Home_Page_Advt
Home_Page_Advt
Home_Page_Advt

ಗಲ್ಫ್ ಕನ್ನಡಿಗರ ಸಂಘಟನೆಗಳ ಪ್ರಮುಖರಿಂದ ಸಂಸದ ನಳಿನ್‌ರವರೊಂದಿಗೆ ವಿಡಿಯೋ ಸಂವಾದ

Puttur_Advt_NewsUnder_1
Puttur_Advt_NewsUnder_1
  • ಗಲ್ಫ್ ರಾಷ್ಟ್ರಗಳಿಂದ ಕರ್ನಾಟಕಕ್ಕೆ ವಿಮಾನಯಾನ ಒದಗಿಸಲು ಆಗ್ರಹ

ಪುತ್ತೂರು: ಪ್ರಸ್ತುತ ಗಲ್ಫ್ ರಾಷ್ಟ್ರಗಳಲ್ಲಿರುವ ಕನ್ನಡಿಗರು ಕೋವಿಡ್-19 ನಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗು ಸ್ವದೇಶಕ್ಕೆ ಹಿಂತಿರುಗಲು ಗಲ್ಫ್ ರಾಷ್ಟ್ರಗಳಿಂದ ಕರ್ನಾಟಕಕ್ಕೆ ವಿಮಾನಯಾನವನ್ನು ಒದಗಿಸುವಂತೆ ಗಲ್ಫ್ ಕನ್ನಡಿಗರ ಸಂಘಟನೆಗಳ ಪ್ರಮುಖರು ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ರವರೊಂದಿಗೆ ವಿಡಿಯೋ ಸಂವಾದ ನಡೆಸಿ ಚರ್ಚಿಸಿದರು.

ಕರ್ನಾಟಕ ಸಂಘ ಕತಾರ್‌ನ ಮಾಜಿ ಉಪಾಧ್ಯಕ್ಷ, ತುಳುಕೂಟ ಹಾಗು ಭಂಟರ ಸಂಘ ಕತಾರ್‌ನ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಡಾ. ಎಂ. ರವಿ ಶೆಟ್ಟಿ ಈ ವಿಡಿಯೋ ಸಂವಾದವನ್ನು ಆಯೋಜಿಸಿದ್ದರು. ಕುವೈಟ್‌ನಿಂದ ತುಳುಕೂಟ ಕುವೈಟ್ ಇದರ ಅಧ್ಯಕ್ಷ ರಮೇಶ್ ಎಸ್. ಭಂಡಾರಿ ಮತ್ತು ಕನ್ನಡ ಕೂಟ ಕುವೈಟ್ ಇದರ ಅಧ್ಯಕ್ಷ ರಾಜೇಶ್ ವಿಠ್ಠಲ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಇತರ ಗಲ್ಫ್ ರಾಷ್ಟ್ರಗಳ ಕನ್ನಡ ಸಂಘಟನೆಗಳ ಮುಖ್ಯಸ್ಥರುಗಳಾದ ಸರ್ವೋತಮ ಶೆಟ್ಟಿ, ಎಂ. ಇ. ಮೂಲೂರ್, ಪ್ರವೀಣ್ ಶೆಟ್ಟಿ, ಶಶಿಧರ್ ಶೆಟ್ಟಿ, ಕರುಣಾಕರ್ ರಾವ್, ನಾಗೇಶ್ ರಾವ್, ಜಕಾರಿಯಾ ಬಜ್ಪೆ, ಸಂತೋಷ ಶೆಟ್ಟಿ, ಪ್ರದೀಪ್ ಶೆಟ್ಟಿ, ಮೊಹಮ್ಮದ್ ಮನ್ಸೂರ್, ಮತ್ತು ಅವೀಕ್ಷಿತ್ ರೈ ಈ ಚರ್ಚೆಯಲ್ಲಿ ಭಾಗವಹಿಸಿ ಪ್ರತಿ ರಾಜ್ಯಕ್ಕೂ ವಿಮಾನದ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು ಕರ್ನಾಟಕಕ್ಕೆ ಮಾತ್ರ ಇದುವರೆಗೂ ದುಬೈನಿಂದ ೨ ವಿಮಾನಗಳ ವ್ಯವಸ್ಥೆಯಾಗಿದೆ. ಇತರ ಗಲ್ಫ್ ರಾಷ್ಟ್ರಗಳಾದ ಕುವೈಟ್, ಕತಾರ್, ಬಹರೈನ್, ಸೌದಿ ಅರೇಬಿಯದಿಂದ ಇದುವರೆಗೂ ಯಾವುದೇ ವಿಮಾನದ ವ್ಯವಸ್ಥೆ ಆಗಿರುವುದಿಲ್ಲ ಮತ್ತು ಹಲವಾರು ಕನ್ನಡಿಗರು ಸ್ವದೇಶಕ್ಕೆ ಮರಳಲು ಈಗಾಗಲೇ ಭಾರತೀಯ ರಾಯಭಾರ ಕಚೇರಿಯಡಿಯಲ್ಲಿ ನೊಂದಣಿ ಮಾಡಿದ್ದಾರೆ. ಈ ವಿಷಯದ ಬಗ್ಗೆ ಈಗಾಗಲೇ ಕರ್ನಾಟಕ ಮುಖ್ಯಮಂತಿ ಯಡಿಯೂರಪ್ಪ, ಸದಾನಂದ ಗೌಡರ ಜೊತೆ ಹಾಗು ಇನ್ನಿತರ ಸಂಬಂಧಪಟ್ಟ ಗಣ್ಯರೊಡನೆ ಚರ್ಚಿಸಲಾಗಿದೆ ಮತ್ತು ಎಲ್ಲರು ನಮ್ಮ ಮನವಿಯನ್ನು ಸ್ವೀಕರಿಸಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ವಿಮಾನ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ ಎಂದು ಸಂಘಟನೆಯ ಮುಖ್ಯಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ. ಸರ್ಕಾರದ ವತಿಯಿಂದ ವಿಮಾನ ವ್ಯವಸ್ಥೆ ಮಾಡುವುದಕ್ಕೆ ಏನಾದರು ಅಡಚಣೆಗಳಿದ್ದರೆ ಇತರ ಖಾಸಗಿ ಸಂಸ್ಥೆಗಳು ತಮ್ಮ ವಿಮಾನ ಸೇವೆಯನ್ನು ನೀಡುವುದಾಗಿ ಹೇಳಿದೆ. ಆದರೆ ಅವರಿಗೆ ಭಾರತ ಸರ್ಕಾರದಿಂದ ಅನುಮತಿ ಬೇಕಾಗಿದೆ ದಯವಿಟ್ಟು ಅವರಿಗೆ ಅನುಮತಿ ಕೊಡಬೇಕಾಗಿ ವಿನಂತಿಸಿಕೊಂಡರು .

ಎಲ್ಲರ ಮನವಿಯನ್ನು ಆಲಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ರವರು ಎಲ್ಲ ವಿಷಯಗಳನ್ನು ಸರ್ಕಾರದೊಂದಿಗೆ ಚರ್ಚಿಸಿ ವಿಮಾನದ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಈಗಾಗಲೇ ಗಲ್ಫ್ ರಾಷ್ಟ್ರಗಳಿಂದ ಭಾರತದ ಹಲವು ರಾಜ್ಯಗಳಿಗೆ ಅಂತಾರಾಷ್ಟ್ರೀಯ ವಿಮಾನ ವ್ಯವಸ್ಥೆ ಮಾಡಲಾಗಿದೆ ಮತ್ತು ನಿಗದಿತ ವಿಮಾನ ನಿಲ್ದಾಣದಿಂದ ತಮ್ಮ ಊರಿಗೆ ತಲುಪಲು ದೇಶಿಯ ವಿಮಾನಗಳ ಹಾರಾಟವನ್ನು ಆರಂಭಿಸಲಾಗಿದೆ. ಇದುವರೆಗೂ ಒಇಂ ಈ ವಿಶೇಷ ವಿಮಾನಯಾನದ ಜವಾಬ್ದಾರಿಯನ್ನು ಹೊಂದಿತ್ತು ಆದರೆ ಇನ್ನು ಮುಂದೆ ಂvಚಿಣoಟಿ mಟಿಣಡಿಥಿ ಈ ಜವಾಬ್ದಾರಿಯನ್ನು ಹೊತ್ತುಕೊಂಡು ಕಾರ್ಯಗತ ಮಾಡುತ್ತದೆ. ಈಗಾಗಲೇ ಒಇಂ ಮತ್ತು ರಾಜ್ಯ ಸರ್ಕಾರದೊಂದಿಗೆ ಈ ವಿಷಯವನ್ನು ಚರ್ಚಿಸಿದ್ದು ಅತ್ಯಂತ ತ್ವರಿತವಾಗಿ ಪ್ರಕ್ರಿಯೆಯನ್ನು ಮಾಡಲು ಕೇಳಿಕೊಳ್ಳಲಾಗಿದೆ. ಖಾಸಗಿ ವಿಮಾನಗಳಿಗೆ ಅನುಮತಿ ಕೊಡಲು ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ. ಪರ ರಾಜ್ಯಗಳಿಂದ ಹಲವಾರು ಜನ ಬರುತ್ತಿದ್ದು ಕ್ವಾರಂಟೈನ್ ವ್ಯವಸ್ಥೆಯ ಬಗ್ಗೆಯೂ ಹೆಚ್ಚಿನ ಒತ್ತು ಕೊಡಬೇಕಾಗಿದೆ ಮತ್ತು ಕ್ವಾರಂಟೈನ್ ವ್ಯವಸ್ಥೆಯು ಜಾಸ್ತಿ ಮಾಡಬೇಕಾದುದರಿಂದ ಸದ್ಯದ ಮಟ್ಟಿಗೆ ನೆರೆ ರಾಜ್ಯದವರಿಗೆ ಠಿಚಿ ವಿತರಣೆಯನ್ನು ನಿಲ್ಲಿಸಲಾಗಿದೆ ಮತ್ತು ಪ್ರಸ್ತುತ ೫೨೫೦ ಕ್ಕೂ ಅಧಿಕ ಜನ ಕ್ವಾರಂಟೈನಲ್ಲಿರುವುದಾಗಿ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.