Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ ಆಟೋ ನಿಲ್ದಾಣ ಅಭಿವೃದ್ಧಿಗೆ 4.5 ಲಕ್ಷ ಮಂಜೂರು | ಇಂಟರ್‌ಲಾಕ್ ಕಾಮಗಾರಿಗೆ ಶಾಸಕರಿಂದ ಚಾಲನೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯ ಅಟೋ ರಿಕ್ಷಾ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 4.5 ಲಕ್ಷ ರೂಪಾಯಿ ಅನುದಾನ ಮಂಜೂರು ಆಗಿದ್ದು, ಅದರಂತೆ ನಿಲ್ದಾಣಕ್ಕೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.

ಶಾಸಕ ಸಂಜೀವ ಮಠಂದೂರುರವರು ಜೂ. 2ರಂದು ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ರಿಕ್ಷಾ ಚಾಲಕರು ಇಲ್ಲಿನ ಸಮಸ್ಯೆ ಬಗ್ಗೆ ತಿಳಿಸಿ, ಮನವಿ ಸಲ್ಲಿಸಿದ್ದರು. ಕಾಮಗಾರಿ ಒಳ್ಳೆಯ ಗುಣಮಟ್ಟದಲ್ಲಿ ನಡೆದು ಉತ್ತಮ ರೀತಿಯಲ್ಲಿ ಸದುಪಯೋಗ ಆಗಲಿ ಎಂದು ಶುಭ ಹಾರೈಸಿದರು.

ನೇತ್ರಾವತಿ ರಿಕ್ಷಾ ಚಾಲಕರ ಸಂಘದ ಮನವಿಗೆ ಸ್ಪಂಧನೆ:
ರಿಕ್ಷಾ ನಿಲ್ದಾಣದಲ್ಲಿ ಹೊಂಡ ಗುಂಡಿ ನಿರ್ಮಾಣವಾಗಿ ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿಕೊಂಡು ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಭಾದೆ ಕಾಡುತ್ತಿರುವ ಬಗ್ಗೆ ತಿಳಿಸಲಾಗಿ ನಿಲ್ದಾಣಕ್ಕೆ ಇಂಟರ್‌ಲಾಕ್ ಅಳವಡಿಸಿಕೊಡುವ ಬಗ್ಗೆ ನೇತ್ರಾವತಿ ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಸದಸ್ಯರ ನಿಯೋಗ ಕೆಲ ತಿಂಗಳ ಹಿಂದೆ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಆಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕಾಮಗಾರಿಗೆ ಚಾಲನೆ ಕಾರ್‍ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುನಿಲ್ ಕುಮಾರ್ ದಡ್ಡು, ಸುರೇಶ್ ಅತ್ರಮಜಲು, ಚಂದ್ರಶೇಖರ ಮಡಿವಾಳ, ನೇತ್ರಾವತಿ ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಕೆ.ಹೆಚ್. ಅಬ್ದುಲ್ ಲತೀಫ್ ಕರಾಯ, ಪದಾಧಿಕಾರಿಗಳಾದ ಲೋಕೇಶ್, ಅಬೂಬಕ್ಕರ್, ಹನೀಫ್ ಆತ್ಮೀಯ, ಸುಲೈಮಾನ್ ಬಂಡಾಡಿ, ಉಮೇಶ್ ಬಿಳಿಯೂರು, ಗೋಪಾಲ, ಆಶಿಫ್ ಕೊಲ, ಬಿ.ಎಂ.ಎಸ್. ಅಟೋ ಚಾಲಕ-ಮಾಲಕರ ಸಂಘದ ಹರೀಶ್ ಪಟ್ಲ, ಗುತ್ತಿಗೆದಾರ ಎಸ್.ಕೆ. ಆನಂದ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.