HomePage_Banner
HomePage_Banner
HomePage_Banner

ನಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯದ ಕಾಳಜಿಗಾಗಿ ಮಾಸ್ಕ್ ಧರಿಸಿ

Puttur_Advt_NewsUnder_1
Puttur_Advt_NewsUnder_1
  • ನಗರಸಭೆಯಿಂದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆಯಲ್ಲಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರು ಜಾಗೃತರಾಗಬೇಕೆಂಬ ಉದ್ದೇಶದಿಂದ ಪುತ್ತೂರು ನಗರಸಭೆ ದಾನಿಗಳ ಮೂಲಕ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಲು ಮುಂದಾಗಿದ್ದು, ಜೂ. 2ರಂದು ಪುತ್ತೂರು ಪೊಪ್ಯೂಲರ್ ಸ್ವೀಟ್ಸ್ ಕೊಡಮಾಡಿದ ಸುಮಾರು 2ಸಾವಿರ ಉಚಿತ ಮಾಸ್ಕ್‌ಗಳ ವಿತರಣೆಗೆ ಶಾಸಕ ಸಂಜೀವ ಮಠಂದೂರು ಮಾಸ್ಕ್ ದರ್ಬೆಯಲ್ಲಿ ಚಾಲನೆ ನೀಡಿದರು.

ನಮ್ಮ ಆರೋಗ್ಯದ ಜೊತೆ ಇತರ ಆರೋಗ್ಯದ ಕಾಳಜಿಗಾಗಿ ಮಾಸ್ಕ್ ಧರಿಸಿ :
ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ ದೇಶದ ಪ್ರಧಾನಿ ಕೊರೋನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನತಾ ಕರ್ಪ್ಯೂ ಜಾರಿಗೊಳಿಸಿದರು. ಇದರ ಮೂಲ ಉದ್ದೇಶ ನಾವು ಜಾಗೃತರಾಗಿರಬೇಕು. ನಮ್ಮ ರಕ್ಷಣೆ ನಾವೇ ಮಾಡಬೇಕು. ಇನ್ನೊಬ್ಬರಿಂದ ಅಪೇಕ್ಷೆ ಪಡುವಂತಿಲ್ಲ. ಹಾಗಾಗಿ ಕೊರೋನಾ ಎಂಬ ಮಹಾಮಾರಿ ಒಬ್ಬರಿಂದೊಬ್ಬರಿಗೆ ಹರಡುವ ಗುಣಲಕ್ಷಣವನ್ನು ಅರಿತು ಕೊಂಡು ನಾವು ನಮ್ಮ ರಕ್ಷಣೆ ಮಾಡಬೇಕು. ವಿಶ್ವ ರೋಗ್ಯ ಸಂಸ್ಥೆ ಮಾರ್ಗಸೂಚಿಯಂತೆ ನಾವು ಮುಖಕ್ಕೆ ಮಾಸ್ಕ್ ಹಾಕಿ , ಮೂರು ಮೀಟರ್ ಅಂತರದಲ್ಲಿ ಅಗತ್ಯದ ಕೆಲಸ ಮಾಡಬೇಕು. ಅನಗತ್ಯ ಸಂಪರ್ಕಕ್ಕೆ ಎಡೆ ಮಾಡಲು ಅವಕಾಶ ನೀಡಬಾರದು ಎಂದ ಅವರು ನಮಗೆ ಆರೋಗ್ಯ ಇದೆ ನಮ್ಮಿಂದ ಮತ್ತೊಬ್ಬನಿಗೆ ಹರಡುವುದಿಲ್ಲ. ಮತ್ತೊಬ್ಬರಿಂದ ನಮಗೆ ಬರುವುದಿಲ್ಲ. ಎಂಬ ಮೊಂಟು ಧೈರ್ಯ ಮಾಡಬೇಡಿ. ಯಾರಿಗೆ ಕೊರೋನಾ ಇದೆ ಯಾರಿಗೆ ಕೊರೋನಾ ಇಲ್ಲ ಎಂದು ಹೇಳಿ ಪತ್ತೆ ಹಚ್ಚುವ ಕೆಲಸ ನಾವು ಮಾಡುವುದು ಬೇಡ. ನಮ್ಮ ಆರೋಗ್ಯದ ಬಗ್ಗೆ ಕಾಳಜಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಬಗ್ಗೆಯೂ ನಮಗೆ ಕಾಳಜಿ ಇರಬೇಕು. ಈ ನಿಟ್ಟಿನಲ್ಲಿ ನಾನು ಮಾಸ್ಕ್ ಧರಿಸಬೇಕು. ಇನ್ನೊಬ್ಬರಿಗೂ ಮಾಸ್ಕ್ ಧರಿಸಲು ಹೇಳಬೇಕು ಎಂದರು.

ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ:
ಪೌರಾಯುಕ್ತೆ ರೂಪಾ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊವೀಡ್-೧೯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಾನಿಗಳ ಸಹಕಾರದೊಂದಿಗೆ ನಗರಸಭೆ ವ್ಯಾಪ್ತಿಯಲ್ಲಿ ಉಚಿತವಾಗಿ ಮಾಸ್ಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರು ಮುಂದಿನ ದಿನಗಳಲ್ಲಿ ಕಟ್ಟು ನಿಟ್ಟಾಗಿ ಮಾಸ್ಕ್ ಧರಿಸಬೇಕೆಂದು ವಿನಂತಿಸಿದರು. ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು ಟಿ, ನಗರಸಭೆ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಭಾಮಿ ಅಶೋಕ್ ಶೆಣೈ, ಜೀವಂಧರ್ ಜೈನ್, ಗೌರಿ ಬನ್ನೂರು, ವಿದ್ಯಾ ಆರ್ ಗೌರಿ, ಶಿವರಾಮ ಸಪಲ್ಯ, ಪದ್ಮನಾಭ ನಾಕ್, ಪ್ರೇಮಾ ರಂಜನ್, ವಸಂತ ಕಾರೆಕ್ಕಾಡು, ಸಂತೋಷ್ ಬೊಳುವಾರು, ನವೀನ್ ಪೆರಿಯತ್ತೋಡಿ, ದೀಕ್ಷಾ ಪೈ, ಶಶಿಕಲಾ ಸಿ.ಎಚ್, ಶೀನಪ್ಪ ನಾಯ್ಕ್, ಮನೋಹರ್ ಕಲ್ಲಾರೆ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ಪೊಪ್ಯೊಲರ್ ಸ್ವೀಟ್ಸ್ ಮಾಲಕ ನರಸಿಂಹ ಕಾಮತ್ ಅವರ ಪುತ್ರರಾದ ನಾಗೇಂದ್ರ ಕಾಮತ್ ಮತ್ತು ನರೇಂದ್ರ ಕಾಮತ್, ರೋಟರಿಕ್ಲಬ್‌ನ ವಾಮನ್ ಪೈ, ಸುರೇಶ್ ಆಳ್ವ, ಬಿ.ಎಮ್.ಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಗೌಡ, ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಸಚಿನ ಶೆಣೈ, ಜೀವನ್, ವಿಶ್ವನಾಥ ಕುಲಾಲ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಶ್ವೇತಾ ಕಿರಣ್, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದರ್ಬೆ ಆಟೋ ರಿಕ್ಷಾ ಚಾಲಕರು, ಸಾರ್ವಜನಿಕರು, ಸ್ವಚ್ಛತಾ ಸಿಬಂದಿಗಳಿಗೆ ಸಾಂಕೇತಿವಾಗಿ ಮಾಸ್ಕ್ ವಿತರಣೆ ಮಾಡಲಾಯಿತು.

ಮಾಸ್ಕ್ ಧರಿಸದವರಿಗೆ ದಂಡ
ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸದವರಿಗೆ ಕಟ್ಟುನಿಟ್ಟಾಗಿ ದಂಡ ವಿಧಿಸುವ ಆದೇಶ ನೀಡಿದ್ದಾರೆ. ನಗರದಲ್ಲಿ ರೂ. ೨೦೦ ಗ್ರಾಮಾಂತರದಲ್ಲಿ ರೂ. 100 ದಂಡ ವಿಧಿಸಲಾಗುತ್ತದೆ. ನಾವು ದಂಡ ಹಾಕಿಸಿಕೊಂಡು ಜೀವನ ನಿರ್ವಹಿಸುವ ಬದಲು ದಂಡ ಹಾಕಿಸದೆ ಇತರರಿಗೆ ಮಾದರಿಯಾಗುವ, ಇನ್ನೊಬ್ಬರು ಜೀವಕ್ಕೆ ಬೆಲೆ ಕೊಡುವ – ಸಂಜೀವ ಮಠಂದೂರು, ಶಾಸಕರು ಪುತ್ತೂರು

ಸಿಹಿಯ ಜೊತೆ ಆರೋಗ್ಯದ ಕಾಳಜಿ
ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಪ್ಯೂಲರ್ ಸ್ವೀಟ್ಸ್ ಸಂಸ್ಥೆ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಲು ಸಹಕಾರ ನೀಡಿದೆ. ಕೇವಲ ಸಿಹಿ ವಿತರಣೆ ಮಾಡುವುದು ಮಾತ್ರವಲ್ಲದೆ ಜನರ ಆರೋಗ್ಯದ ಬಗ್ಗೆಯೂ ಕಾಳಜಿ ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರಿನ ನಾಗರಿಕರು ನೂರಕ್ಕೆ ನೂರು ಕೊರೋನಾದಿಂದ ದೂರ ಇದ್ದು, ಜಾಗೃತರಾಗಬೇಕು – ಸಂಜೀವ ಮಠಂದೂರು, ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.