರಿಂದ ತಂಬಾಕು ಕಂಪನಿಗಳು ತಮ್ಮ ಉತ್ಪನ್ನಗಳ ಜಾಹೀರಾತುಗಳನ್ನು ಶಾಲಾ-ಕಾಲೇಜು ಬಳಿಯ ಅಂಗಡಿ/ಮಳಿಗೆಗಳಲ್ಲಿ ಆಕರ್ಷಕವಾಗಿ ಪ್ರದರ್ಶಿಸಿಸುತ್ತದೆ. ಶಾಲಾ-ಕಾಲೇಜು/ಯಾವುದೇ ಶೈಕ್ಷಣಿಕ ಸಂಸ್ಥೆಗಳ ೧೦೦ ಗಜ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಹಾಗೂ ಮಾರಾಟ ಮಾಡಿದರೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದರೂ ಕೆಲವು ಪ್ರಭಾವಿಗಳು/ಪ್ರಭಾವಿಗಳ ಸಹಾಯದಿಂದ ಅಥವಾ ಕೃಪಕಟಾಕ್ಷದಿಂದ ಅನೇಕ ಶೈಕ್ಷಣಿಕ ಸಂಸ್ಥೆಗಳ ೧೦೦ ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವಾಗುವುದನ್ನು ನಾವು ಕಾಣಬಹುದು. ಯಾವುದೇ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶನ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ. ಅದರೂ ತಂಬಾಕು ಉತ್ಪನ್ನಗಳ ಕಂಪನಿಗಳು ಶೈಕ್ಷಣಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅವುಗಳ ಹತ್ತಿರ ಜಾಹೀರಾತುಗಳನ್ನು ಪ್ರದರ್ಶನ ಮಾಡುತ್ತಿವೆ. ಹೊಗೆ ಸಹಿತ ತಂಬಾಕು ಉತ್ಪನ್ನಗಳಾದ ಬೀಡಿ ಮತ್ತು ಸಿಗರೇಟ್‌ಗಳಲ್ಲಿ ಗಾತ್ರ ಮತ್ತು ವಿನ್ಯಾಸಗಳನ್ನು ಆಕರ್ಷಕವಾಗಿ ರೂಪಿಸಿರುತ್ತಾರೆ. ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನು ಬಿಡಿ-ಬಿಡಿಯಾಗಿ ಮಾರಾಟ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ. ಆಗಿದ್ದರೂ ಅಂಗಡಿಗಳಲ್ಲಿ ಬಿಡಿ-ಬಿಡಿ ಮಾರಾಟವನ್ನು ಯತೇಚ್ಚವಾಗಿ ಕಾಣಬಹುದು. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಸಿಗರೇಟ್ ಕಂಪನಿಗಳು ಆಕರ್ಷಕವಾಗಿ ತಮ್ಮ ಜಾಹೀರಾತುಗಳನ್ನು ಪ್ರದರ್ಶನ ಮಾಡುತ್ತಿವೆ. ಅದಕ್ಕೆ ಪ್ರತಿಫಲವಾಗಿ ಅಂಗಡಿ ಮಾಲೀಕರಿಗೆ ತಂಬಾಕು ಉತ್ಪನ್ನ ಕಂಪನಿಗಳು ಪ್ರತಿ ತಿಂಗಳು ಒಂದಿಷ್ಟು ಮೌಲ್ಯದ ಸಿಗರೇಟುಗಳನ್ನು ಅಥವಾ ಹಣವನ್ನು ನೀಡುವುದಾಗಿ ಪ್ರೋತ್ಸಾಹಿಸಿರುತ್ತವೆ. ನಗರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಡಿಜಿಟಲ್ ಫಲಕಗಳನ್ನು ಅಂಗಡಿಗಳಲ್ಲಿ ನೇತಾಕಿರುವುದನ್ನು ನಾವು ಕಾಣಬಹುದು. ನಮ್ಮ ದೇಶದಲ್ಲಿ ಇ-ಸಿಗರೇಟ್ ಮಾರಾಟ ನಿಷೇಧವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ.

ಆದ್ದರಿಂದ ತಂಬಾಕು ಉತ್ಪನ್ನಗಳ ಕಾರ್ಯತಂತ್ರಗಳಿಗೆ ಪ್ರತಿತಂತ್ರಗಳ ಅಭಿಯಾನ ಮತ್ತುತಂಬಾಕು ವಿರುದ್ದ ಹೋರಾಡಲು ಯುವಪೀಳಿಗೆಗೆ ಹೆಚ್ಚಿನ ಮಾಹಿತಿ ನೀಡುವ ಅವಶ್ಯಕತೆಯಿದೆ. ತಂಬಾಕು ಉತ್ಪನ್ನ ಕಂಪನಿಗಳು ಯುವಪೀಳಿಗೆಯನ್ನು ಆಕರ್ಷಿಸಲು ರೂಪಿಸಿರುವ ಕಾರ್ಯತಂತ್ರಗಳನ್ನು ಯುವಪೀಳಿಗೆಗೆ ಮನವರಿಕೆ ಮಾಡಬೇಕಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ತಂಬಾಕು ಉತ್ಪನ್ನ ಕಂಪನಿಗಳು ಯುವ-ಪೀಳಿಗೆಯನ್ನು ತಂಬಾಕು ಉತ್ಪನ್ನಗಳ ಚಟಕೆ ಬಲಿಯಾಗುವಂತಹ ಕಾರ್ಯತಂತ್ರಗಳನ್ನು ರೂಪಿಸುತ್ತವೆ.

ನೇರಜಾಹೀರಾತು : ಮನರಂಜನಾ ಮಾಧ್ಯಮಗಳಾದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಜಾಹೀರಾತು ನೀಡುತ್ತಿರುವುದು, ಮಕ್ಕಳಿಗೆ ಆಕರ್ಷಣೆಯಾಗುವಂತ ಆಟಿಕೆಗಳು, ಸಿಹಿ ತಿಂಡಿ ಮತ್ತು ಸಿಹಿ ಪಾನೀಯಗಳ ಹತ್ತಿರ ಆಕರ್ಷಕವಾಗಿ ತಂಬಾಕು ಉತ್ಪನ್ನಗಳ ಪ್ರದರ್ಶನ, ಜನಪ್ರಿಯ ಪರಿಕಲ್ಪನೆಯಗಳನ್ನು ಅನುಕರಿಸುವಂತೆ ತಂಬಾಕುಉತ್ಪನ್ನ ಕಂಪನಿಗಳು ಮಕ್ಕಳು ಮತ್ತುಯುವ ವಯಸ್ಕರನ್ನು ಆಕರ್ಷಿಸಲು ತಂಬಾಕು ಉತ್ಪನ್ನಗಳ ಜಾಹೀರಾತು ಮಾಡುವುದು.

 

ಪರೋಕ್ಷಜಾಹೀರಾತು : ಸಾಮಾಜಿಕ ಮಾಧ್ಯಮ& ಪ್ರಭಾವಶಾಲಿಗಳ ಮೂಲಕ ತಂಬಾಕು ಮತ್ತು ವೇಪಿಂಗ್ ಉತ್ಪನ್ನಗಳನ್ನು ಬಳಸುವಂತೆ ಉತ್ತೇಜಿಸುವುದು.

ಪ್ರಚಾರ: ಜನಪ್ರಿಯ ಕಾರ್ಯಕ್ರಮಗಳಲ್ಲಿ ಯುವಕರು ಆಕರ್ಷಿತರಾಗುವಂತೆ ತಂಬಾಕು ಉತ್ಪನಗಳ ಪ್ರಚಾರ ಮಾಡುವುದು, ಯುವಕರು ತಂಬಾಕು ಉತ್ಪನ್ನ ಸೇವನೆ ಪ್ರಚೋದಿಸುವ & ಕಂಪನಿಗಳ ಪ್ರಚಾರದ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವುದು.

ಪ್ರಾಯೋಜಕತ್ವ : ತಂಬಾಕು ಉತ್ಪನ್ನ ಕಂಪನಿಗಳ ಮೂಲಕ ಶಾಲಾ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವೃತ್ತಿ ತರಬೇತಿ ಸಮಯದಲ್ಲಿ ಸಹಾಯ ಮಾಡುವುದು, ತಂಬಾಕು ಕಂಪನಿಗಳ ಲೋಗೊಗಳನ್ನು ಅಳವಡಿಸಿಕೊಂಡು ಪ್ರಮುಖ ಕ್ರೀಡಾಕೂಟಗಳ/ತಂಡಗಳ ಪ್ರಾಯೋಜಕತ್ವ ಮಾಡುವುದು.

ಇತರೆ ವ್ಯವಹಾರ ತಂತ್ರಗಳು : ಹೊಗೆ ರಹಿತ ತಂಬಾಕು, ಶಿಶಾ ಮತ್ತು ಇ-ಸಿಗರೇಟ್‌ಗಳಲ್ಲಿ ಮಕ್ಕಳನ್ನು ಆಕರ್ಷಿಸಲು ಪರಿಮಳಯುಕ್ತ ಪದಾರ್ಥಗಳನ್ನು ಬಳಸುವುದು, ಹೊಗೆ ರಹಿತ ತಂಬಾಕು, ಶಿಶಾ ಮತ್ತು ಇ-ಸಿಗರೇಟ್‌ಗಳಲ್ಲಿ ಮಕ್ಕಳನ್ನು ಆಕರ್ಷಿಸಲು ಪರಿಮಳಯುಕ್ತ ಪದಾರ್ಥಗಳನ್ನು ಬಳಸುವುದು, ತಂಬಾಕು ಉತ್ಪನ್ನಗಳನ್ನು ಮಕ್ಕಳಿಗೊಸ್ಕರ ವಿಶೇಷ ಪ್ಯಾಕ್‌ಗಳಲ್ಲಿ ತಯಾರಿಸುವುದು & ತಂಬಾಕು ಉತ್ಪನ್ನಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವುದು. ಈ ಎಲ್ಲಾ ಕಾರಣಗಳಿಂದಾಗಿ ಯುವ-ಪೀಳಿಗೆಗಳನ್ನು ತಂಬಾಕು ಉತ್ಪನ್ನ ಕಂಪನಿಗಳ ಕುತಂತ್ರ ಮತ್ತು ಜಾಹೀರಾತುಗಳಿಂದ ಆಕರ್ಷಿತರಾಗುವುದನ್ನು ತಪ್ಪಿಸಬೇಕಾಗಿದೆ. ಯುವ-ಪೀಳಿಗೆಗಳು ತಂಬಾಕು ವ್ಯಸನಕ್ಕೆ ತುತ್ತಾಗದಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವು ದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ರಾಜ್ಯ ತಂಬಾಕು ನಿಯಂತ್ರಣ ಕೋಶ ಮತ್ತು ಜಿಲ್ಲೆಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಕಾರ್ಯನಿರ್ವಹಿಸುತ್ತಿದೆ. ಶಾಲಾ-ಕಾಲೇಜುಗಳ ಹತ್ತಿರ ತಂಬಾಕು ಉತ್ಪನ್ನಗಳ ಮಾರಾಟವನ್ನು ತಡೆಗಟ್ಟುವಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಪಾತ್ರವು ಅಧಿಕವಾಗಿದೆ. ಸ್ಥಳೀಯ ಮುಖಂಡರುಗಳು/ಜನಪ್ರತಿನಿಧಿಗಳು/ರಾಜಕಾರಣಿಗಳು/ಸಂಘ-ಸಂಸ್ಥೆಗಳು ತಂಬಾಕು ಮುಕ್ತ ಕರ್ನಾಟಕ ರಾಜ್ಯವಾಗುವಲ್ಲಿ ತಮ್ಮ ಇಚ್ಚಾ-ಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ತಡಮಾಡಬೇಡಿ- ತಂಬಾಕು ತ್ಯಜಿಸಲು ಇದು ಸಕಾಲ.

ಸಂಪತ್‌ಕುಮಾರ ಡಿ.
ಬೆಂಗಳೂರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.