Home_Page_Advt
Home_Page_Advt
Home_Page_Advt

ಜೂ.5: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿ, ಪುತ್ತೂರು ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ – ಪ್ರಾರಂಭ

Puttur_Advt_NewsUnder_1
Puttur_Advt_NewsUnder_1
  •  ರೂ.140 ಕೋಟಿಗಿಂತಲೂ ಮಿಕ್ಕಿ ವ್ಯವಹಾರ
  • ಹಿಂದಿನ ಕಚೇರಿಯಲ್ಲಿ ಎಂದಿನಂತೆ ವ್ಯವಹಾರ

ಪುತ್ತೂರು: ಇಲ್ಲಿನ ಒಕ್ಕಲಿಗ ಗೌಡ ಸೇವಾ ಸಂಘ ಇದರ ಪ್ರಾಯೋಜಕತ್ವದಲ್ಲಿ ಪ್ರಾರಂಭಗೊಂಡಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಕೇಂದ್ರ ಕಚೇರಿ ಮತ್ತು ಪುತ್ತೂರು ಶಾಖೆಯು ಜೂ.5ರಂದು ಎಪಿಎಂಸಿ ರಸ್ತೆ ಮಣಾಯಾರ್ಚ್ ಸಂಕೀರ್ಣದ ಸ್ವಂತ ಕಟ್ಟಡದಲ್ಲಿ ಪ್ರಾರಂಭಗೊಳ್ಳಲಿದೆ. 

ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಶಿವರಾಮ ಹೆಚ್.ಡಿ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಥೆ ಉದ್ಘಾಟನೆ ಗೊಳ್ಳಲಿದೆ. ಸರಕಾರ ಸೂಚನೆಯಂತೆ ಸಾಮಾಜಿಕ ಅಂತರ ಕಾಯ್ದು ಕೊಂಡು ನಡೆಯಲಿರುವ ಸರಳ ಕಾರ್ಯಕ್ರಮವನ್ನು ಎಲ್ಲರೂ ಗಮನದಲ್ಲಿ ಇಟ್ಟು ಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ವಿನಂತಿಸಿದ್ದಾರೆ.

ರೂ.೧೪೦ ಕೋಟಿಗಿಂತಲೂ ಮಿಕ್ಕಿ ವ್ಯವಹಾರ
೨೦೦೨ರಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದ ಕಟ್ಟಡದಲ್ಲಿ ಪ್ರಾರಂಭಗೊಂಡ ಸಹಕಾರ ಸಂಘವು ಪುತ್ತೂರು, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ ಶಾಖೆಗಳಲ್ಲಿ ಸುಮಾರು ೫,೫೦೦ ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಕಳೆದ ಅವಧಿಯಲ್ಲಿ ರೂ. ೧೪೦ ಕೋಟಿಗಿಂತಲೂ ಮಿಕ್ಕಿ ವ್ಯವಹಾರಗಳನ್ನು ಮಾಡಿ ಸುಮಾರು ರೂ. ೬೦ಲಕ್ಷ ಲಾಭ ಪಡೆದು ಕೊಂಡು ಶೇ.೧೫.೫ ಡಿವಿಡೆಂಡನ್ನು ನೀಡಲಾಗಿದೆ. ಶೀಘ್ರದಲ್ಲೇ ಆಲಂಕಾರಿನಲ್ಲಿ ನೂತನ ೬ನೇ ಶಾಖೆ ಪ್ರಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮತ್ತು ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಅವರು ತಿಳಿಸಿದ್ದಾರೆ.

ಹಿಂದಿನ ಕಚೇರಿಯಲ್ಲಿ ಎಂದಿನಂತೆ ವ್ಯವಹಾರ:
ಆಸ್ತಿ ಖರೀದಿ, ಆಸ್ತಿ ಅಡವು, ಮನೆ ನಿರ್ಮಾಣ, ವಾಹನ ಖರೀದಿ ಸಾಲ, ವ್ಯಾಪಾರ ಸಾಲ, ಚಿನ್ನಾಭರಣ ಅಡವು, ವೇತನ ಆಧಾರಿತ ಸಾಲ ಹೀಗೆ ವಿವಿಧ ರೀತಿಯ ಸಾಲಗಳನ್ನು ಆಕರ್ಷಕ ಬಡ್ಡಿಯಲ್ಲಿ ನೀಡಲಾಗುತ್ತಿದ್ದು, ಠೇವಣಿಗಳಿಗೆ ಕೂಡಾ ಆಕರ್ಷಕ ಬಡ್ಡಿಯನ್ನು ನೀಡಲಾಗುತ್ತದೆ. ಇದೀಗ ಸದ್ರಿ ಸಂಸ್ಥೆಯ ಕೇಂದ್ರ ಕಚೇರಿ ಮತ್ತು ಪುತ್ತೂರು ಶಾಖೆಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿ ವ್ಯವಹಾರವನ್ನು ನಡೆಸಲಿದೆ. ಮಹಾಲಿಂಗೇಶ್ವರ ದೇವಳದ ಸಭಾ ಭವನದಲ್ಲಿ ಪ್ರಾರಂಭಗೊಂಡ ವ್ಯವಹಾರವು ಈ ಹಿಂದಿನಂತೆ ಅದೇ ಕಟ್ಟಡದಲ್ಲಿ ಮುಂದುವರಿಯಲಿದ್ದು, ಎಲ್ಲಾ ಸೇವೆಗಳು ಕೂಡಾ ಲಭ್ಯವಿರುತ್ತದೆ. ಗ್ರಾಹಕ ಬಂಧುಗಳು ಈ ಹಿಂದಿನಂತೆ ಸಹಕರಿಸುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಧಾಕರ್ ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.