ವಿಟ್ಲ: ವಿಟಿವಿ ಇದರ ನೂತನ ಕಚೇರಿ ವಿಟ್ಲದ ಬೊಬ್ಬೆಕೇರಿಯ ಲ್ಯಾಂಪ್ಸ್ ಸೊಸೈಟಿ ಕಟ್ಟಡದಲ್ಲಿ ಜೂ.1ರಂದು ಶುಭಾರಂಭಗೊಂಡಿತು. ಬಾಲಕೃಷ್ಣ ಕಾರಂತ ಎರುಂಬುರವರು ಪೂಜಾ ವಿಧಿವಿಧಾನ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿಟಿವಿ ಪ್ರಸ್ತುತಪಡಿಸಿದ ಮಕ್ಕಳ ಕೊರೊನಾ ಜಾಗೃತಿ ಅಭಿಯಾನದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀಧರ್ ಶೆಟ್ಟಿ ಗುಬ್ಯ, ಮೋಹನ್ ಭಟ್ ಉರಿಮಜಲು, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಬ್ರಿಜೆಶ್ ನಾಯರ್ ಪಂಡಿತ್ ಹೌಸ್, ಮನ್ಮಥ ಶೆಟ್ಟಿ ಪುತ್ತೂರು, ವಿಟ್ಲ ಪ್ರಭಾರ ಎಸೈ ರಾಜೇಶ್ ಕೆ.ವಿ, ರಶೀದ್ ವಿಟ್ಲ, ದೇವಿಪ್ರಸಾದ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಅರ್ಕೆಚ್ಚಾರ್, ವಿಟಿವಿ ನಿರ್ದೇಶಕರಾದ ರಾಮ್ ದಾಸ್ ಶೆಟ್ಟಿ ವಿಟ್ಲ, ಮಹಮ್ಮದ್ ಅಲಿ ವಿಟ್ಲ, ಕಿರಣ್ ಮೈರ ಹಾಗೂ ಭವ್ಯ ರೈ ಉಪಸ್ಥಿತರಿದ್ದರು.