ಹಿರೇಬಂಡಾಡಿ-ಹೊಸಗದ್ದೆ-ಅಗರಿ ಸೇತುವೆ ನಿರ್ಮಾಣಕ್ಕೆ ಆಗ್ರಹ | ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಹೊಸಗದ್ದೆ ಅಗರಿ ಪರಿಶಿಷ್ಠ ಜಾತಿ ಕಾಲನಿ ಬಳಿ ಹರಿಯುವ ಕಿರು ಹೊಳೆ ಮಧ್ಯದಲ್ಲಿ ಸೇತುವೆ ನಿರ್ಮಿಸುವಂತೆ ಸ್ಥಳೀಯ ನಿವಾಸಿಗಳು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂಧಿಸಿರುವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲಾಖೆಯ ಹಿರಿಯ ಅಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಕಾಲೋನಿ ನಿವಾಸಿ ಬಾಬು ಅಗರಿ ಎಂಬವರು ಮನವಿ ಸಲ್ಲಿಸಿ, “ಕಾಲನಿಯಲ್ಲಿ ಸುಮಾರು ೧೫ ಪರಿಶಿಷ್ಠ ಜಾತಿ ಕುಟುಂಬಗಳು ಮತ್ತು ಸುಮಾರು 25 ಇತರ ಸಮುದಾಯದ ಕುಟುಂಬಗಳು ವಾಸ್ತವ್ಯ ಇರುತ್ತದೆ, ಈ ಕುಟುಂಬಗಳು ತಮ್ಮ ದಿನನಿತ್ಯದ ಅವಶ್ಯಕ ಕೆಲಸ ಕಾರ್ಯಗಳಿಗೆ ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಹೋಗಿ ಬರಲು ಇಲ್ಲಿ ಹರಿಯುವ ಹೊಳೆ ದಾಟಿ ಹೋಗಲು ಕಷ್ಟ ಸಾಧ್ಯವಾಗುತ್ತಿದೆ, ಆದ ಕಾರಣ ಇಲ್ಲಿಗೆ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂಧಿಸಿರುವ ಪುತ್ತೂರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೇತುವೆ ಅಗತ್ಯತೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.