Home_Page_Advt
Home_Page_Advt
Home_Page_Advt

ಪಟ್ಟೆ ಶ್ರೀಕೃಷ್ಣ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಕೆ.ಯಮುನಾ ರವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೇ.31ರಂದು ನಿವೃತ್ತಿ ಹೊಂದಿದ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೆ.ಯಮುನಾ ರವರ ಬೀಳ್ಕೊಡುಗೆ ಸಮಾರಂಭ ಪಟ್ಟೆ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಮೇ.30ರಂದು ಶಾಲಾ ವಠಾರದಲ್ಲಿ ಜರಗಿತು.

ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ ಪಿ. ರವರು ಅಧ್ಯಕ್ಷತೆ ವಹಿಸಿ ಯಮುನಾರವರ ಸೇವೆಯನ್ನು ಸ್ಮರಿಸಿ ಶುಭಹಾರೈಸಿದರು. ಸಂಸ್ಥೆಯ ಸಂಚಾಲಕ ನಾರಾಯಣ ಭಟ್ ಬೀರ್ನೋಡಿ, ನಿರ್ದೇಶಕರಾದ ಶಿವಪ್ರಸಾದ್ ಪಟ್ಟೆ, ಶರೀಶ್ ಪಿ.ಬಿ., ಕೆ. ಯಮುನಾರವರ ಪತಿ ವೈ. ಕೃಷ್ಣ ನಾಯ್ಕ, ನಿವೃತ್ತ ಮುಖ್ಯಗುರು ಶಂಕರಿ, ಗೋಪಾಲಕೃಷ್ಣ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದದವರು, ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯಗುರು ಸುಮನಾ ಪ್ರಾರ್ಥಿಸಿ ರಾಜಗೋಪಾಲ ಸ್ವಾಗತಿಸಿದರು. ಭವಿತಾ ಪಿ. ಕಾರ್ಯಕ್ರಮ ನಿರೂಪಿಸಿ ವಿಶ್ವನಾಥ ಬೊಳ್ಳಾಡಿ ವಂದಿಸಿದರು. ಕಾರ್ಯಕ್ರಮ ಸರಳ ರೀತಿಯಲ್ಲಿ ಜರಗಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.