ಜ್ವರ ಬಾಧಿತ ತರಕಾರಿ ವ್ಯಾಪಾರಸ್ಥ ಗುಣಮುಖ | ನಿಟ್ಟಿಸಿರು ಬಿಟ್ಟ ಗ್ರಾಹಕರು, ಸ್ಥಳೀಯರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡು ಆತಂಕ ಸೃಷ್ಟಿಸಿದ್ದ ಪುತ್ತೂರು ಗಾಂಧಿಕಟ್ಟೆಯ ಬಳಿಯ ದಿನೇಶ್ ಭವನದ ಕಟ್ಟಡದಲ್ಲಿರುವ ಬೀದಿ-ಬದಿಯ ತರಕಾರಿ ವ್ಯಾಪಾರಿಯೋರ್ವರನ್ನು ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯದ ಬಳಿಕ ಆಸ್ಪತ್ರೆಯಲ್ಲಿ ನೀಡಿದ ಔಷಧಿಯಿಂದಲೇ ಗುಣಮುಖಗೊಂಡಿರುವುದು ಕೊರೋನಾ ಶಂಕೆಯಲ್ಲಿದ್ದ ಗ್ರಾಹಕರು ಮತ್ತು ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.
ಮುಖ್ಯರಸ್ತೆಯಲ್ಲಿರುವ ಗಾಂಧಿಕಟ್ಟೆಯ ಬಳಿಯ ದಿನೇಶ್ ಭವನ ಲಾಡ್ಜ್‌ಗೆ ಹೋಗುವ ದಾರಿಯಲ್ಲಿ ಮೈಸೂರು ಮೂಲದ ಇಬ್ಬರು ವ್ಯಕ್ತಿಗಳು ಹಲವು ಸಮಯಗಳಿಂದ ತರಕಾರಿ ವ್ಯಾಪಾರ ನಡೆಸುತ್ತಿದ್ದು, ಬಾಡಿಗೆ ಕೊಠಡಿಯೊಂದರಲ್ಲಿ ವಾಸ್ತವ್ಯ ಹೊಂದಿದ್ದರು. ಇತ್ತೀಚೆಗೆ ಲಾಕ್‌ಡೌನ್ ಸಮಯದಲ್ಲಿ ಮೈಸೂರಿಗೆ ತೆರಳಿದ್ದ ಅವರು ಲಾಕ್‌ಡೌನ್ ಸಡಿಲಿಕೆ ಬಳಿಕ ಮತ್ತೆ ಪುತ್ತೂರಿಗೆ ಬಂದು ತರಕಾರಿ ವ್ಯಾಪಾರ ಆರಂಭಿಸಿದ್ದರು. ಈ ನಡುವೆ ಮೇ.28ರಂದು ರಾತ್ರಿ ಇಬ್ಬರು ವ್ಯಕ್ತಿಗಳ ಪೈಕಿ ಓರ್ವರಿಗೆ ಜ್ವರ ಕಾಣಿಸಿಕೊಂಡಿದ್ದು, ಮೇ.29ರಂದು ತೀವ್ರ ಅಸ್ವಸ್ಥಗೊಂಡು ಬಾಡಿಗೆ ಕೊಠಡಿಯಲ್ಲೇ ಮಲಗಿದ್ದರು. ಈ ಕುರಿತು ಮಾಹಿತಿ ಅರಿತು ಸರಕಾರಿ ಆಸ್ಪತ್ರೆಯಲ್ಲಿ ಜ್ವರ ಬಾಧಿತ ವ್ಯಾಪಾರಿಯೊಬ್ಬರನ್ನು ಪರೀಕ್ಷೆ ಮಾಡಿದಾಗ ಆತ ಮದ್ಯಪಾನ ಸೇವಿಸಿರುವುದು ಬೆಳಕಿಗೆ ಬಂದಿತ್ತು. ಈ ನಡುವೆ ಆತನಿಗೆ ಜ್ವರವೂ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಯಲ್ಲಿ ಆತನಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಇದೀಗ ಆತ ಪೂರ್ಣಗುಣಮುಖರಾಗಿದ್ದಾರೆಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.