HomePage_Banner
HomePage_Banner
HomePage_Banner
HomePage_Banner
Breaking News

ಸಂದೇಶಗಳನ್ನು ಕಳುಹಿಸುವಾಗ ಜಾಗರೂಕರಾಗಿರದಿದ್ದರೆ ತಿರುಚುವವರು, ವಿಶೇಷ ಅರ್ಥ ಕಲ್ಪಿಸುವವರಿಗೆ ಆಹಾರವಾಗುತ್ತೀರಿ (ಸಂಪಾದಕೀಯ)

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಂಘಟನೆಗಳು ತಮ್ಮ ಲಾಭಕ್ಕಾಗಿ ಅಂತವರನ್ನು ಬಲಿಪಶು ಮಾಡದಂತೆ ವಿನಂತಿ

ಬಹಳಷ್ಟು ಜನರು ಎದುರುಬದುರು ಕುಳಿತಾಗ ಏನಾದರೂ ವಿಷಯವನ್ನು ತಮಾಷೆ ಮಾಡುವುದು, ವಿವಾದಾತ್ಮಕ ಮಾತುಗಳನ್ನು ಆಡುತ್ತಾರೆ, ಹರಟುತ್ತಾರೆ. ಅದು ಅಲ್ಲಿ ಅವರ ನಡುವೆ ಚರ್ಚೆಯಾಗಿ ನಿಲ್ಲುತ್ತದೆ. ಯಾಕೆಂದರೆ ಅದು ಅವರಿಗೆ ಸಂದರ್ಭದಲ್ಲಿ ಬಂದ ತಾತ್ಕಾಲಿಕ ಚರ್ಚೆಯ ವಿಷಯವಾಗಿರುತ್ತದೆ ಹೊರತು ಅವರ ಕಸುಬಾಗಿರುವುದಿಲ್ಲ (ಆದರೂ ತಾವಾಡುವ ವಿಷಯಗಳಲ್ಲಿ ಜಾಗರೂಕರಾಗಿರಬೇಕು) ಆದರೆ ಅದೇ ವಿಚಾರಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ತಮ್ಮ ಗುಂಪಿಗೆ ಹಾಕಿದಾಗ ಅದು ಅಲ್ಲಿಗೇ ನಿಲ್ಲುವುದಿಲ್ಲ. ಎಷ್ಟೋ ಸಲ ಗುಂಪಿನಲ್ಲಿದ್ದವರು ಅದನ್ನು ಹೊರಗೆ ರವಾನಿಸುತ್ತಾರೆ. ಹಾಗೆ ಹೊರಗೆ ಬಂದಾಗ ಅದರ ಹಿನ್ನೆಲೆಯ ಚರ್ಚೆಗಳು, ಅದನ್ನು ಹೇಳಿದ ವ್ಯಕ್ತಿಯ ಹಿನ್ನೆಲೆಯು ತಿಳಿದು ಬರುವುದಿಲ್ಲ. ಅದು ತಮಾಷೆಗಾಗಿಯೇ? ಅಥವಾ ದುರುದ್ದೇಶಪೂರಕವಾಗಿಯೇ? ಎಂಬ ಅರಿವು ಹೊರಗಿನವರಿಗೆ ಇರುವುದಿಲ್ಲ. ಅಂಥವರಲ್ಲಿ ಸಿಕ್ಕ ಅವಕಾಶವನ್ನು ಉಪಯೋಗಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರು, ದ್ವೇಷ ಸಾಧಿಸುವವರೂ ಇರುತ್ತಾರೆ. ಅದನ್ನು ತಿರುಚಿ ವಿಶೇಷ ಅರ್ಥ ಕಲ್ಪಿಸಿ ಹರಡಿದಾಗ ಅದು ಗಂಭೀರ ಪರಿಣಾಮಕ್ಕೆ ಕಾರಣವಾಗುತ್ತದೆ. ಎಷ್ಟೋ ಜನರಿಗೆ ನೋವು ಉಂಟುಮಾಡುತ್ತದೆ. ಪರಿಣಾಮವಾಗಿ ಮೂಲ ಸಂದೇಶವನ್ನು ರವಾನಿಸಿದ ವ್ಯಕ್ತಿಗಳು ಪೋಲಿಸ್ ಠಾಣೆಗೆ, ಕೋರ್ಟಿಗೆ ಹತ್ತುವಂತೆ ಮಾಡುತ್ತದೆ. ಅಥವಾ ಅವರೇ ಕೇಸು ಮಾಡುವಂತಹ ಪರಿಸ್ಥಿತಿ ಉಂಟಾಗುತ್ತದೆ. ಯಾರ್‍ಯಾರ ಲಾಭಕ್ಕಾಗಿ ಕೆಲವರು ಬಲಿ ಪಶುಗಳಾಗುತ್ತಾರೆ.

ಪುತ್ತೂರಿನ ಪ್ರಸಿದ್ದ ವೈದ್ಯರುಗಳಾದ ಡಾ. ಸುರೇಶ್ ಪುತ್ತೂರಾಯ ಮತ್ತು ಡಾ. ದೀಪಕ್ ರೈಯವರು ಈ ಮೇಲಿನ ವಿಚಾರಗಳಿಗೆ ಉತ್ತಮ ಸಾಕ್ಷಿ. ಅವರು ಹೇಳಿದ್ದು ಸರಿ ಎಂದು ನಮ್ಮ ವಾದವಲ್ಲ. ಆದರೆ ಅದನ್ನು ವಿಮರ್ಶಿಸುವಾಗ ಆ ವ್ಯಕ್ತಿಗಳ ಹಿನ್ನಲೆ ಮತ್ತು ಕೆಲಸ ನೋಡಿ ವಿಮರ್ಶಿಸಬಹುದಿತ್ತು. ಆಕ್ಷೇಪ ವ್ಯಕ್ತಪಡಿಸಬಹುದಿತ್ತು, ಖಂಡಿಸಬಹುದಿತ್ತು. ಆದರೆ ಅದನ್ನು ತಿರುಚಿ ವಿರೋಧಿಯೆಂದು ಬ್ರಾಂಡ್ ಮಾಡುವ ಅವಶ್ಯಕತೆ ಇರಲಿಲ್ಲ. ಪುತ್ತೂರಾಯ ಮತ್ತು ದೀಪಕ್ ರೈಯವರು ಉತ್ತಮ ವೈದ್ಯರುಗಳು. ಜಾತಿ, ಧರ್ಮ, ಪಕ್ಷ ನೋಡಿ ಎಂದೂ ಚಿಕಿತ್ಸೆ ಮಾಡಿದವರಲ್ಲ. ರೋಗಿಯನ್ನು ಕಾಪಾಡುವುದೇ ಧರ್ಮವಾಗಿ ರಾತ್ರಿ-ಹಗಲು ಚಿಕಿತ್ಸೆ ನೀಡಿದವರು. ಪುತ್ತೂರಾಯರಂತೂ ಅತ್ಯಂತ ಸಮಾಧಾನಿಯಾಗಿ ಮಾತನಾಡುವವರು ಮತ್ತು ಉತ್ತರ ನೀಡುವವರು. ಅವರು ರವಾನಿಸಿದ ಸಂದೇಶವನ್ನು ವಿಚಾರಿಸಿದಾಗ `ತಮಾಷೆಗಾಗಿ ಎಂದು ಮಾಡಿದ್ದು’ ಎಂದು ಹೇಳಿ ನೋವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲಿಗೆ ಅದನ್ನು ಮುಗಿಸಬಹುದಿತ್ತು. ಎಲ್ಲಿಂದಲೋ ಕುಳಿತು ಬೆದರಿಕೆಯ ಮಾತುಗಳನ್ನು ಆಡುವ ಅವಶ್ಯಕತೆಗಳಿರಲಿಲ್ಲ. ಪುತ್ತೂರಾಯರ ಅಭಿಮಾನಿಯೊಬ್ಬ ಅವರ ಒಳ್ಳೆಯತನದ, ಚಿಕಿತ್ಸೆಯ ಬಗ್ಗೆ ಕಳುಹಿಸಿದ ಸಂದೇಶ ಹೆಚ್ಚು ಪ್ರಚಾರವಾಗಲಿಲ್ಲ. ನನ್ನ ಉದ್ದೇಶವಿಷ್ಟೇ, ಯಾವುದೇ ಸಂದೇಶ ರವಾನೆಯಾದಾಗ ಅದರ ಹಿಂದಿರುವ ವ್ಯಕ್ತಿಯ ಉದ್ದೇಶವನ್ನು, ವ್ಯಕ್ತಿತ್ವವನ್ನು ಪರಿಗಣಿಸಿ, ಅವರೊಡನೆ ವಿಚಾರಿಸಿ, ಅದರ ನಂತರ ಕ್ರಮ ಕೈಗೊಳ್ಳಬೇಕೇ ಹೊರತು. ಅದನ್ನು ತಿರುಚಿ ವಿಶೇಷ ಅರ್ಥ ಕಲ್ಪಿಸುವುದಲ್ಲ. ಉದಾಹರಣೆಗೆ ಯುವ ಕಾಂಗ್ರೆಸ್ ಪಕ್ಷದವರು ನೀಡಿರುವ ಪೋಲಿಸ್ ದೂರು. ಈರ್ವರು ವೈದ್ಯರು ಮಾಡಿದ ಸಂದೇಶವನ್ನು ಖಂಡಿಸುವಾಗ ತಮ್ಮ ರಾಜಕೀಯ ಲಾಭಕ್ಕೆ ಉಪಯೋಗಿಸಬಾರದು. ಅದರಲ್ಲಿ ಇಲ್ಲದ ವಿಷಯವನ್ನು ಅಪಾದಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಯಾವುದೇ ವ್ಯಕ್ತಿಗಳು, ಸಂಘಟನೆಗಳು, ಪಕ್ಷಗಳು ತಮಗೆ ತಿಳಿದಿರುವ ವ್ಯಕ್ತಿಗಳಿಂದ ತಪ್ಪುಗಳಾದರೆ, ವ್ಯತ್ಯಾಸಗಳಾದರೆ ಅದನ್ನು ವಿಚಾರಿಸಿ ರಾಜಿ ಪಂಚಾಯತಿಕೆಗೆ ಅವಕಾಶ ಮಾಡಿ ಶಾಂತಿ, ಸೌಹಾರ್ದತೆ ಕಾಪಾಡುವಂತಹ ಕೆಲಸ ಮಾಡಬೇಕು. ಉತ್ತಮ ಕೆಲಸ ಮಾಡುವವರನ್ನು ರಕ್ಷಿಸಬೇಕು. ತಮ್ಮ ಲಾಭಕ್ಕಾಗಿ ಯಾರನ್ನಾದರೂ ಬಲಿಪಶು ಮಾಡಲಿಕ್ಕೆ ಪ್ರಯತ್ನಿಸಬಾರದೆಂಬ ಕಾರಣಕ್ಕೆ ಈ ಮೇಲಿನ ವಿಷಯವನ್ನು ಉಲ್ಲೇಖಿಸಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಸಿಲುಕಿಕೊಂಡರೆ, ಕೇಸಿಗೆ ಒಳಗಾದರೆ ಮತ್ತು ಕೇಸು ಮಾಡಲು ಹೊರಟರೆ ಅದರಿಂದ ಆಗುವ ಮಾನಸಿಕ ಹಿಂಸೆ ಮತ್ತು ಕೆಲಸಕ್ಕೆ ಆಗುವ ತೊಂದರೆಗಳ ಅನುಭವಗಳ ಹಿನ್ನಲೆಯಲ್ಲಿ ನಮ್ಮೂರಿನ ಉತ್ತಮ ವೈದ್ಯರುಗಳು ಅಂತಹ ಪ್ರಕರಣಗಳಲ್ಲಿ ಸಿಲುಕಿಕೊಳ್ಳದೆ, ಸಮಯ ಹಾಳು ಮಾಡುವಂತಾಗದೆ ಪೂರ್ಣಪ್ರಮಾಣದಲ್ಲಿ ಜನಸೇವೆ ಮಾಡುವ ವಾತಾವರಣ ಸೃಷ್ಟಿ ಮಾಡಬೇಕೆಂಬ ಉದ್ದೇಶದಿಂದ ಈ ಲೇಖನ ಬರೆದಿದ್ದೇನೆ ಹೊರತು ತಪ್ಪನ್ನು ಸಮರ್ಥಿಸುವುದಾಗಲಿ, ಇತರರಿಗೆ ನೋವು ಮಾಡುವುದು ನನ್ನ ಉದ್ದೇಶವಲ್ಲ ಎಂದು ತಿಳಿಸಲು ಇಚ್ಚಿಸುತ್ತೇನೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.