Home_Page_Advt
Home_Page_Advt
Home_Page_Advt

ಕೊರೋನಾ ವಿರುದ್ಧದ ಹೋರಾಟ ಮುಂದುವರಿಯಲಿದೆ | ಉಸಿರಾಟದ ಸಮಸ್ಯೆಗೆ ಯೋಗ ಪರಿಹಾರ – ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ವಿರುದ್ಧದ ಹೋರಾಟ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ಮನೆಯಿಂದ ಯಾರೂ ಅನಗತ್ಯವಾಗಿ ಹೊರಗೆ ಬರಬೇಡಿ. ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಹೊಸ ಪದ್ಧತಿಗಳನ್ನು ಅನಿವಾರ್ಯವಾಗಿ ಪಾಲಿಸಿ, ಉಸಿರಾಟದ ಸಮಸ್ಯೆಗೆ ಯೋಗ ಪರಿಹಾರ. ಯೋಗದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ನಾವೆಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಮೇ 31ರಂದು ಮನ್ ಕೀ ಬಾತ್‌ನಲ್ಲಿ ಹೇಳಿದರು.

ಲಾಕ್‌ಡೌನ್ ಸಡಿಲಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಪುನರಾರಂಭಗೊಳಿಸಿರುವ ನಡುವೆಯೇ ಮಾರಕ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ಈ ಹಿಂದಿನ ಸಂಕಲ್ಪವನ್ನು ಮರೆಯದಂತೆ ಜನರಲ್ಲಿ ಮನವಿ ಮಾಡಿದರು.

ಮನ್ ಕಿ ಬಾತ್ ಕಾರ್ಯಕ್ರಮದ ಪ್ರಮುಖ ಅಂಶಗಳು:
ಲಾಕ್‌ಡೌನ್ 5.0 ಜಾರಿಗೊಳಿಸಲಾಗಿದೆ. ಇದು ಜನರಿಗೆ ಅನುಕೂಲ ಆಗಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶ ಒಗ್ಗಟ್ಟಾಗಿರುವುದು ನಿಜ್ಜಕೂ ಹೆಮ್ಮೆಯ ಸಂಗತಿ. ಜನ ಪರಸ್ಪರ ಸಹಾಯ ಮಾಡುತ್ತಿರುವ ಕುರಿತಾದ ವರದಿಗಳು ದೇಶದ ಮೂಲೆ ಮೂಲೆಗಳಿಂದ ಹೊರ ಬರುತ್ತಿವೆ. ಜನರು ಸೇವಾ ಮನೋಭಾವನೆಯಿಂದ ಸಹಕರಿಸಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ಸಲಕರಣೆಗಳನ್ನು ಕಂಡು ಹಿಡಿಯಲಾಗಿದೆ. ಪೂರ್ವ ಭಾರತದ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೇವೆ. ನಾವಿಂದು ನೋಡುತ್ತಿರುವುದು ಎಲ್ಲಾ ಭವಿಷ್ಯದ ಪಾಲಿಗೆ ಪಾಠವಾಗಿದೆ. ವಲಸೆ ಕಾರ್ಮಿಕರನ್ನು ಅವರವರ ಮನೆಗೆ ತಲುಪಿಸಲಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಸದೃಢವಾಗಿಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ಭಾರತವನ್ನುಆರ್ಥಿಕವಾಗಿ ಸಬಲಗೊಳಿಸುವ ಸರ್ಕಾರದ ಯೋಜನೆ ಫಲ ನೀಡಲಿದೆ. ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ದೇಶವನ್ನು ಆತ್ಮ ನಿರ್ಭರವನ್ನಾಗಿ ಮಾಡಲು ಜನತೆ ಸಹಕರಿಸಬೇಕು. ಪೂರ್ವ ಭಾರತದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದ್ದರೆ, ಉತ್ತರ ಭಾರತದಲ್ಲಿ ಬಿಸಿಲಿನ ತಾಪಮಾನ ಏರುತ್ತಿದೆ. ಈ ಕುರಿತು ಸರ್ಕಾರ ನಿಗಾ ಇರಿಸಿದೆ. ಒಂದು ಕಡೆ ಮಿಡತೆ ಕಾಟ, ಚಂಡಮಾರುತ ಕುರಿತು ಮಾಹಿತಿ ಇದೆ. ಕೊರೊನಾ ವೈರಸ್ ವೈರಾಣುವಿನಿಂದ ದೂರ ಇರಲು ಯೋಗ ಮತ್ತು ಆಯುರ್ವೇದ ಅತ್ಯಂತ ಪರಿಣಾಮಕಾರಿಯಾಗಿದ್ದು, ಈ ಕುರಿತು ವಿಶ್ವ ನಾಯಕರೂ ತಮ್ಮಲ್ಲಿ ಹಲವು ಬಾರಿ ಚರ್ಚೆ ನಡೆಸಿದ್ದಾರೆ. ಯೋಗದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಕ್ರಮಗಳನ್ನು ಅನುಸರಿಸಬೇಕು. ಇವರು ಹಾಲಿವುಡ್‌ನಿಂದ ಹರಿದ್ವಾರದ ತನಕ ಜನರುಯೋಗ ಮಾಡುತ್ತಿದ್ದಾರೆ. ಹಾಗಾಗಿ ಭಾರತದಲ್ಲಿ ಇವತ್ತು ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಕಡಿಮೆ. ನಾವು ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರಿಸಲಿದ್ದೇವೆ.

ವಿಶ್ವ ಪರಿಸರ ದಿನ:
ಜೂ.5ಕ್ಕೆ ವಿಶ್ವ ಪರಿಸರ ದಿನ ಈ ನಿಟ್ಟಿನಲ್ಲಿ ಜೈವ ವೈವಿಧ್ಯತೆಯನ್ನು ಉಳಿಸುವ ಪ್ರಯತ್ನ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ನೀರನ್ನು ಉಳಿಸುವ, ರಕ್ಷಿಸುವ ಕೆಲಸ ಆಗಬೇಕು. ಪ್ರಕೃತಿಯ ಜೊತೆ ಸಂಬಂಧ ಬೆಳೆಸಬೇಕು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.