Home_Page_Advt
Home_Page_Advt
Home_Page_Advt

ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಿಗೆ ಮಂಗಳೂರಿನಿಂದ ಶ್ರಮಿಕ್ ರೈಲು | ತಾಲೂಕು ಆಡಳಿತ ನೇತೃತ್ವ 111 ಮಂದಿ ಮಂಗಳೂರು ರೈಲು ನಿಲ್ದಾಣಕ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶದ ನಾನಾ ಭಾಗಗಳಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಶ್ರಮಿಕ್ ರೈಲಿನ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಿದ್ದು, ಈಗಾಗಲೇ ಪುತ್ತೂರಿನಿಂದ ಬಿಹಾರ, ಉತ್ತರ ಪ್ರದೇಶಕ್ಕೆ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಗಿದ್ದು, ಇದೀಗ ಪ್ರಥಮ ಬಾರಿಗೆ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಪುತ್ತೂರು ತಾಲೂಕು ಆಡಳಿತ ಕೈಗೊಂಡಿದ್ದು, ಜೂ.2ರಂದು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.


ಮಂಗಳೂರಿನಿಂದ ರಾತ್ರಿ ವೇಳೆ ಪಶ್ಚಿಮ ಬಂಗಾಳಕ್ಕೆ ಶ್ರಮಿಕ್ ರೈಲು ಸಂಚರಿಸಲಿದ್ದು, ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದ್ದು ಈ ನಿಟ್ಟಿನಲ್ಲಿ ಪುತ್ತೂರಿನಿಂದ ಈಗಾಗಲೇ ತಾಲೂಕು ಆಡಳಿತಕ್ಕೆ ವರದಿ ಕೊಟ್ಟಂತೆ ಒಟ್ಟು 111 ಮಂದಿ ಕಾರ್ಮಿಕರನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಯಿತು. ಸಂಜೆ ವೇಳೆ ಕಾರ್ಮಿಕರನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಂಚಾಕ್ಷಾರಿ ಸಭಾಂಗಣದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಅದನ್ನು ದಾಖಲಿಸಿ ಬಳಿಕ ಕೆಎಸ್‌ಆರ್‌ಟಿಸಿ 5 ಬಸ್‌ಗಳಲ್ಲಿ ಮಂಗಳೂರು ರೈಲು ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು. ಅಲ್ಲಿಂದ ರಾತ್ರಿ ವೇಳೆ ಪಶ್ಚಿಮಬಂಗಾಳಕ್ಕೆ ಶ್ರಮಿಕ್ ರೈಲಿನಲ್ಲಿ ಕಾರ್ಮಿಕರು ತೆರಳಲಿದ್ದಾರೆ.

ಉಳಿದ ಕಾರ್ಮಿಕರಿಗೂ ಮುಂದಿನ ಸರದಿಯಲ್ಲಿ ಅವಕಾಶ
ಜೂ.2ರಂದು ಉತ್ತರ ಪ್ರದೇಶಕ್ಕೆ ಬೆಂಗಳೂರಿನಿಂದ ರೈಲಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಲಾಖೆಯ ಕಮ್ಯುನಿಕೇಶನ್ ಗ್ಯಾಪ್‌ನಿಂದಾಗಿ ಪುತ್ತೂರಿನ ವಲಸೆ ಕಾರ್ಮಿಕರನ್ನು ಬಸ್‌ನಲ್ಲಿ ಬೆಂಗಳೂರಿಗೆ ಹೋಗುವ ಬದಲು ಮಂಗಳೂರಿಗೆ ತೆರಳಿದ್ದರಿಂದ ಅವರು ಮತ್ತೆ ಹಿಂದಕ್ಕೆ ಬಂದಿದ್ದರು. ಇದಿಗ ಮುಂದಿನ ಸರದಿಯಲ್ಲಿ ಉಳಿದ ಕಾರ್ಮಿಕರಿಗೂ ಊರಿಗೆ ತೆರಳುವ ಅವಕಾಶ ಮಾಡಿಕೊಡಲಾಗುವುದು – ರಮೇಶ್ ಬಾಬು ತಹಸೀಲ್ದಾರ್ ಪುತ್ತೂರು

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.