ಮುಕ್ವೆ ರಸ್ತೆ ಬದಿಯಲ್ಲಿ ಮತ್ತೆ ತ್ಯಾಜ್ಯ ರಾಶಿ…! ರಾತ್ರಿ ವೇಳೆ ತ್ಯಾಜ್ಯ ಎಸೆದು ಹೋಗುತ್ತಿರುವ ಕಿಡಿಗೇಡಿಗಳು

Puttur_Advt_NewsUnder_1
Puttur_Advt_NewsUnder_1

ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಸ್ಥಳೀಯರು

@ಯೂಸುಫ್ ರೆಂಜಲಾಡಿ
ಪುತ್ತೂರು: ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಮುಕ್ವೆ ಹೆದ್ದಾರಿ ಬದಿಯಲ್ಲಿ ಮತ್ತೆ ತ್ಯಾಜ್ಯ ರಾಶಿ ಕಂಡು ಬಂದಿದೆ. ಮಳೆ ಕೂಡಾ ಪ್ರಾರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ. ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಲ್ಪಿಸುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ವರ್ಷಗಳ ಹಿಂದೆ ಮುಕ್ವೆ ಕ್ರಾಸ್‌ನಲ್ಲಿ ತ್ಯಾಜ್ಯಗಳ ರಾಶಿ ಕಂಡು ಬಂದಿದ್ದು, ದೊಡ್ಡ ಗೋಣಿ ಚೀಲಗಳಲ್ಲಿ ತಂದು ಕೋಳಿಯ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಇಲ್ಲಿ ಹಾಕಲಾಗುತ್ತಿತ್ತು. ಆ ಸಂದರ್ಭದಲ್ಲಿ ಪತ್ರಿಕೆಗಳಲ್ಲೂ ಹಲವು ಬಾರಿ ಈ ಬಗ್ಗೆ ವರದಿ ಪ್ರಕಟಗೊಂಡಿತ್ತು. ಬಳಿಕ ನರಿಮೊಗರು ಗ್ರಾ.ಪಂ ಮುತುವರ್ಜಿ ವಹಿಸಿ ಸ್ಥಳದಲ್ಲಿ ಬೋರ್ಡ್ ಅಳವಡಿಸಿತ್ತಲ್ಲದೇ ತ್ಯಾಜ್ಯ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು.


ಬಳಿಕದ ಬೆಳವಣಿಗೆಯಲ್ಲಿ 2019 ಮಾ.13ರಂದು ಕಪ್ಪು ಬಣ್ಣದ ಆಕ್ಟಿವಾದಲ್ಲಿ ಸ್ಥಳಕ್ಕೆ ಬಂದಿದ್ದ ಮುಕ್ವೆ ಪರಿಸರದ ವ್ಯಕ್ತಿಯೋರ್ವರು ಸದ್ರಿ ಸ್ಥಳದಲ್ಲಿ ತ್ಯಾಜ್ಯವನ್ನು ಎಸೆದು ಹೋಗಿದ್ದು ಆ ಸಂದರ್ಭ ಸಾರ್ವಜನಿಕರು ಆಕ್ಟಿವಾದ ನಂಬರನ್ನು ನೋಟ್ ಮಾಡಿ ನರಿಮೊಗರು ಗ್ರಾ.ಪಂ.ಗೆ ನೀಡಿದ್ದರು. ನಂತರ ಗ್ರಾ.ಪಂ.ನಿಂದ ನಗರ ಠಾಣಾ ಪೊಲೀಸರಿಗೆ ಆಕ್ಟಿವಾ ನಂಬರ್ ಸಹಿತ ದೂರು ನೀಡಿತ್ತು. ನರಿಮೊಗರು ಗ್ರಾ.ಪಂ ಕೂಡಾ ಆ ವ್ಯಕ್ತಿಗೆ ಒಂದು ಸಾವಿರ ರೂ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿತ್ತು. ಆ ಬಳಿಕ ಅಲ್ಲಿ ತ್ಯಾಜ್ಯ ಎಸೆಯುವುದು ಕಡಿಮೆಯಾಗಿತ್ತು.


ಸ್ಥಾಳದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು 2019 ಮಾ.21ರಂದು ಮುಕ್ವೆ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ತ್ಯಾಜ್ಯವನ್ನು ವಿಲೇವಾರಿ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ಮತ್ತೆ ರಾಶಿ ಬಿದ್ದಿದೆ ತ್ಯಾಜ್ಯ…!
ಇದೀಗ ಮುಕ್ವೆ ರಸ್ತೆ ಬದಿ ತ್ಯಾಜ್ಯಗಳ ರಾಶಿ ಕಂಡು ಬಂದಿದೆ. ಮುಖ್ಯವಾಗಿ ರಾತ್ರಿ ವೇಳೆಯೇ ಇಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಏನು ಮಾಡಿದರೂ ಇಲ್ಲಿ ತ್ಯಾಜ್ಯ ಎಸೆಯುವ ಪ್ರಮೇಯ ಮಾತ್ರ ಅಂತ್ಯವಾಗುತ್ತಿಲ್ಲ. ದಿನಗಳೆದಂತೆ ತ್ಯಾಜ್ಯ ರಾಶಿ ಹೆಚ್ಚುತ್ತಲೇ ಇದೆ, ಸ್ಥಳೀಯವಾಗಿ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದ್ದು ರೋಗವನ್ನು ಆಹ್ವಾನಿಸುವಂತಿದೆ. ಬೀದಿ ನಾಯಿಗಳ ಉಪಟಳ ಸ್ಥಳೀಯ ಪರಿಸರದಲ್ಲಿ ಹೆಚ್ಚಾಗಿದೆ. ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರವೇನು ಎಂಬುವುದು ಸ್ಥಳೀಯ ನಿವಾಸಿಗಳ ಪ್ರಶ್ನೆಯಾಗಿದೆ.

ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲವೇ…? ಹೆದ್ದಾರಿ ಬದಿಯಲ್ಲೇ ತ್ಯಾಜ್ಯ ರಾಶಿ ಕಂಡು ಬಂದಿದ್ದರೂ ಅದನ್ನು ವಿಲೇವಾರಿ ಮಾಡುವ ಕೆಲಸಕ್ಕೆ ಸಂಬಂಧಪಟ್ಟ ಯಾರೂ ಹೋಗದೇ ಇರುವುದು ಆಶ್ಚರ್ಯವೇ ಸರಿ. ಹಾಗಾದರೆ ದಿನದಿಂದ ದಿನಕ್ಕೆ ರಾಶಿ ಬೀಳುತ್ತಿರುವ ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಲ್ಪಿಸುವವರು ಯಾರು ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದ್ದು ಸ್ಥಳೀಯಾಡಳಿತವೇ ಏನಾದರೂ ಮಾಡಿ ಇಲ್ಲಿ ತ್ಯಾಜ್ಯ ಎಸೆಯದಂತೆ ಕ್ರಮ ವಹಿಸಬೇಕಾಗಿದೆ ಎಂಬ ಮಾತುಗಳೂ ಕೇಳಿ ಬಂದಿದೆ.

ಕಠಿಣ ಕ್ರಮವಾಗಲಿ:
ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ಎಲ್ಲೆಡೆ ನೀಡಲಾಗುತ್ತಿದ್ದು ಸಾಂಕ್ರಾಮಿಕ ರೋಗಗಳ ಭೀತಿ ಇನ್ನೊಂದೆಡೆ ಕಾಡುತ್ತಿದೆ. ಅದಾಗ್ಯೂ ಸಾಮಾಜಿಕ ಪ್ರಜ್ಞೆ ಇಲ್ಲದವರಂತೆ ಇಲ್ಲಿ ತಂದು ತ್ಯಾಜ್ಯ ಹಾಕುತ್ತಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ಸ್ಥಳೀಯವಾಗಿ ಕೇಳಿ ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.