Home_Page_Advt
Home_Page_Advt
Home_Page_Advt

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಣ ಪ್ರಭಾವ ಹಿಂದಾರು, ಪುತ್ತಿಲ ಕುಟುಂಬದಿಂದ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ 90 ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮನೋಭೂಮಿಕೆಯಿಂದ ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಂಧರ್ಭಿಕ ಸನ್ನಿವೇಶದಲ್ಲಿ ಸಹಕಾರ ನೀಡುತ್ತಾ ಸ್ವಯಂ ಸೇವಕರಿಗೆ ಈ ಸಮಾಜದಲ್ಲಿ ತಾವು ಹೇಗಿರಬೇಕೆಂಬುದನ್ನು ತೋರಿಸಿ ಕೊಟ್ಟಿದೆ. ಅದರ ಫಲವಾಗಿ ಹಿಂದಾರು ಮತ್ತು ಪುತ್ತಿಲ ಕುಟುಂಬದಿಂದ ಕಂಷ್ಟಕ್ಕೆ ಒಳಗಾದವರಿಗೆ ಕಿಟ್ ವಿತರಣೆ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮಾಂತರ ಸಂಘ ಚಾಲಕ ಸುಧಾಕರ್ ರೈ ಅವರು ಹೇಳಿದರು.

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಪರಿಸರದಲ್ಲಿ ಸಂಕಷ್ಟಕ್ಕೆ ಒಳಾಗದ ಸಾರ್ವಜನಿಕರಿಗೆ ಮೇ.31 ರಂದು ಹಿಂದಾರು ಮತ್ತು ಪುತ್ತಿಲ ಕುಟುಂಬದಿಂದ ನೀಡುವ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಘದ ಶಿಕ್ಷಣದ ಪರಿಣಾಮ ಸ್ವಯಂ ಸೇವಕರು ತಮ್ಮ ಗಳಿಕೆಯಲ್ಲಿ ಒಂದು ಪಾಲನ್ನು ಸಮಾಜಕ್ಕೆ ನೀಡುತ್ತಾ ಆದರ್ಶಪ್ರಾಯರಾಗಿರುವುದನ್ನು ಕಂಡಿದ್ದೇವೆ. ಈ ಭಾಗದಲ್ಲಿ ಸುಮಾರು ೨೫೦ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ನೀಡುವುದರ ಮೂಲಕ ಸಮಾಜದಲ್ಲಿ ತಾವು ಹೇಗಿರಬೇಕೆಂದು ಹಿಂದಾರು ಮತ್ತು ಪುತ್ತಿಲ ಕುಟುಂಬದವರು ತೋರಿಸಿಕೊಟ್ಟಿದ್ದಾರೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕಾರ್ಯಕ್ರಮವನ್ನು ಹಿಂದಾರು ಮತ್ತು ಪುತ್ತಿಲ ಕುಟುಂಬದವರು ಮಾಡಿದ್ದಾರೆ ಎಂದರು. ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹೇಶ್ಚಂದ್ರ ಸಾಲಿಯಾನ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಮಾಜಿ ಸದಸ್ಯ ಬಾಲಚಂದ್ರ ಗೌಡ, ಪಂಚಾಯತ್ ಸದಸ್ಯ ಬಾಲಕೃಷ್ಣ ಪೂಜಾರಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ಯ, ಸುಬ್ರಹ್ಮಣ್ಯ ಆಚಾರ್, ವಸಂತ ರೈ, ಜಯರಾಮ ಆಚಾರ್, ಶ್ರೀಧರ್ ನಾಯ್ಕ್ ಪುತ್ತಿಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.