Home_Page_Advt
Home_Page_Advt
Home_Page_Advt

ಕೆಮ್ಮಾಯಿ: ಔಷಧಿ ಸಿಂಪಡಿಕೆ ವೇಳೆ ಅಡಿಕೆ ಮರದಿಂದ ಬಿದ್ದು ಕೂಲಿ ಕಾರ್ಮಿಕ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಔಷಧಿ ಸಂಪಡಿಕೆ ವೇಳೆ ಅಡಿಕೆ ಮರದಿಂದ ಆಕಸ್ಮಿಕವಾಗಿ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಜೂ.2ರಂದು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಸಮೀಪ ನಡೆದಿದೆ.
ಬನ್ನೂರು ಗ್ರಾಮದ ನೀರ್ಪಾಜೆ ದಿ.ಮಾಣಿ ಎಂಬವರ ಪುತ್ರ ಉಮೇಶ್(37ವ)ರವರು ಅಡಿಕೆ ಮರದಿಂದ ಬಿದ್ದು ಮೃತಪಟ್ಟವರು. ಬನ್ನೂರು, ಕೆಮ್ಮಾಯಿ ಪರಿಸರದಲ್ಲಿ ಅಡಿಕೆ ತೆಗೆಯುವ, ಔಷಧಿ ಸಿಂಪಡಿಸುವ, ತೆಂಗಿನ ಕಾಯಿ ಕೀಳುವ ಕಾಯಕದಲ್ಲೇ ನಿರತರಾಗಿದ್ದ ಉಮೇಶ್ ಅವರು ಜೂ. 2ರಂದು ಕೆಮ್ಮಾಯಿ ಪೊಸಳಿಕೆ ಎಂಬಲ್ಲಿ ಅಡಿಕೆ ತೋಟದಲ್ಲಿ ಅಡಿಕೆ ಮರಗಳಿಗೆ ಔಷಧಿ ಸಿಂಪಡಣೆ ಮಾಡುವ ಕೆಲಸದಲ್ಲಿ ನಿರತರಾಗಿದ್ದ ವೇಳೆ ಆಕಸ್ಮಿಕವಾಗಿ ಅಡಿಕೆ ಮರದಿಂದ ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಆಗಲೇ ಅವರು ಮೃತಪಟ್ಟಿದ್ದರು. ಮೃತರ ಪತ್ನಿ ಅನಿತಾ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಅನಿತಾ, ಮಕ್ಕಳು ಹಾಗೂ ಸಹೋದರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.