Home_Page_Advt
Home_Page_Advt
Home_Page_Advt

ಅರಿಯಡ್ಕ ಶಾಲಾ ಮುಖ್ಯಗುರು ಶಶಿಪ್ರಭಾ ಎಚ್.ಕರ್ತವ್ಯದಿಂದ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಿಕ್ಷಕ ವೃತ್ತಿಯಲ್ಲಿ 38 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿದ ಅರಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಶಶಿಪ್ರಭಾ ಎಚ್.ರವರು ಮೇ.31 ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ.

ಜನಾರ್ದನ ಮತ್ತು ವಸಂತಿರವರ ಪುತ್ರಿಯಾಗಿರುವ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರು ಲಿಟ್ಲ್ ಪ್ಲವರ್ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕೊಂಬೆಟ್ಟು ಶಾಲೆಯಲ್ಲಿ ಪೂರೈಸಿ, ಶಿಕ್ಷಕ ತರಬೇತಿಯನ್ನು ಮಂಗಳೂರಿನ ಕಪಿತಾನಿಯೊ ಸಂಸ್ಥೆಯಲ್ಲಿ ಪೂರೈಸಿದ್ದಾರೆ. ೧೯೮೨ ರಲ್ಲಿ ಎಕ್ಕಡ್ಕ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಬಳಿಕ ಬೆಟ್ಟಂಪಾಡಿ, ಇರ್ದೆ, ಬೆಳ್ಳಿಪ್ಪಾಡಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಚೂರಿಪದವು ಶಾಲೆಗೆ ಪೂರ್ಣಕಾಲಿಕ ಮುಖ್ಯಗುರುಗಳಾಗಿ ಭಡ್ತಿ ಹೊಂದಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ೨೦೧೯ ರಲ್ಲಿ ಅರಿಯಡ್ಕ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಇವರು ಪತಿ ವರದರಾಜ, ಪುತ್ರ ಗೌತಮ್ ಹಾಗೂ ಸೊಸೆಯೊಂದಿಗೆ ಉಪ್ಪಳಿಗೆಯಲ್ಲಿ ಸುಖೀ ಜೀವನ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.